ಗಂಡನ ಹೆಣ ಹಾಕಲು ಸಾಥ್ ಕೊಟ್ಟಿದ್ದಳು ತಂಗಿ..! ಹೆಣ ಹಾಕಿ ಹೇಗೆಲ್ಲಾ ನಾಟಕ ಮಾಡಿದ್ಲು ಗೊತ್ತಾ..?

ಗಂಡನ ಹೆಣ ಹಾಕಲು ಸಾಥ್ ಕೊಟ್ಟಿದ್ದಳು ತಂಗಿ..! ಹೆಣ ಹಾಕಿ ಹೇಗೆಲ್ಲಾ ನಾಟಕ ಮಾಡಿದ್ಲು ಗೊತ್ತಾ..?

Published : Oct 20, 2023, 03:32 PM IST

ಅಕ್ಕ ತಂಗಿ ಸೇರಿ ಅವನ ಕತ್ತು ಹಿಸುಕಿದ್ರು..!
3ನೇ ಮದುವೆಯಾಗಿದಕ್ಕೆ ಕೊಂದೇ ಬಿಟ್ಟರು..!
ಗಂಡನಿಗೆ ಮೂಟೆ ಕಟ್ಟಿದಳು ಖತರ್ನಾಕ್ ಲೇಡಿ

ಅದು ಬಿಹಾರದಿಂದ ಬೆಂಗಳೂರಿಗೆ ಬಂದು ನೆಲಸಿದ್ದ ಕುಟುಂಬ. ಗಂಡ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ ಹೆಂಡತಿ ಕೂಲಿ ಕೆಲಸಕ್ಕೆ ಹೋಗ್ತಿದ್ಲು. ಮದುವೆಯಾಗಿ ಮೂರು ವರ್ಷವಾಗಿದ್ದ ಆ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ರು. ಆದ್ರೆ ಹೀಗಿರುವಾಗ್ಲೇ ಆವತ್ತೊಂದು ದಿನ ಗಂಡ ಮಿಸ್ಸಿಂಗ್ ಆಗಿಬಿಟ್ಟಿದ್ದ. ಹೆಂಡತಿ ಅವನನ್ನ ಹುಡುಕಬಾರದ ಜಾಗವನ್ನೆಲ್ಲಾ ಹುಡುಕಾಡಿದ್ಲು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ ಆದ್ರೆ ಆತ ನಾಪತ್ತೆಯಾಗಿ 4 ದಿನಗಳ ನಂತರ ಗಂಡ ಸಿಕ್ಕಿದ್ದ ಆದ್ರೆ ಆತ ಸಿಕ್ಕಿದ್ದು ಹೆಣವಾಗಿ. ಅದೂ ಕೂಡ ತನ್ನ ಮನೆಯ ಎದುರು ಇದ್ದ ಸಂಪಿನಲ್ಲಿ. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರಿಗೆ ಮೃತದೇಹದ ಮೇಲಿದ್ದ ಬೆಡ್‌ಶಿಟ್ ಕೊಲೆಗಾರನ ಸುಳಿವು ಕೊಟ್ಟಿತ್ತು. ಒಂದು ಹೆಣ್ಣು ಮಗಳು ತನ್ನ ಗಂಡನ ಕಥೆಯನ್ನೇ ಮುಗಿಸಿಬಿಟ್ಟಿದ್ದಾಳೆ. ಅಷ್ಟೇ ಅಲ್ಲ ಗಂಡನ ಹೆಣ ಹಾಕಿ ನಂತರ ಇನ್ನಿಲ್ಲದಂತೆ ನಾಟಕವಾಡಿ ಬಿಟ್ಟಿದ್ದಾಳೆ. ಮಹಾನಗರ ಬೆಂಗಳೂರಿನ ಸಂಪಿಗೆಹಳ್ಳಿಯ ಕೋಗಿಲು 3ನೇ ಕ್ರಾಸ್. ಕಸ ಹಾಕುವ ಜಾಗದಲ್ಲಿ ಆವತ್ತು ಒಂದು ಶವ ಸಿಕ್ಕಿತ್ತು. ಆದ್ರೆ ಈ ಶವ ಸಿಗೋದಕ್ಕೂ ಮೂರು ನಾಲ್ಕು ದಿನಗಳ ಮೊದಲು ಇಲ್ಲಿಂದಲೇ ಕೆಟ್ಟ ವಾಸನೆ ಬರ್ತಿತ್ತು. ಇಲಿ ಸತ್ತಿರ ಬಹುದು ಅಂತ ಆರಂಭದಲ್ಲಿ ಅಂದುಕೊಂಡಿದ್ರೂ ನಂತರ ದಿನಕಳೆದಂತೆ ವಾಸನೆ ಹೆಚ್ಚಾಗಿದೆ. ವಾಸನೆ ತಾಳಲಾರದೇ ಅಕ್ಕಪಕ್ಕದ ಮನೆಯವರು ಪೊಲೀಸ್ ಠಾಣೆಗೆ ಕಾಲ್ ಮಾಡ್ತಾರೆ. ವಿಷಯ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸರು ಸ್ಪಾಟ್‌ಗೆ ಬಂದು ಪರಿಶೀಲನೆ ಮಾಡಿದ್ದಾರೆ. ನಂತರ ವಾಸನೆಯ ಮೂಲ ಹುಡುಕುತ್ತಾ ಹೋದ ಪೊಲೀಸರಿಗೆ ಅಲ್ಲಿ ಒಂದು ಹಳೆಯ ನೀರಿನ ಸಂಪು ಕಂಡಿದೆ. ಸೀದಾ ಪೊಲೀಸರು ಆ ಸಂಪನ್ನ ತೆಗೆದು ನೋಡಿದ್ದಾರೆ ಅಷ್ಟೇ.. ಅಲ್ಲಿ ಒಬ್ಬ ಮನುಷ್ಯನ ಡೆಡ್ ಬಾಡಿಯ ದರ್ಶನವಾಗಿ ಬಿಡುತ್ತೆ.

ಇದನ್ನೂ ವೀಕ್ಷಿಸಿ:  ಕ್ಯಾಪ್ಟನ್ ಆಫ್ ದಿ ಶಿಪ್ ಕುಮಾರಣ್ಣ: ಲೋಕಸಭೆಯ ಸನಿಹದಲ್ಲಿ ಇದೆಂಥಾ ಬದಲಾವಣೆ..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more