ನಮ್ಮ ಹುಡುಗ್ರು ಮಾಡಿರೋದು, ನಾನೇನು ಮಾಡಿಲ್ಲ ಸಾರ್; ಎಸಿಪಿ ಚಂದನ್‌ಗೆ ಅವಾಜ್ ಹಾಕಿದ್ದ ನಟ ದರ್ಶನ್

ನಮ್ಮ ಹುಡುಗ್ರು ಮಾಡಿರೋದು, ನಾನೇನು ಮಾಡಿಲ್ಲ ಸಾರ್; ಎಸಿಪಿ ಚಂದನ್‌ಗೆ ಅವಾಜ್ ಹಾಕಿದ್ದ ನಟ ದರ್ಶನ್

Published : Aug 13, 2024, 04:43 PM ISTUpdated : Aug 21, 2024, 04:48 PM IST

ನಮ್ಮ ಹುಡುಗರು ಮಾಡಿರೋದು, ನಾನು ಏನು ಮಾಡಿಲ್ಲ. ನನಗೆ ಏನು ಗೊತ್ತಿಲ್ಲ ಸಾರ್​. ನನ್ನ ಯಾಕೆ ಅರೆಸ್ಟ್ ಮಾಡ್ತೀರಾ ಸಾರ್ ಎಂದು ದರ್ಶನ್ ಹೇಳಿದ್ದರು.

ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಹಣ ಕೊಟ್ಟು ಸೈಲೆಂಟ್​ ಆಗಿದ್ದ ನಟ ದರ್ಶನ್‌ಗೆ ಬೆಂಗಳೂರು ಪೊಲೀಸ್ ಇಲಾಖೆಯ ಎಸಿಪಿ ಚಂದನ್ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಬಳಿಕ ಹಣ ಕೊಟ್ಟು ಕೆಲವರನ್ನು ಪೊಲೀಸರಿಗೆ ಸರೆಂಡರ್ ಆಹಲು ಕಳಿಸಿ ನೆಮ್ಮದಿಯಾಗಿರೋಣ ಎಂದುಕೊಂಡು ನಟ ದರ್ಶನ್ ಮೈಸೂರಿಗೆ ತೆರಳಿದ್ದನು. ಅಲ್ಲಿಗೆ ಹೋಗಿ ಅರೆಸ್ಟ್ ಮಾಡಿದ ಪೊಲೀಸರ ಮುಂದೆ ನಟ ದರ್ಶನ್ 'ನಾನು ಈ ರೀತಿ ಲಾಕ್ ಹಾಕ್ತೀನಿ ಅಂತ ಗೊತ್ತಿರಲಿಲ್ಲ ಸಾರ್. ನಾನು ನಿರೀಕ್ಷೆ ಮಾಡಿರಲಿಲ್ಲ, ಸಾರ್ ನೀವು ಬರ್ತೀರಾ ಅಂತ' ಎಂದು ಹೇಳಿದ್ದಾನೆ. 

ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳಿದ್ರಾ ನಟ ಯಶಸ್ ಸೂರ್ಯ?

ನಟ ದರ್ಶನ್‌ನನ್ನು ಬಂಧಿಸಲು ಎಸಿಪಿ ಚಂದನ್ ಮೈಸೂರಿಗೆ ತೆರಳಿದ್ದಾಗ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದನು. ಪೊಲೀಸರು ಜಿಮ್ ನಿಂದ ನೇರವಾಗಿ ಸ್ಟೇಷನ್ ಗೆ ಕರೆತಂದಿದ್ದರು. ನಂತರ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿಟ್ಟು ದರ್ಶನ್ ವಿಚಾರಣೆ ಮಾಡಿದ್ದರು. ಇನ್ನು ವಿಚಾರಣೆ ವೇಳೆ ನಮ್ಮ ಹುಡುಗರು ಮಾಡಿರೋದು, ನಾನು ಏನು ಮಾಡಿಲ್ಲ ಸಾರ್. ನನಗೆ ಗೊತ್ತಿಲ್ಲದ ವಿಷಯ ಕೇಳಬೇಡಿ ಎಂದಿದ್ದರಂತೆ. ಪೊಲೀಸರು ಸಾಂಧರ್ಭಿಕ ಸಾಕ್ಷ್ಯಗಳನ್ನು ಮುಂದಿಟ್ಟ ನಂತರ ಸ್ವಲ್ಪ ಮಟ್ಟಿಗೆ ಬಾಯಿ ಮುಚ್ಚಿಕೊಂಡಿದ್ದರಂತೆ. ಪೊಲೀಸರ ಕಸ್ಟಡಿಯಲ್ಲಿದಾಗಲ್ಲೂ ಸ್ವಲ್ಪ ದಿನ ದರ್ಶನ್ ರೇಗಾಡಿದ್ದರಂತೆ. 

ಇನ್ನು ದರ್ಶನ್ ಮೇಲಿನ ಆರೋಪ ಸಾಬೀತಿಗೆ ಎಲ್ಲಾ ರೀತಿ ಸಾಕ್ಷ್ಯ ಸಂಗ್ರಹ ಮಾಡಿದ ನಂತರ ದರ್ಶನ್ ತೆಪ್ಪಗಾಗಿದ್ದಾರೆ. ದರ್ಶನ್  ವಿರುದ್ಧ ಸಣ್ಣ ಪುಟ್ಟ ಸಾಕ್ಷ್ಯಗಳನ್ನು ಬಿಡದೇ ಪೊಲೀಸರು ಸಂಗ್ರಹ ಮಾಡಿದ್ದಾರೆ. ಸಿಸಿಟಿವಿ, ಡಿವಿಆರ್  ಸೇರಿದಂತೆ ಹಲವು ವಸ್ತುಗಳು ವಶಕ್ಕೆ ಪಡೆದಿದ್ದಾರೆ. ದಿನ ಕಳೆದಂತೆ ನಟ ದರ್ಶನ್ ವಿರುದ್ಧದ ಸಾಕ್ಷ್ಯಗಳು ಬಿಗಿಯಾಗಿದ್ದವು. ದರ್ಶನ್ ವಿರುದ್ಧ ಆರೋಪ ಸಾಬೀತಾಗುವಂತಹ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ.

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!