Cheating Case: ದೊಡ್ಡವರೆಲ್ಲ ಗೊತ್ತೆಂದು ಲಕ್ಷ ಲಕ್ಷ ನುಂಗಿದ, ಲಾಕ್ ಡೌನ್ ಈತನ ವಂಚನೆಯ ರಹದಾರಿ!

Jan 11, 2022, 9:28 PM IST

ಕಾರವಾರ(ಜ. 11) ಕಾರವಾರದ (Karwar) ಸೀಬರ್ಡ್‌ನಲ್ಲಿ (Seabird) ತನಗೆ ಆಡ್ಮಿರಲ್ ಗೊತ್ತು. ಸ್ಟೋರ್ ಕೀಪರ್ ಹಾಗೂ ಇತರ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ಜನರಿಂದ ಹಣ ಪಡೆದು
ವಂಚಿಸುತ್ತಿದ್ದ. ತಿಂಗಳು ಗಟ್ಟಲೇ ಕಾರು (Car) ಬಾಡಿಗೆಗೆ (Rent) ಬೇಕು ಎಂದು ಜನರಿಂದ ಕಾರು ಪಡೆದು, ಅತ್ತ ಕಾರನ್ನೂ ನೀಡದೇ, ಬಾಡಿಗೆ ಹಣವನ್ನೂ ನೀಡದೇ(Fraud) ಸತಾಯಿಸುತ್ತಿದ್ದ. ಹಲವು ಸಮಯಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಇದೀಗ ಜನರೇ ಪತ್ತೆ ಹಚ್ಚಿ ಗೂಸಾ ನೀಡಿದ್ದಾರೆ.#

ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರ ಜತೆ ದೈಹಿಕ ಸಂಬಂಧ ಬೆಳಸಿದ್ದ ವಂಚಕ!

ವಂಚಕರನ ಹೆಸರು ನೀಲೇಶ್ ನಾಯ್ಕ್, ಕಾರವಾರದ ಅರಗಾ ನಿವಾಸಿ. ಈತ ತನಗೆ ಕಾರವಾರದ ನೌಕಾನೆಲೆಯ ಅಡ್ಮಿರಲ್ ಪರಿಚಯವಿದೆ. ಸೀಬರ್ಡ್‌ನಲ್ಲಿ ಸ್ಟೋರ್
ಕೀಪರ್ ಹಾಗೂ ಇತರ ಉದ್ಯೋಗ ಮಾಡಿಸಿ ಕೊಡುವುದಾಗಿ ಸುಮಾರು 20ಕ್ಕೂ ಹೆಚ್ಚು ಜನರಿಂದ ಸಾವಿರದಿಂದ ಹಿಡಿದು ಲಕ್ಷದವರೆಗೆ ಹಣ ಪಡೆದು ವಂಚನೆ ಮಾಡಿದ್ದಾನೆ. ಅತ್ತ ಉದ್ಯೋಗವೂ ಒದಗಿಸದೇ, ಇತ್ತ ಹಣವೂ ಮರಳಿಸದೇ ಹಲವು ತಿಂಗಳಿನಿಂದ ಈತ ತಲೆ‌ ಮರೆಸಿಕೊಂಡಿದ್ದ. ಈತನನ್ನು ಪತ್ತೆ ಮಾಡಲು ಸಾಕಷ್ಟು ಸಮಯಗಳಿಂದ ಇನ್ನಿಲ್ಲದಂತೇ ಪರದಾಡಿದ್ದ ಜನರು ಕೊನೆಗೂ ಪತ್ತೆ ಮಾಡಿ ಕರೆ ತಂದಿದ್ದು, ಈತನಿಂದ ಹಣ ಮರಳಿ ಪಡೆಯಲು ಶತ ಪ್ರಯತ್ನ ನಡೆಸಿದ್ದಾರೆ.

ಸದ್ಯಕ್ಕೆ ಆರೋಪಿಯನ್ನು ಪತ್ತೆ ಮಾಡಿ ಹಿಡಿದು ತಂದಿರುವ ಜನರು ಈತನಿಂದ ವಂಚನೆಗೆ ಒಳಗಾದ ಎಲ್ಲರ ಬಳಿ ಕರೆದೊಯ್ಯುತ್ತಿದ್ದಾರೆ. ಅವರ ಮುಂದೆ ಈತನ ಹಣೆ ಬರಹವನ್ನು‌
ಬಿಚ್ಚಿಟ್ಟು ಎಲ್ಲರಿಗೂ ಹಣ ಮತ್ತೆ ದೊರಕುವಂತೆ ಮಾಡಿ ನಂತರ ಪೊಲೀಸರ ವಶಕ್ಕೆ ನೀಡಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಜನರಿಗೆಲ್ಲರಿಗೂ ಮೋಸ ಮಾಡಿ ಹಣ ನುಂಗಿದ್ದ ಆರೋಪಿ ಕೊನೆಗೂ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತ ನುಂಗಿದ ಹಣವನ್ನೆಲ್ಲಾ ಕಕ್ಕಿದ ಬಳಿಕ ಕಂಬಿ ಎಣಿಸೋದಂತೂ ಗ್ಯಾರಂಟಿ.