ಕಾವಾಡಿಗರಹಟ್ಟಿಗೆ ಕೇಂದ್ರ, ರಾಜ್ಯ ಸಚಿವರು ಭೇಟಿ: ಡಿಸಿಗೆ ತಿಮ್ಮಾಪುರ ತರಾಟೆ

Aug 5, 2023, 11:04 AM IST

ಚಿತ್ರದುರ್ಗ ಕವಾಡಿಗರಹಟ್ಟಿಯಲ್ಲಿ( Kavadigarahatti) ವಿಷ ಜಲ ದುರಂತದಲ್ಲಿ ಮರಣಮೃದಂಗ ಮುಂದುವರಿದಿದೆ. ಜೀವ ಜಲ ಸೇವಿಸಿ ಜೀವ ಬಿಟ್ಟವರ ಸಂಖ್ಯೆ ಏರುತ್ತಲೇ ಇದೆ. ಕಲುಷಿತ ನೀರು(Contaminated water) ಕುಡಿದು ಅಸ್ವಸ್ಥರಾಗಿದ್ದ ಮತ್ತಿಬ್ಬರು ಪ್ರಾಣ ಬಿಟ್ಟಿದ್ದಾರೆ. 50 ವರ್ಷದ ರುದ್ರಪ್ಪ, 75 ವರ್ಷದ ಪಾರ್ವತಮ್ಮ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 5ಕ್ಕೆ ಏರಿದೆ. ಇನ್ನು ಮೃತ ಪಾರ್ವತಮ್ಮ ಕುಟುಂಬಸ್ಥರೆಲ್ಲರೂ ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದಾರೆ. ಈ ಮೂಲಕ ಅಸ್ವಸ್ಥರ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ. ಇನ್ನು ಗ್ರಾಮದಲ್ಲೇ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ದುರಂತ ನಡೆದು 5 ದಿನಗಳ ಬಳಿಕಕೇಂದ್ರ ಸಚಿವ ನಾರಾಯಣಸ್ವಾಮಿ(Minister Narayanaswamy)  ಹಾಗೂ ಅಬಕಾರಿ ಸಚಿವ ತಿಮ್ಮಾಪುರ (Minister Timmapura)  ಗ್ರಾಮಕ್ಕೆ ಭೇಟಿ ನೀಡಿದ್ರು. ಅಸ್ವಸ್ಥರ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಇನ್ನು ಮೃತರ ಕುಟುಂಬಕ್ಕೆ ವೈಕ್ತಿಕವಾಗಿ 50 ಸಾವಿರ ಪರಿಹಾರ ಘೋಷಿಸಿದ ನಾರಾಯಣಸ್ವಾಮಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ರು. ಇತ್ತ ಸರ್ಕಾರದ ಪರಿಹಾರದ ಚೆಕ್ ವಿತರಿಸದ  ಡಿಸಿ ದಿವ್ಯಾಪ್ರಭುಗೆ ತಿಮ್ಮಾಪುರ ಕ್ಲಾಸ್ ತೆಗೆದುಕೊಂಡ್ರು. 

ಇದನ್ನೂ ವೀಕ್ಷಿಸಿ:  BBMP Elections: ಬಿಜೆಪಿ ಗೆಲುವಿನ ತಂತ್ರಕ್ಕೆ ತಿರುಮಂತ್ರ ಹಾಕಿದ ಕಾಂಗ್ರೆಸ್‌!