ಮುಂಬೈಯಲ್ಲಿ ದೋಸ್ತಿ, ಮಂಗ್ಳೂರಲ್ಲಿ ದರೋಡೆ: ಕೋಟೆಕಾರ್‌ ಬ್ಯಾಂಕ್‌ ರಾಬರಿಯ ರೋಚಕ ಕಥೆ!

ಮುಂಬೈಯಲ್ಲಿ ದೋಸ್ತಿ, ಮಂಗ್ಳೂರಲ್ಲಿ ದರೋಡೆ: ಕೋಟೆಕಾರ್‌ ಬ್ಯಾಂಕ್‌ ರಾಬರಿಯ ರೋಚಕ ಕಥೆ!

Published : Jan 28, 2025, 12:59 PM IST

ಜನವರಿ 17ರಂದು ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್‌ ನಲ್ಲಿ ನಡೆದ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಮಧ್ಯಾಹ್ನದ ಸಮಯದಲ್ಲಿ ಕಾರಿನಲ್ಲಿ ಬಂದಿದ್ದ ಐದು ದರೋಡೆಕೋರರು ಬ್ಯಾಂಕ್ ಗೆ ನುಗ್ಗಿ ಕೇವಲ 6 ನಿಮಿಷಗಳಲ್ಲೇ ಬರೋಬ್ಬರಿ 18.6 ಕೆ.ಜಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ರು. 

ಬೆಂಗಳೂರು(ಜ.28):  ಮಂಗಳೂರಿನ  ಬ್ಯಾಂಕ್‌ ದರೋಡೆ ಪ್ರಕರಣವನ್ನ ಪೊಲೀಸರು ಒಂದೇ ವಾರದಲ್ಲಿ ಬೇಧಿಸಿದ್ದಾರೆ.  ಸಣ್ಣ ಸುಳಿವೂ ಇಲ್ಲದ ಪ್ರಕರಣವನ್ನು ಬೇಧಿಸಿ 14 ಕೋಟಿಯಷ್ಟು ಕಳ್ಳ ಮಾಲು ವಶಪಡಿಸಿಕೊಂಡ ಪೊಲೀಸ್ ಕಾರ್ಯಾಚರಣೆಯೇ ರೋಚಕ....ಈ ಬಗ್ಗೆ ಡೀಟೈಲ್ ರಪೋರ್ಟ್ ಇಲ್ಲಿದೆ..

ಜನವರಿ 17ರಂದು ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್‌ ನಲ್ಲಿ ನಡೆದ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಮಧ್ಯಾಹ್ನದ ಸಮಯದಲ್ಲಿ ಕಾರಿನಲ್ಲಿ ಬಂದಿದ್ದ ಐದು ದರೋಡೆಕೋರರು ಬ್ಯಾಂಕ್ ಗೆ ನುಗ್ಗಿ ಕೇವಲ 6 ನಿಮಿಷಗಳಲ್ಲೇ ಬರೋಬ್ಬರಿ 18.6 ಕೆ.ಜಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ರು. 

ಅನಂತನಾಗ್ 5 ದಶಕಗಳ ಕಲಾಸೇವೆಗೆ ಒಲಿದು ಬಂದ ಪ್ರಶಸ್ತಿ

ದರೋಡೆ ನಡೆದ ಜಾಗದಲ್ಲಿ ಯಾವುದೇ ಪೂರಕ ಸಾಕ್ಷ್ಯ ಸಿಗದೇ ಇದ್ದರೂ, ಐವರು ದರೋಡೆಕೋರರು ಬಂದಿದ್ದ ಫಿಯೇಟ್‌ ಕಾರು ಪತ್ತೆ ಮಾಡಲು ದ.ಕ ಜಿಲ್ಲೆಯ ಎಲ್ಲಾ ಟೋಲ್‌ ಹಾಗೂ ರಸ್ತೆಗಳ ಸಿಸಿಟಿವಿ ಜಾಲಾಡಿದ್ರು. ಈ ವೇಳೆ ಹೆಜಮಾಡಿ ಟೋಲ್‌ ಪಾಸಿಂಗ್‌ ವೇಳೆ ಕಾರಿಗೆ ಮಹಾರಾಷ್ಟ್ರ ನೋಂದಾಣಿಯ ನಂಬರ್‌ ಪ್ಲೇಟ್‌ ಇರೋದು ಗೊತ್ತಾಗಿದೆ. ಆದರೆ ಸುರತ್ಕಲ್‌ ಬಳಿ ನಂಬರ್ ಪ್ಲೇಟ್ ಬದಲಾಗಿತ್ತು. ಪೆಟ್ರೋಲ್‌ ಬಂಕ್ ವೊಂದ ಸಿಸಿಟಿವಿಯ ಫೂಟೇಜ್‌ ನಲ್ಲಿ ಬೆಂಗಳೂರು ನೋಂದಾಣಿ ನಕಲಿ ನಂಬ ಪ್ಲೇಟ್‌ ಪತ್ತೆಯಾಗಿದೆ. ಅಲ್ಲಿಗೆ ಮಹಾರಾಷ್ಟ್ರ ನಂಬರ್‌ ಪ್ಲೇಟ್‌ ಆಧಾರದಲ್ಲಿ ಕಾರಿನ ಮೂಲ ಹುಡುಕಿದಾಗ, ಕಾರು ಮಹಾರಾಷ್ಟ್ರದ್ದು ಎಂದು ಗೊತ್ತಾಗಿದೆ. ಹೀಗಾಗಿ ದರೋಡೆಕೋರರು ಮಹಾರಾಷ್ಟ್ರದಿಂದ ಬಂದಿದ್ದು ಕನ್ಫರ್ಮ ಆಗಿತ್ತು)

ಘಟನೆ ನಡೆದ ಮೂರೇ ದಿನದಲ್ಲಿ ತಮಿಳುನಾಡಿನ ತಿರುವನ್ವೇಲಿಯಲ್ಲಿ ಕಣ್ಣನ್‌ ಮಣಿ ಎಂಬಾತನನ್ನ ಬಂಧಿಸಲಾಗಿತ್ತು. ಬಳಿಕ ಕಿಂಗ್‌ ಪಿನ್‌ ಮುರುಗನ್‌ ಹಾಗೂ ಯಸೋವಾ ರಾಜೇಂದ್ರನ್ ಎಂಬುವರನ್ನ ಅಂಬುಸಮುದ್ರಂ ಬಳಿ 2 ಕೆಜಿ 29 ಗ್ರಾಂ ಚಿನ್ನದ ಸಮೇತ ವಶಕ್ಕೆ ಪಡೆಯಲಾಗಿದೆ. ಬಳಿಕ ಮುರುಗನ್‌ ತಂದೆ ಷಣ್ಮುಗ ಸುಂದರಂ ಮನೆಗೆ ದಾಳಿ ನಡೆಸಿ 16 ಕೆಜಿ 285 ಗ್ರಾಂ ಚಿನ್ನ ವಶಕ್ಕೆ ಪಡೆದು ಆತನನ್ನ ಬಂಧಿಸಲಾಗಿದೆ. 

ಡೆಡ್ಲಿ ಡೇಂಜರ್: ನನ್ನದೇ ರೋಡ್‌, ನನ್ನದೇ ಹವಾ: ಇದು ಗಜಪಡೆ ಕಿರಿಕ್ ಕಹಾನಿ!

ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ದರೋಡೆ ಕೇಸ್​ನಲ್ಲಿ ಶಶಿ ಥೇವರ್‌ ಎಂಬ ಸ್ಥಳೀಯನ ಕೈವಾಡದ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.  ಆರು ತಿಂಗಳ ಹಿಂದೆಯೇ ಈ ಬ್ಯಾಂಕ್‌ ದರೋಡೆ ಪ್ಲಾನ್‌ ಹಾಕಲಾಗಿದ್ದು, ಮಂಗಳೂರಿನ ಸ್ಥಳೀಯ ಪ್ರದೇಶಗಳ ಬಗ್ಗೆ ಮಾಹಿತಿ ಇದ್ದ ಶಶಿ ಥೇವರ್‌ ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ್ದನಂತೆ. ಮುಂಬೈನ ಥಳೋಜಾ ಜೈಲ್‌ನಲ್ಲಿ ಥೇವರ್ ಗೆ ಮುರುಗನ್ ಪರಿಚಯವಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಕೋಟೆಕಾರು ದರೋಡೆ ಪ್ಲಾನ್‌ ರೂಪಿಸಿದ್ದರು. ಶಶಿ ಥೇವರ್‌ ಜೊತೆ ಮುರುಗನ್ ಮೂರು ಬಾರಿ ಮಂಗಳೂರಿಗೆ ಬಂದಿದ್ದು, ಬ್ಯಾಂಕ್‌ ಸುತ್ತಮುತ್ತ, ಎಂಟ್ರಿ ಹಾಗೂ ಎಕ್ಸಿಟ್‌ ಜೊತೆಗೆ ಇತರೆ ಮಾಹಿತಿ ಕಲೆ ಹಾಕಿದ್ದ. ಬಳಿಕ ಮತ್ತೊಬ್ಬ ರಾಜೇಂದ್ರ ಜತೆ ಕಳೆದ ನ.27ರಂದು ಆಗಮಿಸಿ ಅಂತಿಮ ಪ್ಪಾನ್‌ ಹಾಕಿದ್ದರು. 

ಸದ್ಯ ಸ್ಥಳೀಯ ಮಾಹಿತಿ ಇದ್ದ ಶಶಿ ಥೇವರ್‌ ಗೆ ಪೊಲೀಸರು ಹುಡುಕಾಟ ನಡೆಸ್ತಿದ್ದು, ಆತನ ಹಿಂದೆ ಇನ್ನಷ್ಟು ಸ್ಥಳೀಯರು ಇರೋ ಅನುಮಾನವಿದೆ. 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more