
ಅನಂತನಾಗ್ 5 ದಶಕಗಳ ಕಲಾಸೇವೆಗೆ ಒಲಿದು ಬಂದ ಪ್ರಶಸ್ತಿ
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಐದು ದಶಕಗಳ ಕಲಾಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಕನ್ನಡಿಗರ ಬಹುಕಾಲದ ಬೇಡಿಕೆ ಈಡೇರಿದೆ.
ಹೌದು ಕನ್ನಡದ ಹಿರಿಯ ನಟ, ಅದ್ಭುತ ಕಲಾವಿದ ಅನಂತನಾಗ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ಅನಂತನಾಗ್ ರ 5 ದಶಕಗಳ ಕಲಾಸೇವೆಯನ್ನ ಗುರುತಿಸಿ ಪದ್ಮಭೂಷಣ ಪ್ರಶಸ್ತಿಯನ್ನ ಘೋಷಣೆ ಮಾಡಿದೆ. ಅಸಲಿಗೆ ಅನಂತನಾಗ್ಗೆ ಯಾವುತ್ತೋ ಪ್ರಶಸ್ತಿ ಬರಬೇಕಿತ್ತು. ಇಷ್ಟು ದೊಡ್ಡ ಸಾಧಕನಿಗೆ ಕೊನೆ ಪಕ್ಷ ಪದ್ಮಶ್ರೀ ಕೂಡ ಕೊಟ್ಟಿಲ್ಲ ಅಂತ ಕನ್ನಡಿಗರಿಗೆ ಬೇಸರ ಇತ್ತು 2021ರಲ್ಲಿ ಈ ಬಗ್ಗೆ ಒಂದು ಅಭಿಯಾನವೇ ನಡೆದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವು ನಟರು ಅನಂತನಾಗ್ಗೆ ಪದ್ಮಪ್ರಶಸ್ತಿ ಕೊಡಬೇಕು ಒತ್ತಾಯಿಸಿದ್ರು. ಇದೀಗ ಪದ್ಮಶ್ರೀಗಿಂತ ಹೆಚ್ಚಿನ ಮಾನ್ಯತೆಯುಳ್ಳ ಪದ್ಮಭೂಷಣವನ್ನೇ ಅನಂತನಾಗ್ಗೆ ಕೊಟ್ಟಿರೋದು ಕನ್ನಡಿಗರಿಗೆ ಖುಷಿ ತಂದಿದೆ.