
ಮಟಮಟ ಮಧ್ಯಾಹ್ನದ ಹೊತ್ತಲ್ಲಿ ನಡೆದ ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪಕ್ಕಾ ಪ್ಲಾನ್ನೊಂದಿಗೆ ಖದೀಮರು ಕೋಟಿ ಕೋಟಿ ಲೂಟಿಗೈದಿದ್ದರು. ಬ್ಯಾಂಕ್ ಬಗ್ಗೆ ಲೂಟಿಕೋರರಿಗೆ ಪಿನ್ ಟು ಪಿನ್ ಮಾಹಿತಿಯಿತ್ತು. ಆಗಲೇ ಈ ದರೋಡೆಯಲ್ಲಿ ಸ್ಥಳೀಯರ ಕೈವಾಡದ ಬಗ್ಗೆ ಶಂಕೆ ಮೂಡಿತ್ತು. ಸದ್ಯ ಕೋಟೆಕಾರ್ ಬ್ಯಾಂಕ್ ದರೋಡೆ ಹಿಂದೆ ‘ಸುಪಾರಿ’ ಸಂಚಿನ ನೆರಳು ಸುಳಿದಿದೆ.
ಮಂಗಳೂರು(ಜ.22): ಮಂಗಳೂರಿನ ಕೋಟೆಕಾರ್ ಬ್ಯಾಂಕ್ ಲೂಟಿಗೈದ ಮೂವರು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ. ದರೋಡೆ ಕೇಸ್ ತನಿಖೆಯಲ್ಲಿ ರೋಚಕ ಸಂಗತಿಗಳು ಹೊರಬೀಳುತ್ತಿವೆ. ದಿ ಗ್ರೇಟ್ ರಾಬರಿಯಲ್ಲಿ ಮುಂಬೈನ ಧಾರಾವಿ ಗ್ಯಾಂಗ್ ಲಿಂಕ್ ಪತ್ತೆಯಾಗಿದೆ. ಒಟ್ಟಾರೆ ದರೋಡೆ ಪ್ಲಾನ್ ಹಿಂದೆ ಸುಪಾರಿ ಅನುಮಾನವೂ ಇದೆ.
ಮಟಮಟ ಮಧ್ಯಾಹ್ನದ ಹೊತ್ತಲ್ಲಿ ನಡೆದ ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪಕ್ಕಾ ಪ್ಲಾನ್ನೊಂದಿಗೆ ಖದೀಮರು ಕೋಟಿ ಕೋಟಿ ಲೂಟಿಗೈದಿದ್ದರು. ಬ್ಯಾಂಕ್ ಬಗ್ಗೆ ಲೂಟಿಕೋರರಿಗೆ ಪಿನ್ ಟು ಪಿನ್ ಮಾಹಿತಿಯಿತ್ತು. ಆಗಲೇ ಈ ದರೋಡೆಯಲ್ಲಿ ಸ್ಥಳೀಯರ ಕೈವಾಡದ ಬಗ್ಗೆ ಶಂಕೆ ಮೂಡಿತ್ತು. ಸದ್ಯ ಕೋಟೆಕಾರ್ ಬ್ಯಾಂಕ್ ದರೋಡೆ ಹಿಂದೆ ‘ಸುಪಾರಿ’ ಸಂಚಿನ ನೆರಳು ಸುಳಿದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಪಟ್ಟು ಹಿಡಿದ ಯತ್ನಾಳ್ ಬಣ
ಕೊಲೆಗೆ ಸುಪಾರಿ ಕೊಟ್ಟಂತೆ ಬ್ಯಾಂಕ್ ದರೋಡೆಗೂ ಸುಪಾರಿ ನೀಡಿದ ಶಂಕೆ ಮೂಡಿದೆ. ಸುಪಾರಿ ನೀಡಿ ಮುಂಬೈನಿಂದ ದರೋಡೆ ಗ್ಯಾಂಗ್ ಕರೆಸಲಾಗಿತ್ತಾ ಅನ್ನೋ ಅನುಮಾನ ಕಾಡ್ತಿದೆ. ದರೋಡೆಗಾಗಿ ಮಂಗಳೂರು-ಮುಂಬೈ ಗ್ಯಾಂಗ್ ಮಧ್ಯೆ ಪರ್ಸಂಟೇಜ್ ಆಧಾರದಲ್ಲಿ ಡೀಲ್ ನಡೆದಿತ್ತು ಎನ್ನಲಾಗ್ತಿದೆ. ಕೋಟೆಕಾರ್ ಬ್ಯಾಂಕ್ ದರೋಡೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿ ಭಾಗಿಯಾಗಿರೋ ಬಗ್ಗೆ ಸಂಶಯವಿದೆ. ದರೋಡೆಯಲ್ಲಿ 10ಕ್ಕೂ ಅಧಿಕ ಆರೋಪಿಗಳು ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಮಂಗಳೂರು ಬ್ಯಾಂಕ್ ದೋಚಿದ್ದು ಮುಂಬೈನ ಧಾರಾವಿ ಗ್ಯಾಂಗ್. ಈ ಗ್ಯಾಂಗ್ನ ಮೂರು ಸದಸ್ಯರು ಖಾಕಿಗೆ ಲಾಕ್ ಆಗಿದ್ದು ತಮಿಳುನಾಡಲ್ಲಿ. ಕೋಟಿ ಕೋಟಿ ಲೂಟಿಗೈದು ತಲೆಮರೆಸಿಕೊಂಡ ಖದೀಮರು ಸಿಕ್ಕಿಬಿದ್ದಿದ್ದೇ ರೋಚಕ.
ಬ್ಯಾಂಕ್ ದರೋಡೆಗೆ ಧಾರಾವಿ ಗ್ಯಾಂಗ್ ಮುಂಬೈನಲ್ಲಿ ಸ್ಕೆಚ್ ರೂಪಿಸಿತ್ತು. ದರೋಡೆ ಟೀಂನಲ್ಲಿ 10 ಜನರನ್ನಷ್ಟೇ ಧಾರಾವಿ ಗ್ಯಾಂಗ್ ಹಾಕಿಕೊಂಡಿತ್ತು. ಕಾರ್ಯಾಚರಣೆ ತಂಡ, ದಿನ & ಸಮಯ ಎಲ್ಲ ಮುಂಬೈನಲ್ಲೇ ಫೈನಲ್ ಮಾಡಲಾಗಿತ್ತು. ದರೋಡೆ ಟೀಂನಿಂದ ಕೆಲವರನ್ನ ಹೊರಗಿಟ್ಟಿದ್ದರಿಂದಲೇ ರಹಸ್ಯ ಬಯಲಾಗಿದೆ. ದರೋಡೆ ತಂಡದಿಂದ ಹೊರಗುಳಿದುವರು ಪೊಲೀಸರಿಗೆ ಮಾಹಿತಿ ಲೀಕ್ ಮಾಡಿದ್ದಾರೆ. ಮುಂಬೈನಲ್ಲೇ ದರೋಡೆ ಸಾಧ್ಯತೆ ಎಂದು ಪೊಲೀಸರು ಅಲರ್ಟ್ ಆಗಿದ್ರು. ಆದ್ರೆ ಮುಂಬೈನಿಂದ 900 ಕಿಲೋ ಮೀಟರ್ ದೂರ ಬಂದು ಮಂಗಳೂರಲ್ಲಿ ಖದೀಮರು ದರೋಡೆ ನಡೆಸಿದ್ದಾರೆ.
ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿ ಕಣ್ಣನ್ ಮಣಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಶೂಟೌಟ್ ನಡೆದಿದೆ. ಆರೋಪಿಗಳನ್ನು ಮಂಗಳೂರಿಗೆ ಕರೆ ತಂದು ಮಹಜರು ನಡೆಸುವ ವೇಳೆ ಆರೋಪಿ ಕಣ್ಣನ್ ಮಣಿ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸಿಸಿಬಿ ಇನ್ಸ್ಪೆಕ್ಟರ್ ರಫೀಕ್ ಆರೋಪಿ ಮೇಲೆ ಫೈರಿಂಗ್ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆದಿದ್ದ ರೋಡ್ ರಾಬರಿಗೆ ದರೋಡೆಕೋರರು ಬಳಸಿದ್ದ ಇನೋವಾ ಕಾರು ಪತ್ತೆಯಾಗಿದೆ. ಗೋಪಾಲಪುರ ಅರಣ್ಯದೊಳಗೆ ದರೋಡೆಗೆ ಬಳಸಿದ ಕಾರನ್ನ ಬಿಟ್ಟು ಮತ್ತೊಂದು ಕಾರ್ನಲ್ಲಿ ಖದೀಮರು ಎಸ್ಕೇಪ್ ಆಗಿದ್ದಾರೆ. ದರೋಡೆಗೆ ಒಳಗಾದ ಕೇರಳದ ವಯನಾಡಿನ ಕಾಲ್ಪೆಟದ ವ್ಯಾಪಾರಿ ಸೂಫಿ ರೋಡ್ ರಾಬರಿ ಭಯಾನಕತೆಯನ್ನ ಬಿಚ್ಚಿಟ್ಟಿದ್ದಾರೆ.
ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
ಬೀದರ್ ದರೋಡೆ ನಡೆದು ಆರು ದಿನಗಳಾದ್ರೂ ಇನ್ನೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಈ ಮಧ್ಯೆ ರಾಬರಿಯ ಮತ್ತೊಂದು ಎಕ್ಸ್ಕ್ಲೂಸಿವ್ ವಿಡಿಯೋ ಬಯಲಾಗಿದೆ. ಜಸ್ಟ್ 30 ನಿಮಿಷದಲ್ಲಿ ಖದೀಮರು ನಗರ ಪ್ರವೇಶಿಸಿ ಹಣ ದೋಚಿ ಪರಾರಿಯಾಗಿದ್ದಾರೆ. ಜನವರಿ 16ರಂದು ಬೆಳಗ್ಗೆ 10.23ಕ್ಕೆ ಬೀದರ್ ನಗರದ ದುಲ್ಹನ್ ದರ್ವಾಜಾ ಬಳಿ ಖದೀಮರಎಂಟ್ರಿಯಾಗಿದ್ದು, 10.45ಕ್ಕೆ ಎಟಿಎಂ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣ ಲೂಟಿ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಯೊಳಗೆ ಬೀದರ್ ಸಿಟಿಯಿಂದ ಕಾಲ್ಕಿತ್ತ ಡಕಾಯಿತರು, 11.18ಕ್ಕೆ ಬೀದರ್ ನಗರದಿಂದ 8 ಕಿ.ಮೀ. ದೂರವಿರುವ ಸುಲ್ತಾನಪುರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೊಲೀಸರು ಎಷ್ಟೇ ಅಲರ್ಟ್ ಆಗಿದ್ರೂ ರಾಜ್ಯದಲ್ಲಿ ದರೋಡೆ, ಕಳ್ಳತನಗಳ ಸರಣಿ ಮುಂದುವರಿದಿದೆ. ಹಲವು ದರೋಡೆ ಗ್ಯಾಂಗ್ಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಲೂಟಿಗಿಳಿದಿದ್ದು, ಜನರನ್ನ ಭಯಭೀತಗೊಳಿಸಿದೆ.