ಬೆಂಗಳೂರಿನ ವಿದ್ಯಾರ್ಥಿನಿ ಪ್ರಬುದ್ಧ ಸಾವಿನ ಪ್ರಕರಣಕ್ಕೆ ಟ್ವಿಸ್ಟ್! ಅಪ್ರಾಪ್ತ ಆರೋಪಿ ಬಂಧನ

May 24, 2024, 12:47 PM IST

ಬೆಂಗಳೂರಲ್ಲಿ(Bengaluru) ವಿದ್ಯಾರ್ಥಿನಿ ಪ್ರಬುದ್ಧ (Student Prabuddha) ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಪ್ರಬುದ್ಧ ಕೊಲೆ(Murder) ಅನ್ನೋದು ಧೃಡಪಟ್ಟಿದ್ದು, ಕೊಲೆ ಸಂಬಂಧ ಅಪ್ರಾಪ್ತ ಆರೋಪಿ(Minor Accuse) ಬಂಧನವಾಗಿದೆ. ಈತನನ್ನು ಈಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಬ್ರಮಣ್ಯಪುರ ಪೊಲೀಸರು ಈತನನ್ನು ಬಂಧನ ಮಾಡಿದ್ದಾರೆ. ಪೋಸ್ಟ್ ಮಾಟಂ ರಿಪೋರ್ಟ್ ನಲ್ಲಿ ಕೊಲೆಯಾಗಿರೋದು ಧೃಡವಾದ ಹಿನ್ನೆಲೆ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮೇ15 ರಂದು ಮನೆಯಲ್ಲೇ ಪ್ರಬುದ್ಧ ಸಾವಿಗೀಡಾಗಿದ್ದು, ಕತ್ತು, ಕೈ ಕೊಯ್ದು ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪ್ರಬುದ್ಧ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ಮಗಳದ್ದು ಕೊಲೆ ಎಂದು ತಾಯಿ ದೂರು ದಾಖಲು ಮಾಡಿದ್ದರು.

ಇದನ್ನೂ ವೀಕ್ಷಿಸಿ:  ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ ಸಿದ್ಧ! ಇಂದು ಸಭೆ