ಕೊಲೆಯಾಗಬೇಕಿದ್ದವರೇ ಯಾರೋ..ಸತ್ತವರೇ ಯಾರೋ! ಹೆತ್ತವರನ್ನ ಕೊಲ್ಲಲು ಮಗನೇ ಕೊಟ್ಟಿದ್ದ 65 ಲಕ್ಷಕ್ಕೆ ಸುಪಾರಿ!

Apr 23, 2024, 5:20 PM IST

ಆತ ಮಾಜಿ ನಗರ ಸಭೆ ಮಾಜಿ ಆಧ್ಯಕ್ಷ. ಹೆಂಡತಿ ಹಾಲಿ ಉಪಾಧ್ಯಕ್ಷೆ. ಅವರು ಆ ಭಾಗದ ಬಿಜೆಪಿ(BJP) ಮುಖಂಡರು. ಇನ್ನೂ ಆವತ್ತು ಅವರ ಕಿರಿಯ ಮಗನನ್ನ ನೋಡಲು ಹೆಣ್ಣಿನ ಮನೆಯವರು ಬಂದಿದ್ರು. ಅದಕ್ಕಾಗಿ ಸಂಬಂಧಿಕರೂ ಬಂದಿದ್ರು. ಎಲ್ಲಾ ಶಾಸ್ತ್ರ ಮುಗಿದ ಮೇಲೆ ಆವತ್ತು ರಾತ್ರಿ ಸಂಬಂಧಿಕರೊಬ್ಬರ ಬರ್ತಡೇ ಪಾರ್ಟಿಯನ್ನೂ ಮಾಡಿ ಮಾಲಗಿದ್ರು ಅಷ್ಟೇ. ಬೆಳಗಾಗುವಷ್ರಲ್ಲಿ ಆ ಮನೆಯಲ್ಲಿ ನಾಲ್ಕು ಹೆಣಗಳು ಬಿದ್ದಿದ್ವು. ಮಧ್ಯರಾತ್ರಿ ಆ ಮನೆಗೆ ಎಂಟ್ರಿ ಕೊಟ್ಟ ಹಂತಕರು ನಾಲ್ಕು ಹೆಣಗಳನ್ನ ಹಾಕಿ ಎಸ್ಕೇಪ್ ಆಗಿದ್ರು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ(Police) ಒಂದೇ ಒಂದು ಕ್ಲೂ ಕೂಡ ಸಿಕ್ಕಿರಲಿಲ್ಲ. ಆದ್ರೆ ಘಟನೆ ನಡೆದ 72 ಗಂಟೆಗಳಲ್ಲೆ ಪೊಲೀಶರು ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಯಾವ ಆ್ಯಂಗಲ್ನಲ್ಲಿ ತನಿಖೆ ಮಾಡಿದ್ರೂ ಹಂತಕರ ಸುಳಿವು ಸಿಗದಿದ್ದಾಗ ಪ್ರಕಾಶ್ ಬಾಕಳೆಯವರ ಮೊದಲ ಹೆಂಡತಿ ಮಕ್ಕಳ ಮೇಲೆಯೇ ಪೊಲೀಸರು ಕಣ್ಣು ಹಾಕ್ತಾರೆ. ದತ್ತಾತ್ರೇಯ ಮತ್ತು ವಿನಾಯಕ್ ಇಬ್ಬರೂ ಪ್ರಕಾಶ್ ಬಾಕಳೆ ಮೊದಲ ಹೆಂಡತಿ ಮಕ್ಕಳು. ಮನೆಯಲ್ಲಿ ನಾಲ್ಕು ಹೆಣಗಳು ಬಿದ್ದಾಗ ತಂದೆ. ಮಕ್ಕಳು ಈ ಕೆಲಸ ಮಾಡಿರೋದಕ್ಕೆ ಸಾಧ್ಯವೇ ಇಲ್ಲ ಅಂತ ಅಂದುಕೊಂಡಿದ್ರು. ಆದ್ರೆ ಪೊಲೀಸರು ಅವರಿಬ್ಬರ ಮೇಲೆಯೇ ಕಣ್ಣಿಡ್ತಾರೆ. ಮೊದಲು ಕ್ರೈಂ ಬ್ಯಾಕ್ಗ್ರೌಂಡ್ ಹೊಂದಿದ್ದ ಕಿರಿಯ ಮಗ ದತ್ತಾತ್ರೇಯನ ಹಿಂದೆ ಬೀಳ್ತಾರೆ. ಆದ್ರೆ ಆತ ಕೊಲೆಗಾರನಲ್ಲ(Murder) ಅನ್ನೋದು ಕನ್ಫರ್ಮ್ ಆಗುತ್ತೆ. ಆದ್ರೆ ಯಾವಾಗ ಮೊದಲ ಮಗ ವಿನಾಯಕ್ ಪೋನ್ ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಾರೋ ಅವನೇ ನಾಲ್ಕು ಹೆಣ ಹಾಕಿದ್ದು ಅಂತ ಗೊತ್ತಾಗುತ್ತೆ.ಕೇವಲ ಆಸ್ತಿಗಾಗೇ ಹೆತ್ತಪನ ಕುಟುಂಬವನ್ನ ಸರ್ವನಾಶ ಮಾಡಲು ಹೋದ ವಿನಾಯಕ ಈಗ ತಗ್ಲಾಕಿಕೊಂಡಿದ್ದಾನೆ.