
ಬೆಂಗಳೂರು (ಜೂ.11): ಆತ ಬಡ ರೈತ. ಇದ್ದ ಒಂದು ಎಕರೆ 10 ಗುಂಟೆ ಜಮೀನಿನಲ್ಲಿ ಎಳ್ಳು ಬೆಳೆದು ಬದುಕುತ್ತಿದ್ದ. ಆವತ್ತೊಂದು ದಿನ ಜಮೀನಿಗೆ ಹೋಗಿ ಬರ್ತೀನಿ ಅಂತ ಹೋದವನು ನಾಪತ್ತೆಯಾಗಿಬಿಟ್ಟಿದ್ದ.
ಅವನ ಕುಟುಂಬ ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಟ ಮಾಡಿತ್ತು. ಆದರೆ, ಎಲ್ಲೂ ಅವನ ಸುಳಿವಿಲ್ಲ. ಆರನೇ ದಿನ ಅವನ ಮೃತದೇಹ ಅವನದ್ದೇ ಜಮೀನಿನಲ್ಲಿ ಸಿಕ್ಕಿತ್ತು. ಅವನನ್ನ ಯಾರೋ ಕೊಂದು ಸುಟ್ಟು ಹಾಕಿದ್ದರು.
'ಆಕೆಗೆ ಗಲ್ಲು ಶಿಕ್ಷೆಯಾಗಲಿ..' ರಾಜಾ ರಘುವಂಶಿ ತಾಯಿಯ ಅಪ್ಪಿಕೊಂಡು ಕಣ್ಣೀರಿಟ್ಟ ಸೋನಮ್ ಸಹೋದರ!ಪೊಲೀಸರಿಗೆ ವಿಷಯ ಮುಟ್ಟಿತ್ತು. ತನಿಖೆ ನಡೆಸಿದ ಪೊಲೀಸರು ಕೊನೆಗೂ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಅಷ್ಟಕ್ಕೂ ಜಮೀನಿಗೆ ಹೋದವನಿಗೆ ಏನಾಯ್ತು? ಅವನನ್ನ ಕೊಂದವರು ಯಾರು? ಒಬ್ಬ ಅಮಾಯಕ ರೈತನೊಬ್ಬನ ದುರಂತ ಅಂತ್ಯದ ಕಥೆ ಮತ್ತು ರೋಚಕ ಇನ್ವೆಸ್ಟಿಗೇಷನ್ ಸ್ಟೋರಿ ಏನು ಅನ್ನೋದರ ವಿವರ ಇಲ್ಲಿದೆ