ಬೇರೆ ಯಾವ ಏರ್ಪೋರ್ಟ್‌ಗೆ ಬರಬೋದು ಅಂತ ಎಸ್ಐಟಿ ಕಣ್ಣು
ಬೇರೆ ಏರ್ಪೋರ್ಟ್‌ಗೆ ಬಂದಲ್ಲಿ ಅಲ್ಲೇ ವಶಕ್ಕೆ ಪಡೆಯಲು ಸಿದ್ಧತೆ
ಪ್ರಜ್ವಲ್ ವಾಪಸ್ ಆಗುವ ನಂತರದ ಕ್ರಮಗಳ ಬಗ್ಗೆ SIT ಚರ್ಚೆ
ಅಶ್ಲೀಲ ವಿಡಿಯೋ ಪ್ರಕರಣಕ್ಕೆ(Obscene video case) ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ(Prajwal Revanna) ಮೇ.31ಕ್ಕೆ ಎಸ್ಐಟಿ ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ. ಈ ವಿಡಿಯೋ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಬುಕ್ಕಿಂಗ್(Flight ticket booking) ಮೇಲೆ SIT ಕಣ್ಣಿಟ್ಟಿದೆ. ಎಲ್ಲಿಂದ ಟಿಕೆಟ್ ಬುಕ್ ಮಾಡ್ತಾನೆ ಎಂಬುದೇ ಕುತೂಹಲ ಮೂಡಿಸಿದೆ. ಯಾವ ಕಂಪನಿಯಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡ್ತಾರೆ. ವಿಮಾನ ಯಾವ ನಿಲ್ದಾಣಕ್ಕೆ ಬರುತ್ತೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾ. ಸದ್ಯ ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಎಸ್‌ಐಟಿ(SIT) ತಂಡ ಬೆನ್ನತ್ತಿದೆ. ವಿಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ..? ಯಾವ ಮೂಲದಿಂದ ವಿಡಿಯೋ ಕಳಿಸಲಾಗಿದೆ..?ಎಂಬುದನ್ನು ಎಸ್ಐಟಿ ಪತ್ತೆ ಹಚ್ಚಲು ಮುಂದಾಗಿದೆ. ಪ್ರಜ್ವಲ್ ವಾಪಸ್ ಆಗುತ್ತಿರೋದ್ರಿಂದ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಿದ್ದು, ಹೇಳಿಕೆ ವಿಡಿಯೋ ಮೂಲಕ ಪ್ರಜ್ವಲ್ ವಶಕ್ಕೆ ಪಡೆಯಲು ನೆರವು ಕೊರಲಾಗಿದೆ. ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಬರ್ತಾರಾ..? ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ.
ಇದನ್ನೂ ವೀಕ್ಷಿಸಿ: ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣ: ತನಿಖೆ ಬಳಿಕ ಹಿಂದಿನ ಎಂಡಿ ಬಂಧಿಸಿದ ಸಿಐಡಿ