ಹೈಟೆಕ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಗಾಂಜಾ ಕೃಷಿ: ಮೆಡಿಕಲ್ ಸ್ಟೂಡೆಂಟ್ಸ್ ಅರೆಸ್ಟ್!

Jun 25, 2023, 9:52 AM IST

ಶಿವಮೊಗ್ಗ: ಹೈಟೆಕ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಮೆಡಿಕಲ್ ಸ್ಟೂಡೆಂಟ್ಸ್ ಗಾಂಜಾವನ್ನು ಬೆಳೆಸುತ್ತಿದ್ದ ಘಟನೆ ಮಲೆನಾಡಿನಲ್ಲಿ ನಡೆದಿದೆ.ಬ್ಲಾಕ್ ಶೇಡ್ ನೆಟ್‌ನಲ್ಲಿ ಲೈಟ್ ಮತ್ತು ಫ್ಯಾನ್ ಬಳಸಿ ಪಾಟ್‌ಗಳಲ್ಲಿ ವಿದ್ಯಾರ್ಥಿಗಳು ಗಾಂಜಾ ಬೆಳೆಸುತ್ತಿದ್ರು. ಕೇರಳ, ತಮಿಳುನಾಡು ಮೂಲದ ಮೆಡಿಕಲ್ ಸ್ಟೂಡೆಂಟ್ಸ್ ಗಳಿಂದ ಕರ್ನಾಟಕದಲ್ಲಿ ಗಾಂಜಾ ಕೃಷಿ ಮಾಡಲಾಗುತ್ತಿತ್ತು. ಇವರು ಶಿವಮೊಗ್ಗದ ಖಾಸಗಿ ಕಾಲೇಜುವೊಂದರಲ್ಲಿ ಓದುತ್ತಿದ್ದರು. ಮನೆಯಲ್ಲಿಯೇ ಪಾಟ್‌ಗಳಲ್ಲಿ ಗಾಂಜಾ ಬೆಳೆದು, ಸಣ್ಣ-ಸಣ್ಣ ಪ್ಯಾಕ್‌ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ ಐದಾರು ತಿಂಗಳಿನಿಂದ ಈ ದಂಧೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಇವರು ಆನ್‌ಲೈನ್‌ನಲ್ಲಿ ಗಾಂಜಾ ಸೀಡ್ಸ್‌ನನ್ನು ತರಿಸಿಕೊಂಡಿದ್ದರು. ಬಂಧಿತರನ್ನು ವಿಘ್ನರಾಜ್, ಪಾಂಡಿದೊರೈ ಮತ್ತು ವಿನೋದ್ ಕುಮಾರ್ ಎಂದು ಗುರಿತಿಸಲಾಗಿದೆ. 

ಇದನ್ನೂ ವೀಕ್ಷಿಸಿ: ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ: ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದವರ ಬೆನ್ನಟ್ಟಿದ್ದ ಪೊಲೀಸರು