ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್‌ ಆಗಿ ಮುಗಿಸಿದ್ವಿ ಅಂದುಕೊಂಡ್ರು, ಆದರೆ, ಆಗಿದ್ದೇ ಬೇರೆ..!

ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್‌ ಆಗಿ ಮುಗಿಸಿದ್ವಿ ಅಂದುಕೊಂಡ್ರು, ಆದರೆ, ಆಗಿದ್ದೇ ಬೇರೆ..!

Published : Nov 09, 2022, 07:49 PM IST

ಮೈಸೂರಿನಲ್ಲಿ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯನ್ನು ಆಕ್ಸಿಡೆಂಟ್‌ ಮಾಡಿ ಸಾಯಿಸಿದ ಪ್ರಕರಣದ ವಿವರಗಳು ಬೆಚ್ಚಿ ಬೀಳಿಸುವಂತಿದೆ. ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನು ಇಂಟಲಿಜೆಂಟ್‌ ಆಗಿ ಸಾಯಿಸಿದ್ವಿ ಎಂದುಕೊಂಡ ಕೊಲೆಗಡುಕರಿಗೆ ಮೈಸೂರು ಪೊಲೀಸರು ಎಷ್ಟು ಇಂಟಲಿಜೆಂಟ್‌ ಅನ್ನೋದು ತಿಳಿಯದೇ ಹೋಗಿತ್ತು.
 

ಮೈಸೂರು (ನ.9): ಅವರು ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ. ವೃತ್ತಿಜೀವನ ಮುಗಿಸಿ 23 ವರ್ಷ ಕಳೆದಿತ್ತು. ಮೈಸೂರಿನಲ್ಲಿ ನಿವೃತ್ತ ಜೀವನ ಎಂಜಾಯ್ ಮಾಡುತ್ತಿದ್ದರು. ಬೆಳಿಗ್ಗೆ ವಾಕಿಂಗ್, ಸಂಜೆ ವಾಕಿಂಗ್ ಹಾಗೂ ಮನೆಯಲ್ಲಿ ಹೆಂಡತಿ ಜೊತೆ ಟೈಂ ಪಾಸ್ ಹೀಗೆ ಜಾಲಿಯಾಗಿ ಜೀವನ ನಡೆಯುತ್ತಿತ್ತು. ಮಗ ಹಾಗೂ ಮಗಳು ದೂರದ ಅಮೇರಿಕಾದಲ್ಲಿ ವಾಸವಿದ್ದ ಕಾರಣ,  ಮನೆಯಲ್ಲಿ ಇಬ್ಬರೇ ಇರುತ್ತಿದ್ದರು. ಆದರೆ,  ಅವತ್ತು ವಾಕಿಂಗ್‌ಗೆ ಹೋಗಿದ್ದವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಆಸ್ಪತ್ರೆಗೆ ಸಾಗಿಸಿದ್ರೂ ಪ್ರಯೋಜನವಾಗಲಿಲ್ಲ. 

ಮೊದಲಿಗೆ ಇದೊಂದು ಹಿಟ್ ಆ್ಯಂಡ್ ರನ್ ಕೇಸ್ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ, ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್. ಯಾಕೆಂದರೆ ಅದು ಜಸ್ಟ್ ಆ್ಯಕ್ಸಿಡೆಂಟ್ ಆಗಿರಲಿಲ್ಲ. ಅದೊಂದು ಉದ್ದೇಶಪೂರಿತ ಕೊಲೆ ಆಗಿತ್ತು. 

ಕುಲಕರ್ಣಿಯವರ ಅಳಿಯ ಪೊಲೀಸರಿಗೆ ಮೇಜರ್ ಸುಳಿವು ಕೊಟ್ಟಿದ್ದರು. ಅಂದು ಆ್ಯಕ್ಸಿಡೆಂಟ್ ಮಾಡಿದ್ದ ಕಾರಿನ ಯಾವುದೇ ಸುಳಿವು ಸಿಗದಿದ್ದಾಗ ಕುಲಕರ್ಣಿಯವರ ಅಳಿಯ ಅದೊಂದು ಫ್ಯಾಮಿಲಿ ಬಗ್ಗೆ ಹೇಳಿದ್ದ. ಆ ಫ್ಯಾಮಿಲಿಗೂ ಕುಲಕರ್ಣಿಯವರಿಗೂ ಇದ್ದ ಕಿತ್ತಾಟದ ಬಗ್ಗೆ ಹೇಳಿದ್ದ. ಅಳಿಯನ ಇದೊಂದು ಮಾಹಿತಿಯಿಂದ ಕೇಸ್‌ಗೆ ಮೇಜರ್ ಟ್ವಿಸ್ಟ್ ಸಿಕ್ಕಿಬಿಡುತ್ತೆ. 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more