
ರೇಣುಕಾಸ್ವಾಮಿ ಘಟನೆಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವೂ ಸೀಜ್
ಒಂದಲ್ಲ ಎರಡಲ್ಲ, ನೂರು ದಾಡಿದೆ ಸೀಜ್ ಮಾಡಿದ ವಸ್ತುಗಳ ಸಂಖ್ಯೆ
ಕೊಲೆ ಪ್ರಕರಣದಲ್ಲಿ ಸೀಜ್ ಮಾಡಿದ ವಸ್ತುಗಳ ಸಂಖ್ಯೆ 118ಕ್ಕೆ ಏರಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಇಲ್ಲಿತನಕ ಪೊಲೀಸರು (Police) ಪ್ರತಿಯೊಂದು ವಸ್ತುವನ್ನು ಸೀಜ್ ಮಾಡಿದ್ದು, ಸೀಜ್ ಮಾಡಿದ ವಸ್ತುಗಳ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಪ್ರತ್ಯಕ್ಷ ಮತ್ತು ಪ್ರರೋಕ್ಷವಾಗಿ ಕಂಡು ಬಂದ ಪ್ರತಿಯೊಂದು ವಸ್ತುವನ್ನೂ ಸೀಜ್ ಮಾಡಲಾಗಿದೆ. ಮಹಜರು ನಡೆಸಿ ಪ್ರತಿ ವಸ್ತುವನ್ನೂ ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ವಸ್ತುಗಳು, ಕೃತ್ಯದ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆ ಶೂ, ಚಪ್ಪಲಿಗಳು, ಕೃತ್ಯದ ವೇಳೆ ಬಳಕೆಯಾದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇಂಚಿಂಚೂ ಪರಿಶೀಲನೆ ನಡೆಸಿ ಪ್ರತಿಯೊಂದು ವಸ್ತು ಸೀಜ್ ಮಾಡಿದ್ದಾರೆ. ಈವರೆಗೆ ಜಪ್ತಿ ಮಾಡಿದ ಮಾಲುಗಳ ಸಂಖ್ಯೆ 118ಕ್ಕೆ ರೀಚ್ ಆಗಿದೆ.
ಇದನ್ನೂ ವೀಕ್ಷಿಸಿ: ಕೇಸ್‌ನಲ್ಲಿ ಹೆಸರು ಬರದಂತೆ ದರ್ಶನ್ ಲಕ್ಷ ಲಕ್ಷ ಡೀಲ್ ? 30 ಲಕ್ಷ ನೀಡಿರೋದನ್ನು ಒಪ್ಪಿಕೊಂಡ ನಟ!