ರೇಣುಕಾಸ್ವಾಮಿ ಕೊಲೆ ಪ್ರಕರಣ: 19 ಜನರ ಪೈಕಿ 8 ಮಂದಿಗೆ ದರ್ಶನ್ ಪರಿಚಯವೇ ಇರಲಿಲ್ವಾ ?

Jun 17, 2024, 1:20 PM IST

ನಟ ದರ್ಶನ್ ಗ್ಯಾಂಗ್‌​​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆದ್ರೆ ಈ 19 ಜನರ ಪೈಕಿ 8 ಮಂದಿಗೆ ದರ್ಶನ್(Darshan) ಪರಿಚಯವೇ ಇರಲಿಲ್ವಂತೆ. 8 ಮಂದಿ ದರ್ಶನ್‌​​​ರನ್ನ ಭೇಟಿಯಾಗಿದ್ದೇ ಅರೆಸ್ಟ್(Arrest) ಆದ ಬಳಿಕ ಎಂದು ತಿಳಿದುಬಂದಿದೆ. ಕಾರನ್ನ ವಾಶ್ ಮಾಡಿಸಿದ್ದ ಹೇಮಂತ್ ದರ್ಶನ್‌​​ರನ್ನ ಕಂಡಿದ್ದೇ ಪೊಲೀಸ್ ಸ್ಟೇಷನ್‌ನಲ್ಲಿ ಎಂದು ತಿಳಿದುಬಂದಿದೆ. ಕಾರು ಮಾಲೀಕ ಪುನೀತ್ ಸೂಚನೆಯಂತೆ ಹೇಮಂತ್‌ ಕಾರ್‌ ವಾಶ್(Car Wash) ಮಾಡಿಸಿದ್ದ ಎನ್ನಲಾಗ್ತಿದೆ. ಅನುಕುಮಾರ್, ಇಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರೆಲ್ಲಾ ದರ್ಶನ್‌ನನ್ನು ಕಂಡಿದ್ದೆ ಪೊಲೀಸ್ ಸ್ಟೇಷನ್. ಮೃತದೇಹ ಬಿಸಾಡಿದ್ದ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ಕೂಡ ಅಪರಿಚಿತರು ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ:  ಐವರ ಜಾಲಕ್ಕೆ ಸಿಲುಕಿದ ಡಿ-ಗ್ಯಾಂಗ್..ತಪ್ಪಿಸಿಕೊಳ್ಳೋದು ಡೌಟ್? ಕೊಲೆ ಕೇಸ್‌ಗೆ ಶಕ್ತಿ ತುಂಬಿದ ಸಿಎಂ..!