Oct 8, 2023, 1:05 PM IST
ಬೆಂಗಳೂರಿನ ಹೊರವಲಯ ಆನೇಕಲ್‌ನಲ್ಲಿ(Anekal) ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, 14 ಮಂದಿ ಸಜೀವ ದಹನವಾಗಿದ್ದಾರೆ. ಬರೋಬ್ಬರಿ 19 ಗಂಟೆಗಳ ಬಳಿಕ ಕಾರ್ಯಾಚರಣೆ ಮುಗಿದಿದೆ. ನಿನ್ನೆ ಮಧ್ಯಾಹ್ನ 3.30ಕ್ಕೆ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದಿತ್ತು. ಪಟಾಕಿ(Crackers) ಬಾಕ್ಸ್ ಶಿಫ್ಟ್ ಮಾಡುವಾಗ ಆದ ಎಡವಟ್ಟಿನಿಂದ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಪಟಾಕಿ ಬಾಕ್ಸ್(Boxes) ಅನ್‌ಲೋಡ್ ಮಾಡುವಾಗ ಬಾಕ್ಸ್ ಮೇಲೆ ಮತ್ತೊಂದು ಬಾಕ್ಸ್ ಬಿದ್ದಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ಅಲ್ಲದೇ ಕೆಲಸಕ್ಕೆ ಬರಲ್ಲ ಎಂದು ಹೇಳಿದ್ದರು, ಒತ್ತಾಯ ಮಾಡಿ ಮಾಲೀಕರು ಕರೆತಂದಿದ್ದರಂತೆ. ಹೀಗೆಂದು ಎಂದು ಮೃತ ಅಪ್ಪಾಸ್ ಸಹೋದರ ರಮೇಶ್ ಹೇಳಿದ್ದಾರೆ. ಸಣ್ಣ ಸಣ್ಣ ಪಟಾಕಿಗಳ ಬಾಕ್ಸ್ ಕೆಳಗೆ ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಸಹ ಹೇಳುತ್ತಿದ್ದಾರೆ. ಸುಮಾರು 10 ವರ್ಷದಿಂದ ಈ ಮಳಿಗೆ ಇತ್ತು ಎಂದು ತಿಳಿದುಬಂದಿದೆ. ನಿಯಮ ಬಾಹಿರವಾಗಿ ಗೋಡೌನ್‌ನಲ್ಲಿ ಪಟಾಕಿ ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಗೆಳೆಯನ ತಂಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ ಸ್ನೇಹಿತರು: ಕರಳು ಹಿಂಡುತ್ತೆ ಒಬ್ಬೊಬ್ಬರ ಸಾವಿನ ಕಥೆ..!