Rave Party in Bengaluru: ರೇವ್ ಪಾರ್ಟಿ ಪ್ರಕರಣ..ಎಣ್ಣೆ ಕಿಕ್, ಡ್ರಗ್ಸ್ ಕಿಕ್ ಜೊತೆಗೆ ಅದೂ ಸಹ ಇತ್ತಂತೆ!

May 26, 2024, 4:50 PM IST

ಬೆಂಗಳೂರಿನ ಹೊರವಲಯದಲ್ಲಿ ರೇವ್ ಪಾರ್ಟಿ(Rave Party) ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಸಿಬಿ(CCb) ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಅಂಶ ಬೆಳಕಿಗೆ ಬಂದಿದ್ದು, ಡ್ರಗ್ಸ್ (Drugs) ಅಷ್ಟೇ ಅಲ್ಲದೆ ಈ ವೇಳೆ ಯುವತಿಯರ ಅರೆನಗ್ನ ನೃತ್ಯ ಕೂಡ ನಡೆದಿದೆ ಎನ್ನಲಾಗಿದೆ. ಎಣ್ಣೆ ಕಿಕ್, ಡ್ರಗ್ಸ್ ಕಿಕ್, ಜೊತೆ ಲಲನೆಯರ ನೃತ್ಯದ ಕಿಕ್ ಸಹ ಪಾರ್ಟಿ ವೇಳೆ ಇತ್ತು ಎಂದು ಕಂಡುಕೊಳ್ಳಲಾಗಿದೆ. ಆಂಧ್ರಪ್ರದೇಶದ ವಿಧಾನಸಭಾ ಎಲೆಕ್ಷನ್ ಬೆಟ್ಟಿಂಗ್ ಸಹ ಈ ವೇಳೆ ನಡೆದಿದ್ದು, ಸೆಕ್ಸ್ ಪಾರ್ಟಿ ಬಗ್ಗೆ ಮಾಹಿತಿ ತಿಳಿದುಬಂದಿದೆ. 

ಆಂಧ್ರ ವಿಧಾನಸಭೆ ಮಾತ್ರವಲ್ಲದೆ ಲೋಕಸಭೆ ಚುನಾವಣೆ ಸಂಬಂಧವೂ ಬೆಟ್ಟಿಂಗ್ ಕಟ್ಟಿದ್ದರಂತೆ. ತನಿಖೆ ವೇಳೆ ಲಕ್ಷಗಟ್ಟಲೆ ಬೆಟ್ಟಿಂಗ್ ಕಟ್ಟಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಸಿಸಿಬಿ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಈ ನಡುವೆ ತೆಲುಗು ನಟಿ ಹೇಮಾಳ ಮತ್ತೊಂದು ಆಟ ಬಯಲಾಗಿದ್ದು, ಎಲ್ಲಾ ಪ್ರಭಾವಿಗಳಿಂದ ಕರೆ ಮಾಡಿಸುತ್ತಿದ್ದಾರಂತೆ.

ಇದನ್ನೂ ವೀಕ್ಷಿಸಿ:  Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?