ಎಣ್ಣೆ, ಗಾಂಜಾ ನಶೆಯಲ್ಲಿದ್ದವರಿಗೆ ಆಕೆ ಕಾಣಿಸಿದ್ದಳು: ಆಕೆಗೆ ಕಿರಾತಕರು ಮಾಡಿದ್ದೇನು ಗೊತ್ತಾ ?

ಎಣ್ಣೆ, ಗಾಂಜಾ ನಶೆಯಲ್ಲಿದ್ದವರಿಗೆ ಆಕೆ ಕಾಣಿಸಿದ್ದಳು: ಆಕೆಗೆ ಕಿರಾತಕರು ಮಾಡಿದ್ದೇನು ಗೊತ್ತಾ ?

Published : Aug 20, 2023, 02:46 PM IST

ಕ್ರಿಕೆಟ್ ಗ್ರೌಂಡ್‌ಗೆ ಬಂದವಳು ಮನೆಯ ದಾರಿ ಮರೆತಿದ್ದಳು..!
2 ವರ್ಷದ ಮಗು ಜೊತೆ ಹೋದವಳು ವಾಪಸ್ ಬರೆಲೇ ಇಲ್ಲ..!
ರಾತ್ರಿಯಿಡಿ ಹುಡುಕಾಡಿದವರಿಗೆ ಸಿಕ್ಕಿದ್ದು ಮಹಿಳೆಯ ಹೆಣ..!
 

ಅವಳು ಅರೆ ಬುದ್ಧಿ ಮಾಂದ್ಯ ಹೆಣ್ಣುಮಗಳು.. 4 ಗಂಟೆಗೆ ಒಮ್ಮೆ ಮಾತ್ರೆ ತಗೆದುಕೊಳ್ಳಲೇಬೇಕು. ಹೀಗಾಗಿ ಆಕೆ ಮನೆ ಬಿಟ್ಟು ಹೊರಗೆ ಹೋದವಳೇ ಅಲ್ಲ. ಆದ್ರೆ ಆವತ್ತು ಅದೇನಾಯ್ತೋ ಏನೋ.. ಅಕ್ಕನ ಮಗುವನ್ನ ಕರೆದುಕೊಂಡು ಸೀದಾ ಕ್ರಿಕೆಟ್ ಗ್ರೌಂಡ್‌ಗೆ ಹೋಗಿಬಿಟ್ಟಳು. ಹುಡುಗರು ಕ್ರಿಕೆಟ್ ಆಡೋದನ್ನ ನೋಡ್ತಾ ನೋಡ್ತಾ ಆಕೆಗೆ ತಾನು ಎಲ್ಲಿದ್ದೀನಿ ಅನ್ನೋದನ್ನೇ ಮರೆತುಬಿಟ್ಟಳು. ಆದ್ರೆ ಎಷ್ಟೇ ಹೊತ್ತಾದ್ರೂ ಮಗಳು ಮನೆಗೆ ಬರಲೇ ಇಲ್ವಲ್ಲ ಅಂತ ಆಕೆಯ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ರು. ಆದ್ರೆ ಏನೂ ಪ್ರಯೋಜನ ಆಗಲಿಲ್ಲ. ಆದ್ರೆ ಮಗು ಪೊದೆಯೊಂದರಲ್ಲಿ ಸಿಗ್ತು ಅಂತ ಸ್ಥಳಿಯರೇ ತಂದುಕೊಟ್ಟರು. ಆಕೆ ಮಾತ್ರ ಸಿಗಲೇ ಇಲ್ಲ.. ರಾತ್ರಿ ಕಳೆದು ಬೆಳಾಗಾಗ್ತಿದ್ದಂತೆ ಕಾಣೆಯಾದವಳು ಹೆಣವಾಗಿ ಸಿಕ್ಕಿದ್ಲು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ಕ್ಲೂ ಸಿಗಲಿಲ್ಲ.. ಆದ್ರೆ ಅವರಿಗೆ ಸುಳಿವು ಕೊಟ್ಟಿದ್ದು ಶ್ವಾನ. ಯಾವಾಗ ಶ್ವಾನ ಹೋಗಿ ಹರೀಶನ ಮನೆ ಮುಂದೆ ನಿಲ್ತೋ ಆಗಲೇ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ಯಾಕಂದ್ರೆ ಆವತ್ತು ಮಗುವನ್ನ ಹುಡುಕಿ ತಂದವನು ಹರೀಶನೇ ಆಗಿದ್ದ. ಇದರ ಜೊತೆಗೆ ಪೊಲೀಸರಿಗೆ ಸಿಕ್ಕಿದ್ದ ಸಿಸಿಟಿವಿ ದೃಶ್ಯಗಳು ಹರೀಶ ಆ್ಯಂಡ್ ಟೀಂನ ಬೊಟ್ಟು ಮಾಡಿ ತೋರಿಸುತ್ತಿದ್ವು. ತಡಮಾಡದೇ ಹರೀಶ ಮತ್ತು ಇನ್ನಿಬ್ಬರನ್ನ ಪೊಲೀಸರು ಎತ್ತಾಕೊಂಡು ಬಂದು ವರ್ಕ್ ಮಾಡಿದ್ರು. ಆಗಲೇ ನೋಡಿ ಈ ಕೀಚಕರು ಬಾಯಿ ಬಿಡೋದು. ಬೆಂಗಳೂರು(bengaluru) ಸುತ್ತ ಮುತ್ತ ಅವರ ಹೆಸರಲ್ಲಿ ನಾನಾ ಕೇಸ್‌ಗಳಿವೆ.. ಆದ್ರೆ ಅಡ್ಡಾ ಅಂತ ಬಂದ್ರೆ ತಮ್ಮದೇ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶ ಫಿಕ್ಸ್.. ಆವತ್ತು ಹಾಗೆ ತಮ್ಮ ಅಡ್ಡಾದಲ್ಲಿ ಕೂತು ಎಣ್ಣೆ ಜೊತೆಗೆ ಗಾಂಜಾ ನಶೆ ಏರಿಸಿಕೊಳ್ಳೋ ಟೈಂನಲ್ಲೇ ಅವರಿಗೆ ಮುನಿರತ್ನಮ್ಮ ಕಣ್ಣಿಗೆ ಬಿದ್ದಿದ್ದಾಳೆ. ಗಾಂಜಾ ನಶೆಯಲ್ಲೇ ಆಕೆಯನ್ನ ಎಳೆದು ತಂದಿದ್ದಾರೆ. ಆಕೆ ಜೊತೆಗಿದ್ದ ಮಗುವಿಗೂ ಹಲ್ಲೇ ಮಾಡಿ ಬಿಸಾಕಿದ್ದಾರೆ. ಮುನಿರತ್ನಮ್ಮಳನ್ನ ಬೆದರಿಸಿ ಅತ್ಯಾಚಾರ(Rape)  ಮಾಡಿದ್ದಾರೆ. ಕೊನೆಗೆ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ಅವಳನ್ನ ಕೊಂದುಬಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಬಿಎಸ್‌ವೈ “ಧವಳಗಿರಿ”ವ್ಯೂಹ..ಹೇಗಿದೆ ಹುಲಿ ಹೆಜ್ಜೆ..? ರಾಜ್ಯ ಬಿಜೆಪಿಗೆ ಮತ್ತೆ ಅನಿವಾರ್ಯವಾದ್ರಾ ಯಡಿಯೂರಪ್ಪ..?

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more