Rameshwaram Cafe Blast: ಟೋಪಿ..ಮಾಸ್ಕ್..ಗಡ್ಡ..ಯಾರಿವನು..? ಎಲ್ಲಿಗೆ ಬಂತು ಬಾಂಬ್ ಬ್ಲಾಸ್ಟ್ ತನಿಖೆ..? ಆರೋಪಿ ಎಲ್ಲಿ..?

Mar 5, 2024, 5:30 PM IST

ಇವತ್ತಿಗೆ ಸರಿಯಾಗಿ ನಾಲಕ್ಕು ದಿನಗಳ ಹಿಂದೆ ಇಡೀ ದೇಶವನ್ನ ಬೆಚ್ಚಿ ಬೀಳಿಸುವ ಘಟನೆ ನಮ್ಮ ಬೆಂಗಳೂರಿನಲ್ಲಿ(Bengaluru) ನಡೆದಿತ್ತು. ಮಧ್ಯಾಹ್ನದ ಹೊತ್ತಿಗೆ ಪ್ರತಿಷ್ಟಿತ ಹೋಟೆಲ್ ರಾಮೇಶ್ವರಂ ಕೆಫೆಗೆ(Rameswaram cafe) ಎಂಟ್ರಿ ಕೊಟ್ಟ ಒಬ್ಬ ಶಂಕಿತ. ಸೈಲೆಂಟಾಗಿ ಬಾಂಬ್ ಇಟ್ಟು ಹೋಗಿಬಿಟ್ಟಿದ್ದ. ಆತ ಇಟ್ಟ ಬಾಂಬ್ 9 ಮಂದಿಯನ್ನ ಆಸ್ಪತ್ರೆಗೆ ಸೇರಿಸಿತ್ತು. ಆದ್ರೆ ಈ ಘಟನೆ ಇಡೀ ಬೆಂಗಳೂರನ್ನೇ ಆತಂಕ ಪಡುವಂತೆ ಮಾಡಿತ್ತು. ತನಿಖೆ ನಡೆಸಿದ ಪೊಲೀಸರು(Police) ಆ ಶಂಕಿತನ ಬೆನ್ನುಬಿತ್ತು. ಆದ್ರೆ ಬರೊಬ್ಬರಿ 4 ದಿನ ಕಳೆದರೂ ಆ ಶಂಕಿತನ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಆ ಶಂಕಿತ ಪೊಲೀಸರನ್ನ ಚೆನ್ನಾಗೇ ದಿಕ್ಕು ತಪ್ಪಿಸಿದ್ದಾನೆ. ಹಾಗಾದ್ರೆ ಆ ಬಾಂಬರ್ ಅದೇಗೆ ಪೊಲೀಸರಿಗೆ ದಿಕ್ಕು ತಪ್ಪಿಸಿದ. ಸದ್ಯ ಪೊಲೀಸರು ಆ ಶಂಕಿತನ ಎಲ್ಲಾ ಮೂಮೆಂಟ್‌ಗಳನ್ನ ರೀಡ್ ಮಾಡಿದ್ದಾರೆ. ಘಟನೆ ನಡೆದು 4 ದಿನವಾದ್ರೂ ಬಾಂಬ್ ಇಟ್ಟವನು ಯಾರು ಅನ್ನೋದು ಇದೂವರೆಗೂ ಗೊತ್ತಾಗಿಲ್ಲ. ಅದಕ್ಕೆ ಕಾರಣ ಅಲ್ಲಿ ಬಂಬ್ ಇಡಲು ಬಂದಿದ್ದ ಶಂಕಿತ ತಿಂಗಳುಗಟ್ಟಲೆ ಹೋಂ ವರ್ಕ್ ಮಾಡಿದ್ದ. ಆದ್ರೆ ಅವನ ಬೆನ್ನುಬಿಡದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.. ಅಷ್ಟೇ ಅಲ್ಲ ಮೂವರು ಮೋಸ್ಟ್ ವಾಂಟೆಡ್‌ಗಳ ಮೇಲೆ ಅನುಮಾನವಿದ್ದು ಅವರ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ವೀಕ್ಷಿಸಿ:  Ticket Demand by Muslims: ಕಾಂಗ್ರೆಸ್ ಟಿಕೆಟ್ ಲೆಕ್ಕಾಚಾರವನ್ನೇ ಬದಲಿಸುತ್ತಾ ಮುಸ್ಲಿಮರ ಈ ಡಿಮ್ಯಾಂಡ್..?