ಗೋ ರಕ್ಷಣೆ ಮಾಡ್ತೀನಿ ಅಂತ ಹೆಣ ಬೀಳಿಸಿದನಾ ಪುನೀತ್ ಕೆರೆಹಳ್ಳಿ? ರಾಜಸ್ಥಾನದಲ್ಲಿ ಸಿಕ್ಕಿಬಿದ್ದ ಕಥೆ ಗೊತ್ತಾ..?

ಗೋ ರಕ್ಷಣೆ ಮಾಡ್ತೀನಿ ಅಂತ ಹೆಣ ಬೀಳಿಸಿದನಾ ಪುನೀತ್ ಕೆರೆಹಳ್ಳಿ? ರಾಜಸ್ಥಾನದಲ್ಲಿ ಸಿಕ್ಕಿಬಿದ್ದ ಕಥೆ ಗೊತ್ತಾ..?

Published : Apr 06, 2023, 06:56 PM ISTUpdated : Apr 06, 2023, 06:57 PM IST

ಕನಕಪುರದಲ್ಲಿ ಗೋರಕ್ಷಣೆ ಹೆಸರಿನಲ್ಲಿ..!
ದನದ ವ್ಯಾಪಾರಿಯನ್ನ ಕೊಂದಿತಾ ಪುನೀತ್ ಗ್ಯಾಂಗ್..?
ರಾಜಸ್ಥಾನದಲ್ಲಿ ತಗ್ಲಾಕಿಕೊಂಡ ಪುನೀತ್ ಗ್ಯಾಂಗ್..!

ನಾನು ಹಿಂದೂ ಕಾರ್ಯಕರ್ತ.. ಗೋರಕ್ಷಕ.. ಅಂತ ಅವನೊಬ್ಬ ಹೆಳಿಕೊಂಡು ತಿರುಗಾಡುತ್ತಿದ್ದ.. ಪ್ರತೀ ದಿನ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಬರೋದು.. ನಾನು ಹಿಂದೂ ಕಾರ್ಯಕರ್ತ.. ಗೋ ರಕ್ಷಕ ಅಂತ ಹೇಳಿಕೊಂಡು ಸುಖಾಸುಮ್ಮನೆ ಟಾರ್ಚರ್ ಕೊಡ್ತಿದ್ದ.. ಅವನೇ ಪುನೀತ್ ಕೇರೆಹಳ್ಳಿ..  

ಫೇಸ್ಬುಕ್ನಲ್ಲೇ ಆರ್ಭಟಿಸುತ್ತಿದ್ದ ಈ ಡೋಂಗಿ ಗೋರಕ್ಷಕ.. ಅವತ್ತು ಏನಾಯ್ತೋ ಏನೋ ಫೀಲ್ಡ್‌ಗೆ ಇಳಿದುಬಿಟ್ಟಿದ್ದ. ಫೇಸ್ಬುಕ್ ಲೈವ್ನಲ್ಲೇ ಹಸುಗಳನ್ನ ಸಾಗಿಸುತ್ತಿದ್ದ ಕ್ಯಾಂಟರ್ನ ಹಿಡಿದುಬಿಟ್ಟಿದ್ದ.. ಲೈವ್ನಲ್ಲೇ ಫುಲ್ ಪೋಸ್ ಕೊಟ್ಟಿದ್ದ.. ಆದ್ರೆ ಇವನ ಬ್ಯಾಡ್ ಲಕ್.. ಈತ ರೈಡ್ ಮಾಡಿದ ಕ್ಯಾಂಟರ್ನಲ್ಲಿದ್ದ ಒಬ್ಬ ವ್ಯಕ್ತಿ ಮೃತಪಟ್ಟ.. ಅಷ್ಟೇ.. ಈ ವಿಷ್ಯ ಗೊತ್ತಾಗ್ತಿದ್ದಂತೆ ಆಸಾಮಿ ಎಸ್ಕೇಪ್... ಆದ್ರೆ ಪೊಲೀಸರು ಸುಮ್ಮನೆ ಬಿಡ್ತಾರೆ. ತಲೆತಪ್ಪಿಸಿಕೊಂಡು ಊರೂರು ತಿರುಗುತ್ತಿದ್ದ ಸೋಷಿಯಲ್ ಮಿಡಿಯಾ ಹೀರೋನನ್ನ ಪೊಲೀಸರು ಎತ್ತಾಕೊಂಡು ಬಂದಿದ್ದಾರೆ.. ಹೀಗೆ ಗೋರಕ್ಷಣೆ ಮಾಡ್ತೀನಿ ಅಂತ ಹೋಗಿ ಒಬ್ಬನ ಹೆಣ ಹಾಕಿದ ಡೋಗಿ ಗೋ ರಕ್ಷಕನ ಕಥೆಯೇ ಇವತ್ತಿನ ಎಫ್.ಐ.ಆರ್..

ಮಂಡ್ಯದಿಂದ ಬರ್ತಿದ್ದ ವಾಹನವನ್ನ ಅಡ್ಡಗಟ್ಟಿ ಅದರಲ್ಲಿದ್ದ ಗೋವುಗಳನ್ನ ರಕ್ಷಣೆ ಮಾಡಿ ಇದೇ ಪುನೀತ್ ಕೇರೆಹಳ್ಳಿ ಆ್ಯಂಡ್ ಗ್ಯಾಂಗ್ ಅವತ್ತು ಫೇಸ್ಬುಕ್ನಲ್ಲಿ ಲೈವ್ ಮಾಡಿ ಬಿಲ್ಡ್ ಅಪ್ ಕೊಟ್ಟಿತ್ತು.. ಸಾತನೂರು ಪೊಲೀಸರು ಇವರಿಗೆ ಶಹಬಾಸ್ ಅಂತ ಹೇಳಿ ಅವನ ಕೈನಲ್ಲೇ ಒಂದು ಕಂಪ್ಲೆಂಟ್ ದಾಖಲಸಿಕೊಂಡು ಅವರನ್ನ ಕಳಹುಹಿಸಿದ್ದರು. ಆದ್ರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಅವತ್ತು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಇದೇ ಠಾಣೆಗೆ ಒಂದು ಕಾಲ್ ಬಂದಿತ್ತು.. ಪುನೀತ್ ಆ್ಯಂಡ್ ಗ್ಯಾಂಗ್ ರೈಡ್ ಮಾಡಿದ ಜಾಗದಲ್ಲೇ ಒಂದು ಡೆಡ್ ಬಾಡಿ ಸಿಕ್ಕಿತ್ತು. ಸದ್ಯ ಪೊಲೀಸರು ಪುನೀತ್ ಆ್ಯಂಡ್ ಗ್ಯಾಂಗ್ನ ಬಂಧಿಸಿ ರಾಜಸ್ಥಾನದ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಇನ್ನೆರಡು ದಿನದಲ್ಲಿ ರಾಮನಗರಕ್ಕೆ ಕರೆದುಕೊಂಡು ಬರ್ತಾರೆ.. ಅಷ್ಟರಲ್ಲಿ ಅವತ್ತು ಮೃತನಾದವನ ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೂಡ ಬರುತ್ತೆ.. ಆಗ ಈ ಕೇಸ್ ಒಂದು ಹಂತಕ್ಕೆ ತಲುಪುತ್ತದೆ.

25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
Read more