ವಿಡಿಯೋ ವೈರಲ್ ಆಗ್ತಿದ್ದಂತೆ 	ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್ ?

ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್ ?

Published : Apr 30, 2024, 05:12 PM IST

ಪ್ರಜ್ವಲ್ ರೇವಣ್ಣನ ನೂರಾರು ಅಶ್ಲೀಲ ವಿಡಿಯೋ ವೈರಲ್
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ತನಿಖೆ ಎಸ್ಐಟಿಗೆ
ಎಸ್ಐಟಿ ತನಿಖೆಗೆ ಒತ್ತಾಯಿಸಿ ಮಹಿಳಾ ಆಯೋಗದ ಪತ್ರ

ಅವನು ಸಂಸದ, ಪಾರ್ಲಿಮೆಂಟ್‌ನಲ್ಲಿ ಕೂತು ತನ್ನ ಜನರ ಪರವಾಗಿ ಧ್ವನಿ ಎತ್ತಬೇಕಿದ್ದವ.ಆದ್ರೆ ಆತ ಮಾಡಿದ್ದು ಮಾತ್ರ ಇಡೀ ಮನಕುಲವೇ ಛೀ.. ಥೂ..ಅಂತ ಉಗಿಯುವ ಕೆಲಸವನ್ನ. ನಾವು ಮಾತನ್ನಾಡ್ತೀರೋದು ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಬಗ್ಗೆ.ಎಲೆಕ್ಷನ್‌ಗೂ ಕೆಲವೇ ದಿನಗಳ ಹಿಂದೆ ವೈರಲ್ ಆದ ಕೆಲ ವಿಡಿಯೋಗಳು ರೇವಣ್ಣನ ಕುಟುಂಬವನ್ನ ಬೆತ್ತಲಾಗಿಸಿದೆ.ಇನ್ನೂ ಇದೇ ವಿಡಿಯೋಗಳನ್ನೇ ಇಟ್ಟುಕೊಂಡು ಕೆಲ ಹೆಣ್ಣು ಮಕ್ಕಳು ಕೇಸ್ ದಾಖಲಿಸಿದ್ದಾರೆ.ಒಟ್ಟಿನಲ್ಲಿ ಈ ಪೆನ್‌ಡ್ರೈವ್‌ ಪ್ರಕರಣ (Pen Drive Case) ಕ್ಷಣಕ್ಷಣಕ್ಕೂ ಹೊಸ ತಿರುವುಗಳನ್ನ ಪಡೆದುಕೊಳ್ತಿದೆ. ಆದ್ರೆ ಇದೇ ಪ್ರಕರಣದ ಬಗ್ಗೆ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಯಾವಾಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹೊರ ಬಂತೋ ಕಾಂಗ್ರೆಸ್ ಸಿಡಿದೆದ್ದಿದೆ. ಬೀದಿಗಿಳಿದು ಪ್ರತಿಭಟಿಸುತ್ತಿದೆ. ಜೆಡಿಎಸ್ (JDS) ಮತ್ತು ಬಿಜೆಪಿ(BJP) ನಾಯಕರ ವಿರುದ್ಧ ಮಾತಿನ ಸಮರ ಶುರು ಮಾಡಿದೆ. ಮೋದಿ (Narendra Modi) ಈ ಪ್ರಕರಣದ ಬಗ್ಗೆ ಮಾತನ್ನಾಡಬೇಕು ಅಂತಿದ್ದಾರೆ. ಆದ್ರೆ ಇತ್ತ ಬಿಜೆಪಿ ಮಾತ್ರ ಈ ವಿವಾದದಿಂದ ಅಂತರ ಕಾಯ್ದುಕೊಳ್ಳುತ್ತಿದೆ. ರಾಸಲೀಲೆ ಪ್ರಕರಣಗಳು ರಾಜ್ಯ ರಾಜಕೀಯದಲ್ಲಿ ರಾಡಿ ಎಬ್ಬಿಸಿರುವುದು ಇದೇ ಮೊದಲಲ್ಲ. ಆದ್ರೆ ಈ ಬಾರಿ ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಜ್ವಲ್ ಅಶ್ಲೀಲ  ವಿಡಿಯೋ ಕೋಲಾಹಲ ಎಬ್ಬಿಸಿದೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ವಿರುದ್ಧ 'ಕೈ'ಪ್ರಚಾರ, ಎಲ್ಲಿ..? ಯಾಕೆ..? ಪಕ್ಷದ ಗದ್ದುಗೆ ಹಾದಿಗೆ ಎದುರಾಯ್ತಾ ಕಲ್ಲು ಮುಳ್ಳು..?

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more