ಬಾಂಬ್ ಇಟ್ಟ ನಂತರ ಶಂಕಿತ ಕಾಲ್ ಮಾಡಿದ್ಯಾರಿಗೆ..? ಎಲ್ಲಿಗೆ ಬಂತು ಬಾಂಬ್ ಬ್ಲಾಸ್ಟ್ ತನಿಖೆ..? ಆರೋಪಿ ಎಲ್ಲಿ..?

Mar 3, 2024, 4:18 PM IST

ಈಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ(Rameswaram cafe bomb blast) ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಬಾಂಬ್ ಬ್ಲಾಸ್ಟ್(Bomb Blast) ಆದ ನಂತರ 9 ಮಂದಿ ಗಾಯಾಳುವಾಗಿ ಆಸ್ಪತ್ರೆ ಸೇರಿದ್ರು. ಅದರಲ್ಲೊಬ್ಬರು ತಮ್ಮ ದೃಷ್ಟಿಯನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ಇನ್ನೂ ಆ ಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನ ಕಲೆ ಹಾಕಿ ಆ ಶಂಕಿತನ ಚಹರೆಯನ್ನೂ ಪತ್ತೆ ಹಚ್ಚಿದ್ದಾರೆ. ಸ್ಫೋಟವಾಗಿ ಕೆಲವೇ ಗಂಡೆಗಳಲ್ಲಿ ಪೊಲೀಸರು(Police) ಆ ಕೃತ್ಯ ನಡೆಸಿದ ಶಂಕಿತ ಚಹರೆಯನ್ನ ಪತ್ತೆ ಹಚ್ಚಿದ್ರು. ತನಿಖೆಯ ಜವಬ್ದಾರಿ ಹೊತ್ತಿದ ಸಿಸಿಬಿ ಒಂದು ಸೆಕೆಂಡ್ ಕೂಡ ಟೈಂ ವೇಸ್ಟ್ ಮಾಡದೇ ಸಂಕಿತನ ಹಿಂದೆ ಬಿದ್ದಿದ್ದಾರೆ. ಘಟನೆ ನಡೆದ ಕೂಡಲೇ ಏಳೆಂಟು ಸ್ಪೆಷಲ್ ಟೀಂ ರೆಡಿ ಮಾಡಿಕೊಂಡು ಅಖಾಡಕ್ಕಿಳಿದೇ ಬಿಟ್ಟರು ಪೊಲೀಸರು. ಹೋಟೆಲ್‌ನ ಅಕ್ಕಪಕ್ಕದ ಸಿಸಿಟಿವಿಗಳನ್ನ ಜಾಲಾಡಿ ಶಂಕಿತನ ಚಹರೆಯನ್ನ ಪತ್ತೆ ಹಚ್ಚೇಬಿಟ್ಟರು. ಇನ್ನೂ ಅದೇ ಶಂಕಿತನ ಹಿಂದೆ ಬಿದ್ದ ಪೊಲೀಸರು ಆತ ಕೃತ್ಯ ಎಸಗುವ ಮುನ್ನ ಏನೇನು ಮಾಡಿದ ಅಂತೆಲ್ಲಾ ಪತ್ತೆ ಹಚ್ಚಿದ್ರು.. ಅಷ್ಟೇ ಅಲ್ಲ ಮೂರು ಮಂದಿಯನ್ನ ವಷಕ್ಕೆ ಕೂಡ ಪಡೆದುಬಿಟ್ಟರ.

ಇದನ್ನೂ ವೀಕ್ಷಿಸಿ:  ಹೊರ ರಾಜ್ಯದಿಂದ ಬಂದು ಬಾಂಬ್ ಇಟ್ಟನಾ ಆರೋಪಿ..? FSLನಲ್ಲಿ ಬರಲಿದೆಯಾ ಅಚ್ಚರಿಗೊಳಿಸುವ ವರದಿ..?