Jul 2, 2024, 11:47 AM IST
ಮಡಿವಾಳ ಪೊಲೀಸ್ ಕಾನ್‌ಸ್ಟೇಬಲ್ ಶಿವರಾಜ್(Constable Shivaraj) ಆತ್ಮಹತ್ಯೆ ಪ್ರಕರಣಕ್ಕೆ(Suicide case) ಸಂಬಂಧಿಸಿದಂತೆ ಅವರ ಮೃತದೇಹ ಪತ್ತೆ ಮಾಡಿದ್ದೇ ಒಂದು ರೋಚಕ ಕಥೆಯಾಗಿದೆ. ಶಿವರಾಜ್ ಮೃತದೇಹ(Dead Body) ಪತ್ತೆಗೆ ಬರೋಬ್ಬರಿ 250 ಸಿಸಿಟಿವಿ ತಲಾಶ್ ನಡೆಸಲಾಗಿದೆ. ಮಡಿವಾಳ ಪೊಲೀಸರಿಂದಲೇ ಶಿವರಾಜ್ ಮೃತದೇಹಕ್ಕೆ ಹುಡುಕಾಟ ನಡೆಸಿದ್ದು, ಸುಬ್ರಮಣ್ಯಪುರದಿಂದ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ವರೆಗೂ ಪರಿಶೀಲನೆ ನಡೆಸಲಾಗಿದೆ. ಐದು ದಿನಗಳಿಂದ ನಿರಂತರವಾಗಿ ಪೊಲೀಸರು(Police) ಹುಡುಕಾಟ ನಡೆಸಿದ್ದರು. ಮೆಟ್ರೊ ಸ್ಟೇಷನ್ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದ ಶಿವರಾಜ್, ಬಳಿಕ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಒಳಗೆ ನಡೆದು ಬಂದಿದ್ದರು. ಶಿವರಾಜ್ ವಿವಿ ಒಳಗೆ ನಡೆದು ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ವಿವಿ ಆವರಣದಲ್ಲಿ ಹುಡುಕಾಡಿದ್ದ ಮಡಿವಾಳ ಪೊಲೀಸರು, ವಿವಿ ಆವರಣದಲ್ಲಿ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ಪತ್ತೆಯಾಗಿದೆ. ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದ ಮಡಿವಾಳ ಪೊಲೀಸರು. ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಮೃತದೇಹ ಹೊರತೆಗೆದಾಗ ಬೆನ್ನಿಗೆ ಕಲ್ಲು ಕಟ್ಟಿರೋದು ಬೆಳಕಿಗೆ ಬಂದಿದೆ. ಶಿವರಾಜ್ ಸಾವು ಕೊಲೆ ಎಂಬುದಾಗಿ ಅನುಮಾನ ವ್ಯಕ್ತವಾಗಿತ್ತು. ಆದ್ರೆ ಸಿಸಿಟಿವಿಯಲ್ಲಿ ಒಬ್ಬನೇ ಬಂದಿರೋದ್ರಿಂದ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ಇದನ್ನೂ ವೀಕ್ಷಿಸಿ: 15 ನೂತನ ಪುಸ್ತಕಗಳ ಲೋಕಾರ್ಪಣೆ: ಖ್ಯಾತ ಬರಹಗಾರ ಜೋಗಿಯಿಂದ ಪುಸ್ತಕ ರಿಲೀಸ್