ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣ ಲೂಟಿ..! ನಿಮ್ಮ ದುಡ್ಡು ಖಾಲಿ ಮಾಡ್ತಾಳೆ ಸುಂದರಿ ಮ್ಯಾನೇಜರ್..!

ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣ ಲೂಟಿ..! ನಿಮ್ಮ ದುಡ್ಡು ಖಾಲಿ ಮಾಡ್ತಾಳೆ ಸುಂದರಿ ಮ್ಯಾನೇಜರ್..!

Published : Aug 19, 2023, 12:56 PM IST

ವೃದ್ಧೆಯ ಹಣ ದೋಚಲು ಕಳ್ಳರೆಲ್ಲಾ ಒಂದಾಗಿದ್ರು..!
ವಾಸ್ತು ಸರಿಯಿಲ್ಲ ಅಂತ ಹೇಳಿ 3 ಕೋಟಿ ಮನೆ ಮಾರಿಸಿದ್ರು..!
ಬೇಕಾಬಿಟ್ಟಿ ಸೈನ್ ಮಾಡಿಸಿದ್ರು ಬ್ಯಾಂಕ್ ಮ್ಯಾನೇಜರ್..!
 

ನಿಮ್ಮ ಅಕೌಂಟ್‌ನಲ್ಲಿ ದುಡ್ಡು ಇಟ್ಟಿದ್ದೀರಾ..? ಮನೆಯಲ್ಲಿ ಒಂಟಿಯಾಗಿದ್ದೀರಾ..? ಹಾಗಿದ್ರೆ ಹುಷಾರ್... ದಿಕ್ಕಿಲ್ಲದವರು ಅಲ್ಪಸ್ವಲ್ಪ ಹಣವನ್ನ ಎಫ್.ಡಿ ಮಾಡಿಕೊಂಡು ತಮ್ಮ ಪಾಡಿಗೆ ಜೀವನ ಮಾಡ್ತಿರೋರನ್ನ ಸುಂದರಿಯೊಬ್ಬಳು ಟಾರ್ಗೆಟ್ ಮಾಡಿ ಕೂತಿರುತ್ತಾಳೆ. ಒಮ್ಮೆ ಅಕೌಂಟ್‌ನಲ್ಲಿ(Account) ದೊಡ್ಡ ಮೊತ್ತದ ಹಣ ಇದೆ ಅಂದ್ರೆ ಮುಗತೀತು, ಆಕೆ ನಿಮ್ಮನ್ನ ಬರ್ಬಾದ್ ಮಾಡಿಬಿಡ್ತಾಳೆ. ಹೀಗೆ  ಗಂಡನನ್ನ ಕಳೆದುಕೊಂಡ ವೃದ್ಧೆಯೊಬ್ಬಳು ಆ ಸುಂದರಿಯ ಮಾತಿನ ಬಲೆಗೆ ಬಿದ್ದು ಅವಳ ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣವನ್ನ ಕಳೆದುಕೊಂಡು ಇವತ್ತು ತಲೆಯ ಮೇಲೆ ಕೈಹೊತ್ತು ಕೂತಿದ್ದಾಳೆ. ಯಾವಾಗ ಅಜ್ಜಿಯ ಅಕೌಂಟ್‌ಗೆ ಮೂರುವರೆ ಕೋಟಿ ಬಿತ್ತೋ ಅಪೂರ್ವಾ ಅಲರ್ಟ್ ಆಗ್ತಾಳೆ. ಯಾಕಂದ್ರೆ ಶಾಂತಾ ಒಂಟಿಯಾಗಿ ಜೀವನ ಮಾಡ್ತಿದ್ದಿದ್ದು ಆಕೆಗೂ ಗೊತ್ತಿರುತ್ತೆ. ಇನ್ನೂ ಆಕೆಗೆ ಮೋಸ ಮಾಡಿದ್ರೂ ಯಾರಿಗೂ ಗೊತ್ತಾಗಲ್ಲ ನಾವು ಸೇಫ್ ಅಂತ ಯೋಚನೆ ಮಾಡ್ತಾಳೆ. ಪಕ್ಕಾ ಪ್ಲಾನ್ ಮಾಡಿಕೊಂಡು ಫೀಲ್ಡ್ಗೆ ಇಳಿದೇ ಬಿಡ್ತಾಳೆ ಆಗ ಅವಳಿಗೆ ಸಹಾಯ ಮಾಡಿದವರೇ ಅರಂಧತಿ ಮತ್ತು ರಾಕೇಶ ದಂಪತಿ. ಅಜ್ಜಿಯ ಅಕೌಂಟ್ ಬ್ಯಾಲೇನ್ಸ್ ಜೀರೋ ಮಾಡೋಕ್ಕೆ ಎಲ್ಲಾ ದಿಕ್ಕುಗಳಿಂದಲೂ ಕಿರಾತಕರು ರೆಡಿಯಾಗಿದ್ರು. ಮನೆ(House) ಮಾರಿದ್ದು ಮೂರುವರೆ ಕೋಟಿ.. ಎಫ್.ಡಿ ಹಣ 4 ಕೋಟಿ.. ಒಟ್ಟು ಏಳುವರೆ ಕೋಟಿ ಯಾರಿಗುಂಟು ಯಾರಿಗಿಲ್ಲ. ಶಾಂತಜ್ಜಿಯನ್ನ ಯಾಮಾರಿಸಿ ದುಡ್ಡು ಬಾಚಿಬಿಡೋಣ ಅಂದುಕೊಂಡಿದ್ದವರು ಒಂದಾದ್ರು. ಎಲ್ಲಾ ಪಕ್ಕಾ ಪ್ಲಾನ್ ಮಾಡಿ ಆಕೆಯಿಂದ ಖಾಲಿ ಚೆಕ್ಗಳಿಗೆ, ಟ್ರಾನ್ಸ್ಫರ್ ನೋಟೀಸ್‌ಗಳಿಗೆ ಆಕೆಗೆ ಗೊತ್ತಿರದ ಹಾಗೆ ಸೈನ್ ಮಾಡಿಸಿಕೊಂಡ್ರು. ಆಕೆಗೆ ಗೊತ್ತಿಲ್ಲದ ಹಾಗೆ ಹಣವನ್ನೆಲ್ಲಾ ಡ್ರಾ ಮಾಡಿಕೊಂಡ್ರು.. ಅವರ ಸಾಲಗಳನ್ನೆಲ್ಲಾ ತೀರಿಸಿಕೊಂಡ್ರು. ಆದ್ರೆ ಉಪ್ಪು ತಿಂದವನು ನೀರು ಕುಡಿಯಲೇಬೇಕಲ್ಲ.. ಒಮ್ಮೆ ದುಡ್ಡು ಡ್ರಾ ಮಾಡಲು ಬ್ಯಾಂಕ್‌ಗೆ ಹೋದ ಅಜ್ಜಿಗೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ತಲೆ ತಿರಿಗಿದೆ. ಬ್ಯಾಂಕ್‌ನಿಂದ ಸೀದಾ ಪೊಲೀಸ್ ಠಾಣೆಗೆ ಹೋಗಿದ್ದಾಳೆ.

ಇದನ್ನೂ ವೀಕ್ಷಿಸಿ:  ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more