Apr 4, 2024, 11:09 AM IST
ರಾಯಚೂರು(ಏ.04): ಅವಳು ಒಂಟಿ ವೃದ್ಧೆ, ಇದ್ದೊಬ್ಬ ಮಗಳು ಸತ್ತು ಹೋದ ಮೇಲೆ ಮೊಮ್ಮಕ್ಕಳ ಜವಾಬ್ದಾರಿಯನ್ನ ಆಕೆಯೇ ಹೊತ್ತಿದ್ದಳು. ಕಷ್ಟಪಟ್ಟು ದುಡ್ಡು ಸಂಪಾದಿಸುತ್ತಿದ್ದಳು. ಇನ್ನೂ ಬೇಜಾನು ದುಡ್ಡು ಸಂಪಾದಿಸುವ ಕನಸು ಕಂಡಿದ್ದ ಆಕೆ ಕೆಲವರಿಗೆ ಬಡ್ಡಿಗೆ ದುಡ್ಡನ್ನೂ ಕೊಟ್ಟಿದ್ಲು. ಹೀಗೇ ಇಳಿ ವಯಸಿನಲ್ಲಿ ಸಖತ್ ಆ್ಯಕ್ಟೀವಾಗಿದ್ದ ಆಜ್ಜಿ ಆವತ್ತೊಂದೊಂದು ದಿನ ನಾಪತ್ತೆಯಾಗಿಬಿಟ್ಟಿದ್ದಳು. ಎಲ್ಲೇ ಹುಡುಕಾಡಿದ್ರೂ ಸಹ ಆಕೆ ಸಿಗೋದಿಲ್ಲ. ಆದ್ರೆ ಕೊನೆಯಲ್ಲಿ ಅವಳ ಮೃತದೇಹ ಕೆರೆಯಲ್ಲಿ ಸಿಕ್ಕಿತ್ತು. ಹಾಗಾದ್ರೆ ಆ ಅಜ್ಜಿಗೆ ಏನಾಯ್ತು..? ಅವಳನ್ನ ಕೊಲೆ ಮಾಡಲಾಗಿತ್ತಾ..? ಕೊಲೆ ಮಡಿದ್ರೂ ಯಾರು ಮಾಡಿದ್ದು..? ಒಬ್ಬ ವೃದ್ಧೆಯ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್.
ದುಡಿದ ದುಡ್ಡನ್ನ ಬ್ಯಾಂಕ್ನಲ್ಲಿಟ್ಟುಕೊಂಡಿದ್ದಿದ್ರೆ ಇವತ್ತು ಅಜ್ಜಿ ಬದುಕುಳಿದಿರುತ್ತಿತ್ತು. ಆದ್ರೆ ಅತೀ ಆಸೆ ಪಟ್ಟು ಇವತ್ತು ಮಸಣ ಸೇರಿದ್ದಾಳೆ. ಮೊಮ್ಮಕ್ಕಳಿಗಾಗಿ ಆಸ್ತಿ ಮಾಡಲು ಹೋದ ವೃದ್ಧೆಯು ಜೀವ ಕಳೆದುಕೊಂಡಿದ್ದಳು.
ಬೆಂಗಳೂರು: ಜ್ಯುವೆಲರಿ ಅಂಗಡಿ ಶೂಟೌಟ್ ಕೇಸ್ಗೆ ಟ್ವಿಸ್ಟ್, ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ!
ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿ ಎಂಬ ಗಾದೆಯಿದೆ. ಈ ಗಾದೆ ಆಗ್ಗಾಗೆ ನಿಜ ಆಗ್ತಲೇ ಇರುತ್ತವೆ. ಅದರಲ್ಲೂ ಜಮೀನು, ಹಣ ಮತ್ತು ಹೆಣ್ಣಿನ ವಿಚಾರಕ್ಕೆ ಬಂದ್ರೆ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆಗಳು ಜಾಸ್ತಿ. ಅದಕ್ಕೆ ಸಾಕ್ಷಿ ಈ ಸ್ಟೋರಿ.. ಜಸ್ಟ್ 2 ಎಕರೆ ಭೂಮಿಗಾಗಿ ಅಣ್ಣ ತಮ್ಮಂದಿರು ಕಿತ್ತಾಡಿಕೊಂಡು ಒಬ್ಬನ ಪ್ರಾಣವನ್ನೇ ತೆಗೆದುಬಿಟ್ಟಿದ್ದಾರೆ.. ತಮ್ಮನ ಅಸೆಗೆ ಬಿದ್ದ ಅಣ್ಣಂದಿರು ತಮ್ಮನ ಕಥೆಯನ್ನೇ ಮುಗಿಸಿ ಈಗ ಜೈಲು ಪಾಲಾಗಿದ್ದಾರೆ.
ನೋಡಿದ್ರಲ್ಲ.. ಒಡಹುಟ್ಟಿದ್ದವರೇ ಅದೇಗೆ ಕಿತ್ತಾಡಿಕೊಂಡು ಸತ್ತಿದ್ದಾರೆ ಅಂತ.. ಸದ್ಯ ತಮ್ಮ ಮಸಣ ಸೇರಿದರೆ ಅಣ್ಣಂದಿರು ಜೈಲು ಪಾಲಾಗಿದ್ದಾರೆ. ಅದ್ರೆ ಅವರನ್ನೇ ನಂಬಿಕೊಂಡಿದ್ದ ಕುಟುಂಬಗಳು ಇವತ್ತು ಬೀದಿಗೆ ಬಿದ್ದಿವೆ.