ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!

ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!

Published : Oct 19, 2023, 02:18 PM IST

ಅವಳಿಂದ ತಂದೆಯೂ ಆತ್ಮಹತ್ಯೆ ಮಾಡಿಕೊಂಡರು..!
3 ಬಾರಿ ಮನೆ ಬಿಟ್ಟರೂ ಆತ ಆಕೆಯನ್ನ ಕ್ಷಮಿಸಿದ್ದ..!
ಮಕ್ಕಳಿಗಾಗಿ ಹೆಂಡತಿ ಮಾಡಿದ್ದನ್ನೆಲ್ಲಾ ಸಹಿಸಿಕೊಂಡ..!

ಅದು ಮೂರ್ತಿ ಕೆತ್ತನೆಯ ಶಿಲ್ಪಿಗಳ ಕುಟುಂಬ. ಊರೂರು ಸುತ್ತಿ ದೇವಸ್ಥಾನದ(Temple) ವಿಗ್ರಹಗಳನ್ನ ಕೆತ್ತನೆ ಮಾಡೋದೇ ಅವರ ಕಾಯಕ. ಆದ್ರೆ ಹೀಗೊಂದು ಒಳ್ಳೆ ಕೆಲಸ ಮಾಡ್ತಿದ್ದ ಕುಟುಂಬದಲ್ಲಿ ಇವತ್ತು ಒಂದು ಹೆಣಬಿದ್ದಿದೆ. ಮನೆಗೆ ಬೆಳಕಾಗಿದ್ದ ಸೊಸೆ ಕೊಲೆಯಾಗಿ(Murder) ಹೋಗಿದ್ದಾಳೆ. ಇನ್ನೂ ಕೊಲೆ ಮಾಡಿದವನು ಆಕೆಯ ಗಂಡನೇ. ಪ್ರೀತಿಸಿ(Love) ಮದುವೆಯಾದವಳನ್ನೇ ಆ ಪಾಪಿ ಕೊಂದು ಬಿಟ್ಟಿದ್ದ. ಲೋಕೆಶನನ್ನ ಮದುವೆಯಾದ ನಂದಿನಿ ತುಂಬು ಕುಟುಂಬಕ್ಕೆ ಎಂಟ್ರಿಯಾದಳು. ಅಲ್ಲೇ ಗಂಡನೊಂದಿಗೆ ಸುಖವಾಗಿ ಜೀವನ ಮಾಡ್ತಿದ್ಲು. ಆದ್ರೆ ಮೂರು ದಿನಗಳ ಹಿಂದಷ್ಟೇ ಮಾವನ ಮನೆ ಬಿಟ್ಟು  ಬಾಡಿಗೆ ಮನೆ ಮಾಡಿ ಹೊಸ ಜೀವನ ಆರಂಭಿಸಿದ್ರು. ಆದ್ರೆ ಮೂರೇ ದಿನ, ನಂದಿನಿಯನ್ನ ಲೋಕೇಶ ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದಾನೆ. ಪ್ರೀತಿಸಿ ಮದುವೆಯಾದ ನಂತರ ನಂದಿನಿ ಗಂಡನ ಮೇಲಿನ ಪ್ರೀತಿಯನ್ನ ಕಡಿಮೆ ಮಾಡಿಕೊಂಡಳು. ಮನೆ ಬಿಟ್ಟು ಮೂರು ಬಾರಿ ಬೇರೆಯವರ ಜೊತೆ ಹೋಗಿದ್ದಳು. ಆದ್ರೂ ಲೋಕೇಶ ಮೂರು ಬಾರಿಯೂ ಆಕೆಯನ್ನ ಕ್ಷಮಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ. ಆದ್ರೆ ಲೋಕೇಶ ಆಕೆಗೆ ಎಷ್ಟೇ ಚಾನ್ಸ್ ಕೊಟ್ಟರೂ ನಂದಿನಿ ಮಾತ್ರ ಬುದ್ಧಿ ಕಲಿಯಲೇ ಇಲ್ಲ. ನಾಲ್ಕನೇ ಬಾರಿಗೆ ಮನೆ ಬಿಟ್ಟವಳನ್ನ ವಾಪಸ್ ಕರೆತಂದು ಬೇರೆ ಮನೆ ಮಾಡಿ ಇಟ್ಟಿದ್ದ. ಆದ್ರೆ ಆವತ್ತು ಕೆಲಸದಿಂದ ಮನೆಗೆ ಲೋಕೇಶ ವಾಪಸ್ ಬಂದಾಗ ನಂದಿನಿ ಫೋನ್ನಲ್ಲಿ ಬ್ಯುಸಿ ಇದ್ಲು. ಫಾರ್ ದ ಫಸ್ಟ್ ಟೈಂ ಲೋಕೇಶ ಜಗಳ ತೆಗೆದ. ಮಾತಿಗೆ ಮಾತು ಬೆಳೆಯಿತು..ಕೊನೆಗೆ ಸಿಟ್ಟಿನಲ್ಲಿ ಲೋಕೇಶ ಹೆಂಡತಿಗೆ ಮಚ್ಚಿನ್ನೇಟು ಹಾಕೇಬಿಟ್ಟ. ಸದ್ಯ ಲೋಕೇಶ ಜೈಲು ಸೇರಿದ್ದಾನೆ. ನಂದಿನಿ ಮಸಣ ಸೇರಿದ್ದಾಳೆ.. ಆದ್ರೆ ಅವರ ಇಬ್ಬರು ಪುಟ್ಟ ಮಕ್ಕಳು ಈಗ ದಿಕ್ಕಿಲ್ಲದಂತಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more