2 ವರ್ಷದ ಕೋಪಕ್ಕೆ ತುಪ್ಪ ಸುರಿದುಬಿಟ್ಟಿದ್ದ..!
ನಡುರಸ್ತೆಯಲ್ಲೇ ಹೆಣ ಹಾಕಿ ಎಸ್ಕೇಪ್ ಆಗಿದ್ದ
ಗಂಡನ ಮನೆಗೆ ಬಂದವಳು 5 ತಿಂಗಳೂ ಇರಲಿಲ್ಲ!
ಆತ ಡೆಲಿವರಿ ಬಾಯ್. ಬೆಳಗ್ಗೆ ಸಂಜೆ ಎರಡು ಶಿಫ್ಟ್‌ನಲ್ಲಿ ಫುಡ್ ಡೆಲಿವರಿ(Food delivery) ಮಾಡಿಕೊಂಡು ತನ್ನ ಪಾಡಿಗೆ ತಾನಿದ್ದ. ಇನ್ನೂ ಈತ ತನ್ನದೇ ಏರಿಯಾದ ಹುಡುಗಿಯೊಬ್ಬಳನ್ನ ಪ್ರೀತಿಸಿ(Love) ಮದುವೆಯಾಗಿದ್ದ. ಇದೇ ವಿಷಯಕ್ಕೆ 6 ತಿಂಗಳು ಜೈಲಿಗೂ ಹೋಗಿ ಬಂದಿದ್ದ. ನಂತರ ಪ್ರೀತಿಸಿದವಳನ್ನ ಮದುವೆಯಾಗಿ ಹಾಯಾಗಿದ್ದ. ಆದ್ರೆ ಆವತ್ತು ಇದೇ ಹುಡುಗ ತನ್ನದೇ ಏರಿಯಾದಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಇನ್ನೂ ಆತನನ್ನ ಕೊಲೆ(Murder) ಮಾಡಿದವರು ಬೇರೆ ಯಾರು ಅಲ್ಲ. ಅಳಿಯ ಅಳಿಯ(Son in Law) ಅಂತ ಬಾಯಿ ತುಂಬ ಕರೆಯುತ್ತಿದ್ದ ಆತನ ಮಾವನೇ. ಮಂಜುನಾಥ ಡೇವಿಡ್‌ನನ್ನ ಕೊಲೆ ಮಾಡಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ. ಆದ್ರೆ ವಿಚಾರಣೆ ನಡೆಸಿದ ಪೊಲೀಸರಿಗೆ ಮಂಜುನಾಥ ತನ್ನ ಮಗಳನ್ನ ಡೇವಿಡ್ ಚುಡಾಯಿಸುತ್ತಿದ್ದ ಅದೇ ಕಾರಣಕ್ಕೆ ಕೊಂದೆ ಅಂತ ಹೇಳಿದ್ದ. ಆದ್ರೆ ಡೇವಿಡ್ ಕೊಲೆಗೆ ಬೇರೆನೇ ಕಾರಣವಿದೆ.. ಅಸಲಿಗೆ ಈ ಡೇವಿಡ್ ಮಂಜುನಾಥನ ಮಗಳನ್ನ ಕೇವಲ ಚುಡಾಯಿಸಿದ್ದಷ್ಟೇ ಅಲ್ಲ ಮದುವೆ ಕೂಡ ಆಗಿದ್ದ. ಡೇವಿಡ್‌ಗೆ ಓದು ತಲೆಗೆ ಹತ್ತಿಲ್ಲದಿದ್ದರೂ ಲವ್ ಅನ್ನೋದು ಅತನ ಮನಸಿಗೆ ಸಖತ್ ಸ್ಪೀಡಾಗಿ ನಾಟಿಬಿಟ್ಟಿತ್ತು. ಅವನದ್ದೇ ಏರಿಯಾದಲ್ಲಿದ್ದ ಒಬ್ಬ ಅಪ್ರಾಪ್ತೆಯನ್ನ ಡೇವಿಡ್ ಲವ್ ಮಾಡಿದ್ದ. ಮದುವೆ ಕೂಡ ಆಗಿದ್ದ. ನಂತರ ಈ ಮದುವೆ ಪೊಲೀಸ್ ಠಾಣೆ ಮೆಟ್ಟಿಲ್ಲೇರಿ ಡೇವಿಡ್ ಜೈಲಿಗೂ ಹೋಗಿ ಬಂದಿದ್ದ. ಆದ್ರೆ ಜೈಲಿಂದ ಹೊರ ಬಂದ ಮೇಲೆ ಹುಡುಗಿ ಮತ್ತೆ ಗಂಡನ ಮನೆ ಸೇರಿದ್ಲು. 5 ತಿಂಗಳು ಸಂಸಾರವನ್ನೂ ಮಾಡಿದ್ದ. ಅದ್ರೆ 6ನೇ ತಿಂಗಳಿಗೆ ಹುಡುಗಿಗೆ ಡೇವಿಡ್ ಬೇಡವಾಗಿದ್ದ. ಸಣ್ಣ ಪುಟ್ಟ ವಿಷ್ಯಗಳಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ಲು. ಇನ್ನೂ ಇದೇ ವಿಚಾರವಾಗಿ ಡೇವಿಡ್ ಅವಳ ಮನೆಗೇ ಹೋಗಿ ಹೊಡೆದು ಬಂದಿದ್ದ. ಯಾವಾಗ ಮಗಳ ಮೇಲೆ ಡೇವಿಡ್ ಕೈ ಮಾಡಿದ್ದಾನೆ ಅನ್ನೋದು ಗೊತ್ತಾಯ್ತೋ ಮಂಜುನಾಥ ಡೇವಿಡ್ಗೆ ಮುಹೂರ್ತ ಇಟ್ಟೇಬಿಟ್ಟ.
ಇದನ್ನೂ ವೀಕ್ಷಿಸಿ: ಅಪಾಯ ತಂದೊಡ್ಡಿತಾ ದೇವರ ಕೋಪ..? ಕತ್ತಲೆ ಕೂಪದಿಂದ ಪಾರಾಗೋಕೆ ಇನ್ನೆಷ್ಟು ಸಮಯ ಬೇಕು..?