Hassan Murder: ತಾಯಿ, ಮಕ್ಕಳದ್ದು ಆತ್ಮಹತ್ಯೆಯಲ್ಲ, ಕೊಲೆ! ತನಿಖೆಯಲ್ಲಿ ಬಯಲಾಯ್ತು ರೀಲ್ಸ್‌ ಪ್ರೇಮಿ ಲವ್‌ ಕಹಾನಿ

Hassan Murder: ತಾಯಿ, ಮಕ್ಕಳದ್ದು ಆತ್ಮಹತ್ಯೆಯಲ್ಲ, ಕೊಲೆ! ತನಿಖೆಯಲ್ಲಿ ಬಯಲಾಯ್ತು ರೀಲ್ಸ್‌ ಪ್ರೇಮಿ ಲವ್‌ ಕಹಾನಿ

Published : Jan 07, 2024, 12:27 PM IST

ತಾಯಿ-ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್
ತಾಯಿ, ಮಕ್ಕಳದ್ದು ಆತ್ಮಹತ್ಯೆಯಲ್ಲ, ಕೊಲೆ
ಪೊಲೀಸ್ ತನಿಖೆಯಲ್ಲಿ ಅಚ್ಚರಿಯ ಅಂಶ ಬೆಳಕಿಗೆ

ಹಾಸನ: ಜಿಲ್ಲೆಯ ತಾಯಿ-ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅವರದ್ದ ಆತ್ಮಹತ್ಯೆಯಲ್ಲ, ಕೊಲೆ(Murder)ಎಂಬ ಅಚ್ಛರಿಯ ಅಂಶ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೀಲ್ಸ್ ಪ್ರೇಮಿಯನ್ನ(Reels Lover) ಪಾಪಿ ಪ್ರಿಯಕರ ಕೊಲೆಗೈದಿದ್ದಾನೆ. ಪ್ರಿಯಕರನ ಜೊತೆ ಅಕ್ರಮ ಸಂಬಂಧ ಹೊಂದಿ ಆತನಿಂದಲೇ ಶಿವಮ್ಮ ಕೊಲೆಯಾಗಿದ್ದಾಳೆ. ಪ್ರಿಯತಮೆಯ ಜೊತೆಗೆ ಅವಳ ಎರಡು ಮಕ್ಕಳ ಕೊಲೆಯನ್ನೂ ಮಾಡಲಾಗಿದೆ. ವಿಜಯಪುರ(Vijayapura) ಮೂಲದ ನಿಂಗಪ್ಪ ಕಾಗವಾಡ ಕೊಲೆ ಆರೋಪಿಯಾಗಿದ್ದಾನೆ. ಶಿವಮ್ಮ ಜೊತೆ ಈತ ಅಕ್ರಮ ಸಂಬಂಧ(Illegal Relationship) ಹೊಂದಿದ್ದ. ಈತ ವಿಜಯಪುರದಲ್ಲಿ ಬೇಕರಿ ಅಂಗಡಿ ಇಟ್ಟಿದ್ದ, ಶಿವಮ್ಮ ಪತಿ ತೀರ್ಥಪ್ರಸಾದ್ ಈ ವೇಳೆ ಪರಿಚಯ ಆಗಿದ್ದ. ಬೇಕರಿ ಲಾಸ್ ಆಗಿದ್ದರಿಂದ ಮುಚ್ಚಿ ವಾಪಸ್ ಬಂದಿದ್ದ. ತುಮಕೂರು ಬೇಕರಿಯಲ್ಲಿ ಆಕೆಯ ಪತಿ ತೀರ್ಥಪ್ರಸಾದ್‌ ಕೆಲಸ ಮಾಡುತ್ತಿದ್ದ. ದೂರವಿದ್ದ ಗಂಡನಿಗೆ ಮರೆಮಾಚಿ ಪ್ರಿಯಕರ ನಿಂಗಪ್ಪನ ಜೊತೆ ಸಲುಗೆಯಿಂದ ಶಿವಮ್ಮ ಇದ್ದಳು. ಕಾರು ಚಾಲಕ ಎಂದು ಪ್ರಿಯಕರನ ಪರಿಚಯವನ್ನು ಶಿವಮ್ಮ ಮಾಡಿಕೊಡುತ್ತಿದ್ದಳು. ಜನವರಿ 1 ರ ರಾತ್ರಿ ಕತ್ತು ಹಿಸುಕಿ ಪ್ರಿಯತಮೆ ಶಿವಮ್ಮ, ಮಕ್ಕಳಾದ ಸಿಂಚನಾ,ಪವನ್‌ರನ್ನು ಆರೋಪಿ ನಿಂಗಪ್ಪ ಕೊಲೆ ಮಾಡಿದ್ದಾನೆ. ಈತನನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಿಲ ಸೋರಿಕೆಯಿಂದ ಇವರು ಸಾವಿಗೀಡಾಗಿದ್ದಾರೆ ಎಂದು ಈತ ಬಿಂಬಿಸಲು ಪ್ಲ್ಯಾನ್‌ ಮಾಡಿದ್ದ. ಜನವರಿ 1 ರಂದು ಹಾಸನದ ದಾಸರಕೊಪ್ಪಲಿನಲ್ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  ಬೆಳಗಾವಿಯಲ್ಲಿ ಹದಗೆಟ್ಟಿದೆಯಾ ಕಾನೂನು ಸುವ್ಯವಸ್ಥೆ? ಅಕ್ಕ-ತಮ್ಮನ ಮೇಲೆಯೇ ನೈತಿಕ ಪೊಲೀಸ್‌ಗಿರಿ?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more