ಹಿಟ್ ಆ್ಯಂಡ್ ರನ್ ಕೇಸ್‌ಗೆ ಮೇಜರ್ ಟ್ವಿಸ್ಟ್..! ಅದು ಆ್ಯಕ್ಸಿಡೆಂಟ್ ಅಲ್ಲ ಡೆಡ್ಲಿ ಮರ್ಡರ್..!

ಹಿಟ್ ಆ್ಯಂಡ್ ರನ್ ಕೇಸ್‌ಗೆ ಮೇಜರ್ ಟ್ವಿಸ್ಟ್..! ಅದು ಆ್ಯಕ್ಸಿಡೆಂಟ್ ಅಲ್ಲ ಡೆಡ್ಲಿ ಮರ್ಡರ್..!

Published : Mar 29, 2024, 05:20 PM ISTUpdated : Mar 29, 2024, 05:21 PM IST

ಕಾರಿನಲ್ಲಿದ್ದವನನ್ನ ಕೆಳೆಗಿಳಿಸಿ ಕಾರು ಹತ್ತಿಸಿಬಿಟ್ಟ..!
ಸ್ನೇಹಿತ ಸತ್ತ ಮೇಲೆ ಜೊತೆಗಿದ್ದವನು ವಿಷ ಕುಡಿದ..!
ಅವನ ಹೆಣ ಹಾಕಿ ಸೈಲೆಂಟಾಗಿ ಮನೆ ಸೇರಿಬಿಟ್ಟ..!
 

ಅದು ಪೊಲೀಸರಿಗೆ ಸವಾಲಾಗಿದ್ದ ಪ್ರಕರಣ.ಕಗ್ಗತ್ತಲ ರಾತ್ರಿಯಲ್ಲಿ ನಡುರಸ್ತೆಯಲ್ಲಿ ಅದೊಂದು ಹೆಣ ಬಿದಿತ್ತು. ಮೇಲ್ನೋಟಕ್ಕೆ ಅದೊಂದು ಅಪಘಾತದಂತೆ ಕಂಡಿತ್ತು. ಸ್ಥಳಕ್ಕೆ ಬಂದ ಪೊಲೀಸರು(Police) ಅದು ಹಿಟ್ ಅಂಡ್ ರನ್ ಅಂತಲೇ ಭಾವಿಸಿದ್ದರು. ಆದ್ರೆ ತನಿಖೆ ಕೈಗೊಂಡ ಪೊಲೀಸರಿಗೆ ಸಾವಿನ ಹಿಂದಿನ ಹಲವು ಸಂಗತಿಗಳು ಗೊತ್ತಾಗಿದ್ವು. ಅಷ್ಟೇ ಅಲ್ಲ ಅದು ಹಿಟ್ ಆ್ಯಂಡ್ ರನ್ ಕೇಸ್ ಅಲ್ಲ ಬದಲಿಗೆ ಹಾರ್ಡ್ಕೋರ್ ಮರ್ಡರ್(Murder) ಅನ್ನೋದು ಗೊತ್ತಾಗಿತ್ತು. ಸ್ನೇಹಿತ ಗೋಪಿ ಸಾವನ್ನಪ್ಪಿ ಕೆಲವೇ ಗಂಟೆಗಳಲ್ಲಿ ಉಮಾಪತಿ ವಿಷ ಸೇವಿಸಿಬಿಟ್ಟಿದ್ದ. ಆತ ಈ ಕ್ಷಣಕ್ಕೂ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ. ಆದ್ರೆ ಉಮಾಪತಿ ಗೋಪಿಯನ್ನ ಕೊಂದಿಲ್ಲ. ಗೋಪಿ ಮತ್ತು ಸ್ನೇಹಿತ ಉಮಾಪತಿ ಆವತ್ತು ಎಣ್ಣೆ ಹಾಕಲು ಬಾರ್‌ಗೆ ಹೋಗಿದ್ರು.ಇದೇ ವೇಳೆ ಪಕ್ಕದ ಟೇಬಲ್ನಲ್ಲಿ ಕೂತಿದ್ದವನ ಪರಿಚಯವಾಗಿತ್ತು. ನಂತರ ಮೂವರೂ ಒಂದೇ ಟೇಬಲ್‌ನಲ್ಲಿ ಮಧ್ಯರಾತ್ರಿವರೆಗೆ ಎಣ್ಣೆ ಹಾಕಿದ್ದಾರೆ. ನಂತರ ಅದು ಸಾಲದಾಯ್ತು ಅಂತ ಹೊರಗಡೆ ಬಂದು ಅವನ ಕಾರಿನಲ್ಲೇ ಎಣ್ಣೆ ಹಾಕಿದ್ದಾರೆ. ಈ ವೇಳೆ ಗೋಪಿ ಬಾಯಿಗೆ ಬಂದಾಗೆ ಮಾತನ್ನಾಡಿದ್ದಾನೆ. ಇದು ಮೂರನೇ ವ್ಯಕ್ತಿಯ ಕೋಪ ಜಾಸ್ತಿಯಾಗುವಂತೆ ಮಾಡುತ್ತೆ. ಇದೇ ಕೋಪದಲ್ಲಿ ಗೋಪಿ ಮತ್ತು ಉಮಾಪತಿಯನ್ನ ಕಾರಿನಿಂದ ಕೆಳಗಿಳಿಸಿ ನಂತರ ಅದೇ ಕಾರಿನಿಂದ ಗೋಪಿಗೆ ಡಿಕ್ಕಿ ಹೊಡೆದು ಅವನ ಹೆಣ ಹಾಕಿ ಅಲ್ಲಿಂದ ಎಸ್ಕೆಪ್ ಆಗಿದ್ದಾನೆ. ಇನ್ನೂ ಸ್ನೇಹಿತ ಸತ್ತ ಅನ್ನೋದು ಗೊತ್ತಾಗಿ ಫೀಲಿಂಗ್ನಲ್ಲಿ ಉಮಾಪತಿ ತನ್ನ ಗ್ರಾಮಕ್ಕೆ ಹೋಗಿ ವಿಷ ಸೇವಿಸಿಬಿಟ್ಟಿದ್ದಾನೆ. ಸದ್ಯ  ಪೊಲೀಸರು ಕಾರ್ ಚಾಲಕ ಮುನಿಕೃಷ್ಣನ ಬಂಧಿಸಿದ್ದಾರೆ. ಮುನಿಕೃಷ್ಣಗೆ ಈ ಇಬ್ಬರ ಪರಿಚಯ ಇರಲಿಲ್ಲ ಅನ್ನೊದು ಆತನ ಹೇಳಿಕೆ.. ಆದರೇ ಗೋಪಿ ಈಗಾಗಲೇ ಮೃತಪಟ್ಟಿದ್ದು, ಉಮಾಪತಿ ಸಾವು ಬದುಕಿನ ನಡುವೆ ಹೊರಾಟ ನಡೆಸುತಿದ್ದಾನೆ.

ಇದನ್ನೂ ವೀಕ್ಷಿಸಿ:  ಅನಾಹುತ ಮಾಡಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ..! ಆನೆಯ ಮೇಲೆ ಕುಳಿತು ಆ ಹಳ್ಳಿಗೆ ಇಂದಿರಾ ಬಂದದ್ದೇಕೆ..?

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more