ಜ್ಯೋತಿಷ್ಯದ ನೆಪದಲ್ಲಿ ಮನೆಗೆ ಕನ್ನ: ಕಲಬುರಗಿಗೆ ಶುರುವಾಗಿದೆ ಮಹಾರಾಷ್ಟ್ರ ಕಂಟಕ

Aug 26, 2022, 11:47 AM IST

ಕಲಬುರಗಿ (ಆ.26): ಅವರು ಜ್ಯೋತಿಷಿಗಳು. ಹಾಗಂತ ಹೇಳಿಕೊಂಡು ಅವರು ನಿಮ್ಮ ಮನೆ ಮುಂದೆ ಬಂದು ನಿಂತ್ರೆ ಅಲ್ಲಿ ಏನೋ ಸಂಥಿಂಗ್ ಆಗುತ್ತೆ ಅಂತಾನೇ ಅರ್ಥ. ಇಲ್ಲೊಂದಷ್ಟು ಗ್ಯಾಂಗ್ಗಳು ಸೈಲೆಂಟಾಗಿ ಬಂದು ನಮ್ಮ ಕಲಬುರ್ಗಿಗೆ ಬಂದು ನೆಲಸಿಬಿಟ್ಟಿವೆ. ಈ ಗ್ಯಾಂಗ್‌ನ ವರ್ಕಿಂಗ್ ಸ್ಟೈಲೇ ಡಿಫರೆಂಟ್. ಬೆಳಗ್ಗೆ ಎಲ್ಲಾ ಜ್ಯೋತಿಷ್ಯ ಹೇಳ್ತಾರೆ. ರಾತ್ರಿ ಆದ್ರೆ ಬಾಗಿಲು ಮುರೀತ್ತಾರೆ. ಆದ್ರೆ ಇವರೂ ನಮ್ಮ ಕರ್ನಾಟಕದವರೇ ಅಲ್ಲ. ಪಕ್ಕದ ಮಹಾರಾಷ್ಟ್ರದಿಂದ ಬಂದು ಕಲಬುರ್ಗಿಯಲ್ಲಿ ದರೋಡೆ ಮಾಡೋದ್ರಲ್ಲಿ ಆ್ಯಕ್ಟೀವ್ ಆಗಿಬಿಟ್ಟಿವೆ. ಹೀಗೆ ಪಕ್ಕದ ರಾಜ್ಯದಿಂದ ಬಂದು ನಮ್ಮ ರಾಜ್ಯದಲ್ಲಿ ದರೋಡೆ ಮಾಡ್ತಿದ್ದ ಗ್ಯಾಂಗ್ನಮ್ಮ ಪೊಲೀಸರಿಗೆ ತಗ್ಲಾಕೊಂಡ ರೋಚಕ ಕಥೆಯೇ ಇವತ್ತಿನ ಎಫ್.ಐ.ಆರ್. 

ಯಾವಾಗ ಪುಣೆ ಮೂಲದ ಸಚಿನ್ ಅನ್ನೋನ ಹಿಡಿದು ಅವನ ಕಥೆ ಮುಗಿಸಿದ್ರೋ ಕಲಬುರಗಿ ಶಾಂತವಾಯ್ತು ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಹಾಗಾಗಿರಲಿಲ್ಲ. ಬಿದ್ದಾಪೂರ ಕಾಲೋನಿಯಲ್ಲಿ ಮತ್ತೆ ಕಳ್ಳತನ ಶುರುವಾಗಿಬಿಡ್ತು. ಪ್ರತಿನಿತ್ಯ ಒಂದಿಲ್ಲೊಂದು ಮನೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗ್ತಾನೇ ಹೊಯ್ತು. ಹಾಗಾದ್ರೆ ಕಲಬುರಗಿಯಲ್ಲಿ ಮತ್ತೆ ಕಳ್ಳತನ ಶುರು ಮಾಡಿದವರ್ಯಾರು..? ಮತ್ತೆ ಕಲಬುರಗಿಗೆ ಎಂಟ್ರಿ ಕೊಟ್ಟ ಆ ಗ್ಯಾಂಗ್ ಯಾವುದು..? ಒಬ್ಬನ ಕಥೆ ಮುಗಿಸಿದ್ರೂ ಕಲಬುರಗಿಯಲ್ಲಿ ಕಳ್ಳತನ, ದರೋಡೆ ನಿಲ್ಲಲಿಲ್ಲ. ಇದ್ರಿಂದ ಭಯಭೀತರಾದ ಜನ, ಮತ್ತೆ ನೈಟ್ ರೌಂಡ್ಸ್ ಹಾಕಲು ತೀರ್ಮಾನಿಸಿದ್ರು. ಹೀಗೆ ಮತ್ತೆ ರಾತ್ರಿ ಗಸ್ತು ತಿರುಗಿದ ಅಲ್ಲಿನ ಜನರಿಗೆ ಅವತ್ತೊಂದು ದಿನ 4 ದರೋಡೆಕೋರರು ತಗ್ಲಾಕೊಂಡ್ರು. ಹಿಡಿದು ನಾಲಕ್ಕು ತದುಕಿದ್ರು. ತದಕಿದ ನಂತರ ಏನ್ರಪ್ಪ ನಿಮ್ಮ ಕಥೆ ಅಂದಾಗ ಅವರು ಹೇಳಿದ್ದು ಜ್ಯೋತಿಷ್ಯದ ಕಥೆಯನ್ನ. 

ಪ್ರೀತ್ಸೆ..ಪ್ರೀತ್ಸೆ ಅಂತ ಹಿಂದೆ ಬಿದ್ದು ಕಾಡಿದ, ಒಲ್ಲೆ ಅಂದವಳಿಗೆ ಹಾಕಿದೆಂಥಾ ಸ್ಕೆಚ್..?

ಹೌದು! ಕಲಬುರಗಿಯ ಜನ ಮತ್ತೆ ನಿಟ್ಟಿಸುರು ಬಿಟ್ಟಿದ್ದಾರೆ. ಆದ್ರೆ ಖದೀಮರು ತಮ್ಮ ಜೊತೆಯೇ ಇದ್ದರಲ್ಲ ಅನ್ನೋ ಶಾಕ್ ಅವರಿಗೆ ಆಗಿತ್ತು. ಇನ್ನೂ ಸದ್ಯ ಮಹರಾಷ್ಟ್ರದೇ ಎರಡು ಗ್ಯಾಂಗ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. ಆದ್ರೆ ಈ ಗ್ಯಾಂಗ್‌ಗಳ ವರ್ಕಿಂಗ್ ಸ್ಟೈಲ್ ನಿಜಕ್ಕೂ ಇಂಟರೆಸ್ಟಿಂಗ್. ಅವರೆಲ್ಲಾ ಮಹಾರಾಷ್ಟ್ರದವರು. ಕಲಬುರಗಿಯನ್ನೇಏ ಟಾರ್ಗೆಟ್ ಮಾಡಿಕೊಂಡು ಬಂದಿದ್ರು. ಯಾವತ್ತು ಯಾವ ಮನೆಯನ್ನ ದರೋಡೆ ಮಾಡಬೇಕು ಅನ್ನೋ ಕನ್ಫ್ಯೂಷನ್ ಅವರಿಗೆ ಇರಲಿಲ್ಲ. ಕಾರಣ ಒಂದು ಮನೆಗೆ ನುಗ್ಗಬೇಕಾದ್ರೂ ಅವರು ಚೆನ್ನಾಗಿ ಹೋಮ್‌ವರ್ಕ್ ಮಾಡ್ತಿದ್ರು. ಆದ್ರೆ ಅವತ್ತು ಅವರ ಟೈಂ ಖರಾಬಾಗಿತ್ತು ಅಲ್ಲಿನ ನಿವಾಸಿಗಳ ಬಳಿಯೇ ತಗ್ಲಾಕೊಂಡ್ರು. ಇನ್ನೂ ಪೊಲೀಸರು ಅವರ ನೆಟ್ವರ್ಕ್ ತೋರಿಸಿ ಬನ್ನಿ ಅಂದ್ರೆ ಅಲ್ಲೂ ತಮ್ಮ ನಟೋರಿಯಸ್ ಬುದ್ಧಿಯನ್ನ ತೋರಿಸೋಕೆ ಮುಂದಾಗಿದ್ರು. ಅದ್ರೆ ಕಾಲಿಗೆ ಗುಂಡು ಹೊಡೆಸಿಕೊಳ್ಳುವಂತಾಯ್ತು.