May 29, 2024, 5:37 PM IST
ಕರ್ನಾಟಕ ಗಡಿನಾಡು ಕಾಸರಗೋಡಿನಲ್ಲಿ (Kasaragod) ಮತ್ತೆ ಲವ್ ಜಿಹಾದ್ (Love Jihad) ಸದ್ದು ಮಾಡಿದೆ. ಮಂಗಳೂರು ಗಡಿ ಕಾಸರಗೋಡಿನಲ್ಲಿ ಹಿಂದೂ ಯುವತಿಯ ಲವ್ ಜಿಹಾದ್ ನಡೆದಿದೆ ಎನ್ನಲಾಗಿದೆ. ಮುಸ್ಲಿಂ ಲೀಗ್ (Muslim League) ನಾಯಕನಿಂದ ಲವ್ ಜಿಹಾದ್ ಗೆ ಬೆಂಬಲ ಆರೋಪ ಸಹ ಇದ್ದು, ಕಾಸರಗೋಡಿನ ವಿಎಚ್ ಪಿ(VHP) ಸೇರಿ ಹಿಂದೂ ಪರ ಸಂಘಟನೆಗಳು ಗಂಭೀರ ಅರೋಪ ಮಾಡಿವೆ. ಕಾಸರಗೋಡಿನ ಬದಿಯಡ್ಕದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ನಾಪತ್ತೆಯಾಗಿದ್ದ ಯುವತಿ ಅನ್ಯಮತೀಯ ಯುವಕನ ಜೊತೆ ಠಾಣೆಗೆ ಹಾಜರಾಗಿದ್ದಾರೆ.
ಮಿರ್ಶಾದ್ ಎಂಬಾತನ ಜೊತೆ ಯುವತಿ(Hindu woman) ತೆರಳಿದ್ದು, ಕಾಸರಗೋಡಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಈಕೆ ಶಿಕ್ಷಕಿಯಾಗಿದ್ದರು. ಇನ್ನು ಕಾಸರಗೋಡು ನ್ಯಾಯಾಲಯದ ಮುಂದೆ ಇವರನ್ನು ಪೊಲೀಸರು ಹಾಜರುಪಡಿಸಿದ್ದು, ಸದ್ಯ ಆಕೆ ಸ್ವಇಚ್ಛೆಯಂತೆ ಯುವಕನ ಜೊತೆ ತೆರಳಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಈ ಲವ್ ಜಿಹಾದ್ ಗೆ ಕೇರಳದ ಮುಸ್ಲಿಂಲೀಗ್ ನೇತಾರನ ಷಡ್ಯಂತ್ರ ಆರೋಪ ಇದೆ. ಮುಸ್ಲಿಂಲೀಗ್ ನೇತಾರನೋರ್ವ ಷಡ್ಯಂತ್ರ ರೂಪಿಸಿ ಪ್ರೇಮಾಂಕುರವಾಗುವಂತೆ ಮಾಡಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪ ಮಾಡಿದೆ.
ಯುವತಿಯ ತಂದೆಯ ದೂರಿನಂತೆ ಬದಿಯಡ್ಕ ಪೊಲೀಸರು (Badiyadka Police) ನಾಪತ್ತೆ ಕೇಸು ದಾಖಲಿಸಿದ್ದರು. ದೂರಿನಲ್ಲಿ ಯುವತಿಯ ಅಪಹರಣದ ಅನುಮಾನ ವ್ಯಕ್ತಪಡಿಸಲಾಗಿತ್ತು. ಈಕೆ ಮೇ.23ರಂದು ಮನೆಯಿಂದ ಹೊರಟು ಮತ್ತೆ ಮನೆಗೆ ಹಿಂದಿರುಗಿರಲಿಲ್ಲ. ಆ ಬಳಿಕ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿ ಇಬ್ಬರ ಭಾವಚಿತ್ರಗಳ ಸಹಿತ ನೋಟೀಸ್ ಪತ್ತೆಯಾಗಿತ್ತು. ಯಾಕೆಂದರೆ ರಿಜಿಸ್ಟರ್ ಕಚೇರಿಯಲ್ಲಿ ಯುವತಿ ಮತ್ತು ಮಿರ್ಶಾದ್ ಮದುವೆ ಆಗಿದ್ದರು.
ಇದನ್ನೂ ವೀಕ್ಷಿಸಿ: ಅಕ್ರಮ ಮರಳು ದಂಧೆ ಹಿಂದಿರೋದು ಯಾರು? ರಾತ್ರಿಯಾದ್ರೆ ಜೆಸಿಬಿ,ಟ್ರ್ಯಾಕ್ಟರ್, ಲಾರಿಗಳದ್ದೇ ಸದ್ದು..!