11 ಕಡೆ.. 30 ಗಂಟೆ ದಾಳಿ.. ಸಿಕ್ಕಿದ್ದು ಕೋಟಿ ಕೋಟಿ: ಸಂಬಳ ಸಾವಿರ, ಆದ್ರೆ ಈತ ಕೋಟಿ ಕುಳ..!

11 ಕಡೆ.. 30 ಗಂಟೆ ದಾಳಿ.. ಸಿಕ್ಕಿದ್ದು ಕೋಟಿ ಕೋಟಿ: ಸಂಬಳ ಸಾವಿರ, ಆದ್ರೆ ಈತ ಕೋಟಿ ಕುಳ..!

Published : Jun 30, 2023, 12:46 PM IST

ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಬಂಧನ
2022, ನವೆಂಬರ್ನಲ್ಲಿ ಸಸ್ಪೆಂಡ್ ಆಗಿದ್ದ ಅಜಿತ್ ರೈ
ರೈಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ನಡೆದಿದ್ದ ದಾಳಿ

ಅವನು ಬೆಂಗಳೂರಿನ ಕೆ.ಆರ್ ಪುರಂನ ತಹಶೀಲ್ದಾರ್. ಕಷ್ಟ ಪಟ್ಟು ಎಕ್ಸಾಂ ಬರೆದು ಬಂದವನಲ್ಲ. ಅಪ್ಪನ ಕೆಲಸವನ್ನ ಪುಕ್ಕಟ್ಟೆಯಾಗಿ ಗಿಟ್ಟಿಸಿಕೊಂಡು ಆ ಹುದ್ದೆಗೆ ಬಂದವನು. ಅಪ್ಪನ ಹಾಗೆ ನೀನೂ ಜನರ ಸೇವೆ ಮಾಡು ಅಂತ ಸರ್ಕಾರ ಕೆಲಸ ಕೊಟ್ರೆ ಈತ ಜನರನ್ನ ಉದ್ದಾರ ಮಾಡೋದು ಬಿಟ್ಟು ತನ್ನ ಉದ್ದಾರಕ್ಕೆ ನಿಂತುಬಿಟ್ಟಿದ್ದ. ಪರಿಣಾಮ ಇವತ್ತು ಆತ ಕುಬೇರ. ಬಡವರ ರಕ್ತ ಹೀರಿದವನ ಮನೆಯಲ್ಲಿದ್ದಿದ್ದು ಕೋಟಿ ಕೋಟಿ, ಆದ್ರೆ ಅವನ ಪಾಪದ ಕೊಡ ತುಂಬಿತ್ತು. ಬೆಳ್ಳಂಬೆಳಗ್ಗೆಯೇ  ತಹಶೀಲ್ದಾರ್‌ಗೆ ಲೋಕಾಯುಕ್ತ ಶಾಕ್ ಕೊಟ್ಟಿತ್ತು. ಆ ಕುಬೇರನ ಮನೆಯಲ್ಲಿ ಸಿಕ್ಕ ದಾಖಲೆಗಳನ್ನ ನೋಡಿ ಸ್ವತಹ ಲೋಕಾಯುಕ್ತವೇ ಥಂಡಾ ಹೊಡೆದಿತ್ತು. ಅಪ್ಪ ತಹಸೀಲ್ದಾರ್, ಕೆಲಸದಲ್ಲಿರುವಾಗ್ಲೇ ಮರಣ ಹೊಂದಿದ್ರಿಂದ ಅಜಿತ್ ರೈಗೆ ಅನುಕಂಪದ ಮೇಲೆ ಸರ್ಕಾರಿ ಕೆಲಸ ಸಿಕ್ಕಿತ್ತು. ಆರಂಭದಲ್ಲಿ ಡಿ ಗ್ರೇಡ್ ಹುದ್ದೆಯಲ್ಲಿದ್ದ ಅಜಿತ್ ರೈ ಬಡ್ತಿ ಮೇಲೆ ಬಡ್ತಿಗಳನ್ನ ಪಡೆದು ತಹಸೀಲ್ದಾರ್ ಹುದ್ದೆ ಗಿಟ್ಟಿಸಿಕೊಂಡಿದ್ದ. ಸತತ 30 ಗಂಟೆಗಳ ಬಳಿಕ ಲೋಕಾಯುಕ್ತ ಅಧಿಕಾರಿಗಳು ಅವನ ಆಸ್ತಿಯ ಲೆಕ್ಕ ನೋಡಿ ಬೆಚ್ಚಿಬಿದ್ದಿದ್ದಾರೆ. ಇದೇ ಕೇಸ್ನಲ್ಲಿ ಈಗ ಅಜಿತ್ ರೈನನ್ನ ಬಂಧಿಸಿದ್ದಾರೆ.

ಇದನ್ನೂ ವೀಕ್ಷಿಸಿ: ವಿವಾದಗಳ ಸುಳಿಯಲ್ಲಿ ಆದಿಪುರುಷ್‌: ಸಿನಿಮಾದವರು ಕುರಾನ್, ಬೈಬಲ್‌ನಿಂದ ದೂರವಿರಿ ಅಂದಿದ್ದೇಕೆ ಕೋರ್ಟ್‌ ?

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!