Dec 1, 2023, 9:58 AM IST
ಈ ಫೋಟೋದಲ್ಲಿರುವ ಈಕೆ ಅರ್ಪಿತಾ. ಖಾಸಗಿ ಶಾಲೆಯ ಶಿಕ್ಷಕಿ. ಹಾಸನ(Hassan) ಹೊರವಲಯದ ಬಿಟ್ಟಗೌಡನಹಳ್ಳಿಯ ಯುವತಿ. ಬೆಳಗ್ಗೆ 7:55 ಕ್ಕೆ ಶಾಲೆಗೆ ಹೋಗುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ನಾಲ್ವರು ಕಿಡ್ನಾಪ್( kidnap) ಮಾಡಿದ್ರು.ಕಿಡ್ನಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಾಡಹಗಲೇ ಶಿಕ್ಷಕಿಯ ಕಿಡ್ನಾಪ್ನಿಂದ ಜನ ಬೆಚ್ಚಿಬಿದ್ದಿದ್ರು. ಇತ್ತ ಮಗಳ ಅಪಹರಣದಿಂದ ಹೆತ್ತವರು ಕಂಗಾಲಾಗಿ ಕೂತರು. ಮತ್ತೊಂದ್ಕಡೆ ಅಪಹರಣ ಸುದ್ದಿ ತಿಳಿಯುತ್ತಲೇ ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ಕಿಡ್ನಾಪರ್ಸ್ ಬೇಟೆಗೆ ಇಳಿದರು. ಹಾಗೆ ಅಖಾಡಕ್ಕಿಳಿದ ಪೊಲೀಸರು ಸೂರ್ಯೋದಯ ವೇಳೆ ನಡೆದಿದ್ದ ಅಪಹರಣ ಪ್ರಕರಣವನ್ನು ಸೂರ್ಯಾಸ್ತದೊಳಗೆ ಭೇದಿಸಿದ್ದಾರೆ. ಕಿಡ್ನಾಪರ್ಸ್ ಬಂಧಿಸಿದ ಪೊಲೀಸರು ಶಿಕ್ಷಕ ಅರ್ಪಿತಾಳನ್ನು(Teacher) ರಕ್ಷಿಸಿ ಹಾಸನಕ್ಕೆ ಕರೆದು ತಂದಿದ್ದಾರೆ. ಅರ್ಪಿತಾ ಕಿಡ್ಯ್ನಾಪ್ ಆಗಿದೆ ಅನ್ನೋ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಸಂಬಂಧಿಗಳು ಪೊಲೀಸರ ಎದುರು ಅದೊಂದು ಹೆಸರು ಹೇಳೀದ್ದರು. ರಾಮು ಎಂಬಾತನ ವಿರುದ್ಧ ದೂರು ನೀಡಿದ್ದರು. ರಾಮು, ಅರ್ಪಿತಾಳನ್ನು ಮದುವೆಯಾಗಲು ಕೇಳಿಸಿದ್ದನಂತೆ. ಆದರೆ ಅರ್ಪಿತಾ ಹಾಗೂ ಅರ್ಪಿತಾ ಮನೆಯವರು ಮದುವೆಗೆ ನಿರಾಕರಿಸಿದ್ದರು. ಹೀಗಾಗಿ ಪ್ಲಾನ್ ಮಾಡಿ ಸ್ನೇಹಿತರ ಸಹಾಯ ಪಡೆದು ಅರ್ಪಿತಾಳನ್ನು ಕಿಡ್ನ್ಯಾಪ್ ಮಾಡಿದ್ದ.. ದಕ್ಷಿಣ ಕನ್ಬಡ ಜಿಲ್ಲೆಯ ನೆಲ್ಯಾಡಿಯಲ್ಲಿ ಇನ್ನೋವಾ ಕಾರು ಪತ್ತೆ ಹಚ್ಚಿದ ಪೊಲೀಸರು ಅರ್ಪಿತಾಳನ್ನು ರಕ್ಷಿಸಿದ್ದಾರೆ. ಆರೋಪಿ ರಾಮು ಮತ್ತು ಆತನ ಸ್ನೇಹಿತರನ್ನು ಹಾಸನ ಬಡಾವಣೆ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆ ಜನರನ್ನ ಬೆಚ್ಚಿ ಬೀಳಿಸಿದ್ದ ಟೀಚರ್ ಕಿಡ್ನಾಪ್ ಕೇಸನ್ನು ಒಂದೇ ದಿನದಲ್ಲಿ ಭೇದಿಸಿದ ಪೊಲೀಸರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಒಪ್ಪದ ಹುಡುಗಿಯ ಮದುವೆಯಾಗಲು ವಾಮಮಾರ್ಗ ಹಿಡಿದ ತಪ್ಪಿಗೆ ಕಿಡ್ನಾಪರ್ ರಾಮು ಮತ್ತು ಆತನ ಸ್ನೇಹಿತರು ಜೈಲು ಸೇರೋದು ಬಹುತೇಕ ಪಕ್ಕಾ ಆಗಿದೆ.
ಇದನ್ನೂ ವೀಕ್ಷಿಸಿ: ಬ್ಯಾಡ್ ಮ್ಯಾನರ್ಸ್ ಯಶಸ್ವಿ ಪ್ರದರ್ಶನ..ಅಭಿಷೇಕ್ ಅಂಬರೀಶ್ ಮಂಡ್ಯ, ಮೈಸೂರು ವಿಜಯ ಯಾತ್ರೆ