ತಂಗಿಯ ಕ್ಲಾಸ್​ಮೇಟನ್ನೇ ಪಟಾಯಿಸಿಬಿಟ್ಟ ದುಬೈ ಬಾಯ್!  ದುಬೈನಲ್ಲೇ ಕೂತು ಅವಳ ವಿಡಿಯೋ ಹರಿಬಿಟ್ಟ!

ತಂಗಿಯ ಕ್ಲಾಸ್​ಮೇಟನ್ನೇ ಪಟಾಯಿಸಿಬಿಟ್ಟ ದುಬೈ ಬಾಯ್! ದುಬೈನಲ್ಲೇ ಕೂತು ಅವಳ ವಿಡಿಯೋ ಹರಿಬಿಟ್ಟ!

Published : Jul 23, 2025, 07:57 PM IST

ಜಿಮ್ ಟ್ರೈನರ್ ಒಬ್ಬ ಯುವತಿಗೆ ಪ್ರೀತಿಯ ಬಲೆ ಬೀಸಿ ಮೋಸ ಮಾಡಿ, ಕೊನೆಗೆ ಆಕೆಯ ಜೀವವನ್ನೇ ತೆಗೆದ ಘಟನೆ. ಯುವತಿಯ ಮೇಲೆ ಅತ್ಯಾ*ಚಾರ ಎಸಗಿ, ಗರ್ಭಿಣಿಯನ್ನಾಗಿಸಿ, ಕೊನೆಗೆ ಕೊಲೆ ಮಾಡಿದ್ದಾನೆ. ಈ ಘಟನೆ ಇತರ ಯುವತಿಯರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಅವರಿಬ್ಬರೂ ಒಟ್ಟಿಗೆ ಕಾಲೇಜಿಗೆ ಹೋದವರು.. ಓದುತ್ತಲೇ ಲವ್​ನಲ್ಲಿ ಬಿದ್ದವರು.. 5 ವರ್ಷ ಪ್ರೀತಿ ಮಾಡಿದ್ರು.. ಒಂದು ದಿನ ಹುಡುಗ ಕೆಲಸಕ್ಕೆ ಅಂತ ದುಬೈಗೆ ಹೋದ... ಈಕೆ ತನ್ನೂರಿನಲ್ಲೇ ಒಳಿದುಬಿಟ್ಟಿದ್ದಳು.. ಆದ್ರೂ ಕಾಲಿಂಗೂ ಚಾಟಿಂಗೂ ನಡೆದೇ ಇತ್ತು.. ಆದ್ರೆ ಇದ್ದಕ್ಕಿದ್ದಂತೆ ಆ ಹುಡುಗಿ ಬೇರೊಬ್ಬನ ಜೊತೆಗೆ ಮದುವೆ ಆಗೋದಕ್ಕೆ ರೆಡಿಯಾಗಿಬಿಟ್ಟಳು.. ಲವ್ವರ್​​ ಯಾಕೆ ಹೀಗೆ ಮಾಡಿದೆ ಅಂದ್ರೆ ಆಕೆ ಹೇಳಿದ್ದು ಒಂದೇ ಮಾತು ಬ್ರೇಕ್​ ಅಪ್​ ಅಂತ... ಆದ್ರೆ ಇದೆಲ್ಲಾ ಆಗಿ ಕೆಲವೇ ದಿನಗಳು.. ಆ ಹೆಣ್ಣುಮಗಳು ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಇನ್ನೂ ಬಾಳಿ ಬದುಕಬೇಕಾದ ಹೆಣ್ಣು ಮಗಳು ಆ ಸಾಕ್ಷಿ. ಆ ಪಾಪಿ ಆಕೆಯನ್ನ ಕಾಡಿದಲ್ಲದೇ ಜೀವವನ್ನೂ ತಗೆದುಬಿಟ್ಟಿದ್ದನ್ನೆ. ವಯಸಲ್ಲದ ವಯಸಲ್ಲಿ ಪ್ರೀತಿ ಗೀತಿ ಅಂತ ತಲೆಕೆಡಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠವಾಗಲಿ. ಪ್ರೀತಿಯ ಹೆಸರಲ್ಲಿ ಹೆಣ್ಣುಮಗಳ ಜೀವನ ಹಾಳು ಮಾಡಿದ ಮತ್ತೊಬ್ಬ ಕಿರಾತಕನ ಕಥೆ.

ಆತ ಜಿಮ್​ ಟ್ರೈನರ್​​. ಆಕೆ ಅವನ ಬಳಿ ಬಾಡಿ ಬಿಲ್ಡ್​​ ಮಾಡೋದಕ್ಕೆ ಬಂದಿದ್ಲು. ಆಕೆಗೆ ಈತ ಜಿಮ್​ ಟ್ರೈನ್ನಿಂಗ್​ ಕೊಡೋ ಬದಲು ಲವ್​ ಟ್ರೈನ್ನಿಂಗ್​ ಕೊಟ್ಟಿದ್ದ.. ಅವಳನ್ನ ಬುಟ್ಟಿಗೆ ಹಾಕೊಂಡು ಮಗುವನ್ನೂ ಕರುಣಿಸಿಬಿಟ್ಟ. ಆದ್ರೆ ನಂತರ ಮದುವೆಯಾಗಪ್ಪ ಅಂದ್ರೆ ನನಗಾಗಲೇ ಮದುವೆಯಾಗಿ ಮಗು ಇದೆ ಅಂದಿದ್ದ. ಈಕೆ ಪೊಲೀಸ್​​ ಕಂಪ್ಲೆಂಟ್​​ ಕೊಟ್ಟಳು.. ಜೈಲಿಗೆ ಹೋಗಬೇಕಾಗುತ್ತಲ್ಲ ಅಂತ ಕೇಸ್​​ ವಾಪಸ್​​ ತಗೋ ಮನೆಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ.. ಆಕೆ ಕೂಡ ಅವನನ್ನ ನಂಬಿ ಕೇಸ್​​ ವಾಪಸ್​​ ತಗೆದುಕೊಂಡಳು. ಆದ್ರೆ ಆತ ಮನೆಗೆ ಕರೆದೊಯ್ದು ಅವಳನ್ನ ಮುಗಿಸೋ ಪ್ಲಾನ್​ ಮಾಡಿದ್ದ.

ಲಕ್ಷ್ಮಿಯಂತಹ ಮುಗ್ಧ ಹೆಣ್ಣುಮಕ್ಕಳನ್ನೇ ಟಾರ್ಗೆಟ್​​ ಮಾಡಿಕೊಂಡು ಪ್ರೀತಿ ಹೆಸರಲ್ಲಿ ದೋಖ ಮಾಡೋ ಮಂದಿ ತುಂಬಾ ಇದ್ದಾರೆ. ಆದ್ರೆ ಪ್ರೀತಿ ಅನ್ನೋ ಪಾಶಕ್ಕೆ ಬೀಳೋದಕ್ಕೂ ಮೊದಲು ನೀವು ಯಾರನ್ನ ಪ್ರೀತಿ ಮಾಡೋದಕ್ಕೆ ಹೊರಟಿದ್ದೀರಿ ಅನ್ನೋದನ್ನ ತಿಳಿದುಕೊಳ್ಳಿ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more