Feb 10, 2024, 5:57 PM IST
ಅದು ಚಿಕ್ಕ ಕುಟುಂಬ..ಗಂಡ(Husband) ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ಬಟ್ಟೆ ವ್ಯಾಪಾರ ಮಾಡ್ತಿದ್ರೆ ಹೆಂಡತಿ(Wife)ಮಕ್ಕಳನ್ನ ಸ್ಕೂಲ್‌ಗೆ ಕಳಿಸಿ ಮನೆಗೆಲಸ ಮಾಡಿಕೊಂಡು ಇರುತ್ತಿದ್ದಳು. ಮನೆಯಲ್ಲಿ ಬಡತನವಿದ್ದರೂ ಸುಖವಾಗಿ ಜೀವನ ಮಾಡ್ತಿದ್ರು. ಆದ್ರೆ ಆವತ್ತೊಂದು ದಿನ ಹೆಂಡತಿ ತನ್ನದೇ ಮನೆಯಲ್ಲಿ ನೇಣಿಗೆ ಶರಣಾಗಿಬಿಟ್ಟಿದ್ದಳು. ಕೆಲಸಕ್ಕೆ ಹೋಗಿ ಬಂದ ಗಂಡನಿಗೆ ಹೆಂಡತಿಯ ಸಾವು ಕುಸಿದು ಬೀಳುವಂತೆ ಮಾಡಿತ್ತು. ಇನ್ನೂ ಸ್ಪಾಟ್‌ಗೆ ಬಂದ ಪೊಲೀಸರಿಗೆ(Police) ಅನುಮಾನ ಶುರುವಾಗಿತ್ತು. ಅಲ್ಲಿ ನೇಣಿಗೆ ನೇತಾಡುತ್ತಿದ್ದ ಶವ ನೋಡಿ ಇದು ಸೂಸೈಡ್ ಆಗಲಿಕ್ಕೆ ಸಾಧ್ಯವೇ ಇಲ್ಲ ಅಂತೆನ್ನಿಸಿತ್ತು. ಹಾಗಾದ್ರೆ ಹೇಮಲತಾಳನ್ನ ಗೊತ್ತಿದ್ದವನೇ ಕೊಂದಿರೋದು ಅನ್ನೋದು ಕನ್ಫರ್ಮ್. ಬರೋಬ್ಬರಿ 200 ಸಿಸಿ ಕ್ಯಾಮರಾಗಳನ್ನ ಹುಡುಕಿದ ಮೇಲೆ ಹಂತಕ ತಗ್ಲಾಕಿಕೊಂಡಿದ್ದ. ಅವಳನ್ನ ಮದುವೆಯಾಗಿ 15 ವರ್ಷಗಳೇ ಕಳೆದಿದ್ರೂ, ಇಬ್ಬರು ಮಕ್ಕಳಿದ್ರೂ ಹೆಂಡತಿ ಮೇಲಿನ ಅನುಮಾನ ಮಾತ್ರ ಗಂಡನಿಗೆ ಕಡಿಮೆಯಾಗಿರಲಿಲ್ಲ. ಅವಳ ಮೇಲಿನ ಅನುಮಾನದಿಂದಲೇ ಪುಟ್ಟ ಮನೆಗೆ ಸಿಸಿ ಕ್ಯಾಮರಾವನ್ನೂ ಹಾಕಿಸಿದ್ದ. ಆದ್ರೆ ಆವತ್ತು ಆತನಿಗೆ ಅದೇನಾಯ್ತೋ ಏನೋ ಹೆಂಡತಿಯನ್ನೇ ಮುಗಿಸುವ ನಿರ್ಧಾರಕ್ಕೆ ಬಂದುಬಿಟ್ಟ. ಇದಕ್ಕಾಗಿ ಆತ ಆಯ್ದುಕೊಂಡಿದ್ದು ಆತನ ಸ್ನೇಹಿತ. ತನ್ನ ಸ್ನೇಹಿತನಿಗೇ ಗಂಡ, ಹೆಂಡತಿಯನ್ನ ಕೊಲ್ಲಲು(Murder) ಸುಪಾರಿ ಕೊಟ್ಟಿದ್ದ. ಸದ್ಯ ಸುಪಾರಿ ಪಡೆದು ಹೇಮಲತಾ ಕಥೆ ಮುಗಿಸಿದ ವಿನಯ್ ಜೈಲು ಸೇರಿ ತನ್ನ ಹಳೆ ಕಥೆಯನ್ನೂ ಬಾಯಿಬಿಟ್ಟರೆ, ಹೆಂಡತಿಯ ಕಥೆ ಮುಗಿಸಿ ಗಂಡನೂ ಸ್ನೇಹಿತನ ಜೊತೆಗೆ ಒಳಗೆ ಹೋಗಿದ್ದಾನೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಕಡೆಗಣಿಸಿದವರಿಗೆ ಸನ್ಮಾನ ಮಾಡಿತಾ ಕಮಲಪಡೆ..? ಎದುರಾಳಿಗಳಿಗೆ ಮೋದಿ ರವಾನಿಸಿದ ಸಂದೇಶವೇನು..?