ಸಿಲಿಕಾನ್‌ ಸಿಟಿಯಲ್ಲಿ ಹನಿಟ್ರ್ಯಾಪ್‌ ದಂಧೆ: ಟೆಲಿಗ್ರಾಂ ಮೂಲಕ ಯುವಕರಿಗೆ ಖೆಡ್ಡಾ..!

Aug 1, 2023, 10:55 AM IST

ಸೌಂದರ್ಯವನ್ನೇ ಬಂಡವಾಳ ಮಾಡ್ಕೊಳ್ಳೋ ಕೆಲವರು ಹೇಗೆಲ್ಲಾ ಬೆದರಿಕೆ ಹಾಕಿ ಹಣ ಮಾಡ್ತಿದ್ದಾರೆ ಅನ್ನೋದಕ್ಕೆ ಈ ಸ್ಟೋರಿ ತಾಜಾ ಉದಾಹರಣೆಯಾಗಿದೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರ ಬಲೆಗೆ ಹನಿಗ್ಯಾಂಗ್(Honey gang) ಬಿದ್ದಿದೆ. ಇಂಥದೊಂದು ಶಾಕಿಂಗ್ ಘಟನೆ ವರದಿಯಾಗಿರೋದು ಬೆಂಗಳೂರಿನ(Bengaluru) ಪುಟ್ಟೇನಹಳ್ಳಿಯಲ್ಲಿ. ಇಲ್ಲಿನ ವಿನಾಯಕ ನಗರದ ಮನೆಯೊಂದರಲ್ಲಿ ನದೀಮ್, ಅಬ್ದುಲ್ ಖಾದರ್, ಶರಣಪ್ರಕಾಶ್ ಬಳಿಗೇರ, ಎಂಬುವವರು ಮುಂಬಯಿ ಮೂಲದ ಮಾಡಲ್ ಒಬ್ಬಳ ಪೋಟೋ ಇರುವ ಡಿಪಿ ಬಳಸಿ ಟೆಲಿಗ್ರಾಂನಲ್ಲಿ(Telegram) ಚಾಟ್ ಶುರು ಮಾಡ್ತಾರೆ. ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಒಬ್ಬಳೇ ಮನೆಯಲ್ಲಿ ಇದೀನಿ ಅಂತಾ ಯುವಕರನ್ನು(Youths) ಖೆಡ್ಡಾಗೆ  ಬೀಳಿಸ್ತಾರೆ. ಯಾವಾಗ ಬಕ್ರ ಬೋನಿಗೆ ಬಿತ್ತು ಅಂತಾ ಗೊತ್ತಾಗುತ್ತೋ, ಆಗ ಮುಂಬಯಿನಿಂದ ಮಾಡಲ್ ಮೆಹರ್ ಅಲಿಯಾಸ್ ನೇಹಾ ಬೆಂಗಳೂರಿಗೆ ಎಂಟ್ರಿ ಕೊಡ್ತಾಳೆ. ಈ ಬೆಡಗಿ ಮೋಹಕ್ಕೆ ಸಿಲುಕಿದ ವ್ಯಕ್ತಿ ಮನೆಯೊಳಗೆ ಬಂದ ಕೆಲವೇ ನಿಮಿಷಗಳಲ್ಲಿ ಮೂವರು ಪುರುಷರ ಗ್ಯಾಂಗ್ ಕೂಡ ರೂಮ್ ಒಳಗೆ ಎಂಟ್ರಿಯಾಗ್ತಾರೆ. ಏಕಾಏಕಿ ಆ ವ್ಯಕ್ತಿಯನ್ನು ಬೆದರಿಸ್ತಾರೆ. ಅದೇ ಯುವತಿಯ ಜೊತೆಗೆ ಬೆತ್ತಲೆಯಾಗಿ ನಿಲ್ಲಿಸಿ ಪೋಟೋಸ್ ತಗೋತಾರೆ.  ಚಿನ್ನಾಭರಣ, ಮೊಬೈಲ್, ಪರ್ಸ್ ಎಲ್ಲಾ‌ ಕಸಿದುಕೊಂಡು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡ್ತಾರೆ. ಒಂದು ವೇಳೆ ಯುವಕನ ಬಳಿ ಹಣವಿಲ್ಲಾ ಅಂತಾ ಗೊತ್ತಾದ್ರೆ, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯ ಮಾಡುತ್ತಾರೆ.

ಇದನ್ನೂ ವೀಕ್ಷಿಸಿ:  ಇಂದಿನಿಂದ ರಾಜ್ಯದಲ್ಲಿ ದುನಿಯಾ ಮತ್ತಷ್ಟು ದುಬಾರಿ: ಹಾಲು, ಹೋಟೆಲ್ ಶಾಕ್..ಹೆದ್ದಾರಿಗೆ ಹೊಸ ರೂಲ್ಸ್