ಸಚಿವ ಜಮೀರ್‌ಗೆ ಶುರುವಾಯ್ತು ಅಕ್ರಮ ಆಸ್ತಿ ಸಂಕಷ್ಟ: ಎಫ್ಐಆರ್ ರದ್ದಿಗೆ ಹೈಕೋರ್ಟ್ ನಿರಾಕರಣೆ

ಸಚಿವ ಜಮೀರ್‌ಗೆ ಶುರುವಾಯ್ತು ಅಕ್ರಮ ಆಸ್ತಿ ಸಂಕಷ್ಟ: ಎಫ್ಐಆರ್ ರದ್ದಿಗೆ ಹೈಕೋರ್ಟ್ ನಿರಾಕರಣೆ

Published : Nov 20, 2023, 10:44 AM ISTUpdated : Nov 20, 2023, 10:46 AM IST

ಕಾಂಗ್ರೆಸ್‌ನ ಮತ್ತೊಬ್ಬ ಸಚಿವನಿಗೆ ಅಕ್ರಮ ಆಸ್ತಿ ಸಂಕಷ್ಟ ಎದುರಾಗಿದೆ. ಜಮೀರ್‌ ಲೋಕಾಯುಕ್ತದಲ್ಲಿ ದಾಖಲಾಗಿದ್ದ FIR ರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಎರಡು ಕಡೆ ವಾದ ಆಲಿಸಿದ ಹೈಕೋರ್ಟ್ ಎಫ್ಐಆರ್ ರದ್ದು ಮಾಡಲು ನಿರಾಕರಿಸಿದ್ದು, ಜಮೀರ್ ಅಹಮ್ಮದ್‌ಗೆ ಸಂಕಷ್ಟ ಶುರುವಾಗಿದೆ.
 

ಕಾಂಗ್ರೆಸ್ ಸಚಿವ ಜಮೀರ್ ಅಹಮ್ಮದ್‌ಗೆ(Zameer Ahmed Khan) ಸಂಕಷ್ಟ ಶುರುವಾಗಿದೆ. ಅಕ್ರಮ ಆಸ್ತಿಗಳಿಕೆಯೇ ಕುತ್ತು ತಂದಿದೆ. 2022ರ ಫೆಬ್ರವರಿಯಲ್ಲಿ ACB ಅಧಿಕಾರಿಗಳು ಜಮೀರ್ ಮನೆ ದಾಳಿ(Raid) ನಡೆಸಿದ್ರು. ಈ ವೇಳೆ 80.44 ಕೋಟಿ ರೂ. ಮೌಲ್ಯದ ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಅಂತಾ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ACB ಅಧಿಕಾರಿಗಳೇ ಜಮೀರ್ ವಿರುದ್ಧ FIR ದಾಖಲಿಸಿದ್ರು. ಎಫ್ಐಆರ್ ರದ್ದು ಕೋರಿ ಜಮೀರ್ ಹೈಕೋರ್ಟ್(Highcourt) ಮೆಟ್ಟಿಲೇರಿದ್ದರು.  ಪ್ರಾಥಮಿಕ ತನಿಖೆಯನ್ನೇ ಮಾಡದೆ ಜಮೀರ್ ಮೇಲೆ FIR ದಾಖಲಿಸಿದ್ದಾಗಿ ವಾದಿಸಿದ ಜಮೀರ್ ಪರ ವಕೀಲರು, ಎಫ್ಐಆರ್ ರದ್ದು ಮಾಡುವಂತೆ ಮನವಿ ಮಾಡಿದ್ರು. ಇದಕ್ಕೆ ಲೋಕಾಯುಕ್ತ ಪರ ವಕೀಲರು ಪ್ರತಿವಾದ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ ಜಮೀರ್  ಅರ್ಜಿಯನ್ನು  ವಜಾಗೊಳಿಸಿದ್ದು, ಸಚಿವರಿಗೆ ಸಂಕಷ್ಟ ತಂದಿಟ್ಟಿದೆ.

IMA ವಂಚನೆ ಕೇಸ್‌ ತನಿಖೆ ಮಾಡಿದ್ದ ED ಅಧಿಕಾರಿಗಳು..ಮನ್ಸೂರ್‌ಖಾನ್‌ನಿಂದ ಜಮೀರ್ 9.38 ಕೋಟಿ ಹಣ ಪಡೆದಿದ್ದಾರೆ ಅನ್ನೋ ವಿಷಯ ಬಯಲಾಗಿತ್ತು. ಬಳಿಕ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜನಪ್ರತಿನಿಧಿ ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಿದ್ರು. ನಂತ್ರ ಜಮೀರ್ ಶಾಸಕರಾಗಿದ್ರಿಂದ ಕೇಸ್‌ನ್ನು ACBಗೆ ವರ್ಗಾವಣೆ ಮಾಡಲಾಗಿತ್ತು..ಫೆಬ್ರವರಿಯಲ್ಲಿ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಜಮೀರ್ ಮನೆ ಮೇಲೆ ದಾಳಿ ಮಾಡಿದ್ರು. ಈ ವೇಳೆ 80.44 ಕೋಟಿ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರೋದು ಬೆಳಕಿಗೆ ಬಂದಿತ್ತು. ಬಳಿಕ 2022ರ ಮೇ ತಿಂಗಳಲ್ಲಿ ACB ಟೀಂ FIR ದಾಖಲಿಸಿದ್ರು.ನಂತ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ACB ರದ್ದುಮಾಡಿ ಲೋಕಾಯುಕ್ತ ನೇಮಕವಾಗಿತ್ತು..ಇಲ್ಲಿಗೆ ಕೇಸ್ ಕೂಡ ವರ್ಗಾವಣೆ ಆಗಿತ್ತು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ರಿಂದ ಜಮೀರ್ ಲೋಕಾಯುಕ್ತ ತನಿಖೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ವೀಕ್ಷಿಸಿ:  ಅಧಿಕಾರಿಗಳ ನಿರ್ಲಕ್ಷ್ಯ..ಅರ್ಧಕ್ಕೆ ನಿಂತ ಮನೆ ಕಾಮಗಾರಿ: ಗುಡಿಸಲುಗಳಲ್ಲೇ ದಿನದೂಡುತ್ತಿರುವ ಆದಿವಾಸಿ ಕುಟುಂಬ

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more