Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್‌ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ!

Jan 11, 2025, 11:16 PM IST

ಹಾಸನ (ಜ.11): ಹೊಸ ವರ್ಷಕ್ಕೆ ಇನ್ನೇನು ನಾಲ್ಕೇ ದಿನ ಬಾಕಿ ಇತ್ತು. ಡಿಸೆಂಬರ್‌ 26 ರಂದು ಪೆಟ್ರೋಲ್‌ ತರಲು ಬೈಕ್‌ನಲ್ಲಿ ಹೋದವನು. ಕಾಣೆಯಾಗಿ ಹೋಗಿದ್ದ. ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಮರು ದಿನ ಹೇಮಾವತಿ ನಾಲೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಗಂಡ ಆನಂದನ ಶವ ನೋಡಿ ಹೆಂಡತಿ ಎದೆ ಬಡಿಕೊಂಡು ಅತ್ತಿದ್ದಳು.

ಆದರೆ, ತನಿಖೆಯ ಬಳಿಕ ಕೊಲೆಗಾರ ಯಾರು ಅನ್ನೋದು ಪತ್ತೆಯಾಗಿದೆ. ಮೈದುನ ಸೋಮಶೇಖರ್‌ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆನಂದನ ಪತ್ನಿ ಅರ್ಚಿತಾಳೇ ಗಂಡನನ್ನು ಕೊಲೆ ಮಾಡಿದ್ದಾಳೆ. ಅರ್ಚಿತಾ ಹಾಗೂ ಸೋಮಶೇಖರ್‌ ಇಬ್ಬರೂ ಸೇರಿ ಆನಂದ್‌ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Viral Video: ಪ್ರೀತ್ಸೆ ಎಂದು ಬೆನ್ನುಬಿದ್ದ, ಆಗಲ್ಲ ಎಂದಿದ್ದಕ್ಕೆ ಎಲ್ಲರ ಎದುರು ಕೊಂದೇಬಿಟ್ಟ!

ಪತಿ ಆನಂದ್​ ಸಾವಿನ ಬಳಿಕ ಪತ್ನಿ ಅರ್ಚಿತಾ ವರ್ತನೆ ಬದಲಾಗಿತ್ತು. ಇದರಿಂದ ಅನುಮಾನಗೊಂಡ ಆನಂದ್​ನ ಕುಟುಂಬಸ್ಥರು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.