ಅಶ್ಲೀಲ ವಿಡಿಯೋ ಬೆದರಿಕೆಗೆ ಯುವತಿ ಸೂಸೈಡ್: ಅಪ್ರಾಪ್ತೆ ಬಲಿ ಪಡೆದ ಕಿರಾತಕರು !

ಅಶ್ಲೀಲ ವಿಡಿಯೋ ಬೆದರಿಕೆಗೆ ಯುವತಿ ಸೂಸೈಡ್: ಅಪ್ರಾಪ್ತೆ ಬಲಿ ಪಡೆದ ಕಿರಾತಕರು !

Published : Sep 05, 2023, 09:58 AM IST

ದ್ವೀತಿಯ ಪಿಯುಸಿ ಓದುತ್ತಿದ್ದ ಯುವತಿಯ ಬಾಳಲ್ಲಿ  ಯುವಕರು ಚೆಲ್ಲಾಟವಾಡಿದ್ದಾರೆ. ಪ್ರೀತಿಗೆ ಒಪ್ಪದಿದ್ದ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಒಡ್ಡಿ ಯುವತಿಯನ್ನೇ ಬಲಿ ಪಡೆದಿದ್ದಾರೆ.

ಆಕೆ ಇನ್ನೂ ಅಪ್ರಾಪ್ತೆ..ಚೆನ್ನಾಗಿ ಓದಿ ತನ್ನ ತಂದೆ ತಾಯಿಯನ್ನು  ನೋಡಿಕೊಳ್ಳಬೇಕೆಂಬ ಕನಸೊತ್ತಿದ್ದಳು. ತಾನಾಯ್ತು ತನ್ನ ಓದಾಯ್ತು ಅಂತಾ ಇದ್ದ ಯುವತಿಯ ಬಾಳಲ್ಲಿ ಇಬ್ಬರು ರಾಕ್ಷಕರು ಎಂಟ್ರಿ ಕೊಟ್ಟಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯ ಪರಿಚಯ ಮಾಡಿಕೊಂಡು ಮಧು ಎಂಬಾತ ನಿತ್ಯ ಪ್ರೀತಿಸುವಂತೆ ಟಾರ್ಚರ್(Torture) ಮಾಡುತ್ತಿದ್ದ. ಆದ್ರೆ ಇದಕ್ಕೆ ಒಪ್ಪದ ಯುವತಿಯ ಬಾಳಲ್ಲಿ ಮಧು ಚೆಲ್ಲಾಟವಾಡಿದ್ದಾನೆ. ಈ ಆರೋಪಿ ಮಧು, ದಾವಣಗೆರೆಯ(Davanagere) ಜಗಳೂರು ನಿವಾಸಿ. ಬೀದಿ ಬೀದಿಯಲ್ಲಿ ರೋಡ್ ರೋಮಿಯೋ ಆಗಿದ್ದ ಮಧು ಕಾಲೇಜಿಗೆ ಹೋಗುವ ಈ ಅಪ್ರಾಪ್ತೆ(Minor girl) ಹಿಂದೆ ಬಿದ್ದಿದ್ದ. ನಿತ್ಯ ಪ್ರೀತಿ ಮಾಡುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಆದ್ರೆ, ಈಕೆ ಮಾತ್ರ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸೈಕೋ ಪ್ರೇಮಿ ಮಧು, ತನ್ನ ಸ್ನೇಹಿತ ನಾಗೇಂದ್ರ ಸ್ವಾಮಿ ಜೊತೆಗೂಡಿ ಸ್ಕೆಚ್ ಹಾಕಿದ್ದಾನೆ. ಬೇಕರಿ ಸಿಹಿ ತಿನಿಸಿನಲ್ಲಿ ಮತ್ತು ಬರುವ ಔಷಧಿ ಹಾಕಿ ಯುವತಿಗೆ ನೀಡಿ, ಆಕೆಯ ಅಶ್ಲೀಲ ವಿಡಿಯೋ(Video) ಮಾಡಿಕೊಂಡಿದ್ದಾನೆ. ಬಳಿಕ ಆ ವಿಡಿಯೋ ಹರಿಬಿಡೋದಾಗಿ ಯುವತಿಗೆ ಧಮ್ಕಿ ಹಾಕಿದ್ದಾನೆ.ಯಾವಾಗ ಈ ಇಬ್ಬರು ರಾಕ್ಷಸರ ಟಾರ್ಚರ್ ಜೋರಾಯ್ತೋ ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಳು. ಆಗಸ್ಟ್ 28 ರಂದು  ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಸೂಸೈಡ್‌ಗೆ ಯತ್ನಿಸಿದ್ದಾಳೆ. ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಭಾನುವಾರ ಅಸು‌ನೀಗಿದ್ದಾಳೆ. 

ಇದನ್ನೂ ವೀಕ್ಷಿಸಿ:  ಪವನ್‌ ಕಲ್ಯಾಣ್ ಬರ್ತ್ ಡೇಗೆ ಪವರ್‌ಫುಲ್ ಗಿಫ್ಟ್..! ಓಜಿ ಟೀಸರ್ ಔಟ್..ಅಭಿಮಾನಿಗಳು ಶಾಕ್..!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more