ಕಮಿಷನ್ ಕೋಲಾಹಲದ ಮಧ್ಯೆ ಬಿಬಿಎಂಪಿ ಕಚೇರಿಗೆ ಬೆಂಕಿ:  ಈ ದುರಂತಕ್ಕೆ ‘ಆ’ ಅಧಿಕಾರಿಯೇ ಕಾರಣನಾ..?

ಕಮಿಷನ್ ಕೋಲಾಹಲದ ಮಧ್ಯೆ ಬಿಬಿಎಂಪಿ ಕಚೇರಿಗೆ ಬೆಂಕಿ: ಈ ದುರಂತಕ್ಕೆ ‘ಆ’ ಅಧಿಕಾರಿಯೇ ಕಾರಣನಾ..?

Published : Aug 17, 2023, 10:07 AM ISTUpdated : Aug 17, 2023, 10:10 AM IST

ಈ ಬೆಂಕಿ ದುರಂತ ನೆನಪಿದ್ಯಾ ? ಕಳೆದ 6 ದಿನದ ಹಿಂದೆ ಬಿಬಿಎಂಪಿ ಮುಖ್ಯ ಕಟ್ಟದಲ್ಲಿರುವ ಕ್ವಾಲಿಟಿ ಕಂಟ್ರೋಲ್ ಕಚೇರಿಯಲ್ಲಿ ದುರಂತ ಸಂಭವಿಸಿತ್ತು. ಇನ್ನೇನು ಕರ್ತವ್ಯ ಮುಗಿಸಿ ಮನೆಗೆ ತೆರಳುವ ಸಿದ್ಧತೆಯಲ್ಲಿದ್ದ ಸಿಬ್ಬಂದಿಗಳಲ್ಲಿ 9 ಮಂದಿ ಸುಟ್ಟು ಗಾಯಗೊಂಡಿದ್ರು. ಗಾಯಾಳುಗಳು ಈಗಲೂ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ.

ಬಿಬಿಎಂಪಿ ಗುತ್ತಿಗೆ ಬಿಲ್ ಬಾಕಿ ವಿಚಾರದಲ್ಲಿ ಕಮಿಷನ್ ಕದನ ನಡೆಯುತ್ತಿರುವ ಹೊತ್ತಲ್ಲೇ ಬಿಬಿಎಂಪಿ(BBMP) ಕಚೇರಿಯಲ್ಲಿ ನಡೆದ  ಬೆಂಕಿ ದುರಂತ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಬೆಂಕಿ ದುರಂತ(Fire incident) ಆಕಸ್ಮಿಕವೋ..? ಉದ್ದೇಶ ಪೂರ್ವಕವೋ ಅನ್ನೋ ಅನುಮಾನ ಈಗಲೂ ಕಾಡುತ್ತಿದೆ. ಆದ್ರೆ, ಮೇಲ್ನೋಟಕ್ಕೆ ಒಂದಿಷ್ಟು ಕಾರಣಗಳು ಗೋಚರಿಸುತ್ತಿವೆ. ಬಿಬಿಎಂಪಿ ಬೆಂಕಿ ಪ್ರಕರಣಕ್ಕೆ‌ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ಲಕ್ಷ್ಯ ಕಾರಣವಾಯ್ತಾ ಅನ್ನೋ ಅನುಮಾನ ಮೂಡಿದೆ. ಪ್ರಯೋಗಾಲಯಕ್ಕೆ ಬೇಕಾದ ಸೌಲಭ್ಯ ಒದಗಿಸದ ಬಿಬಿಎಂಪಿ ಮುಖ್ಯ ಇಂಜಿನಿಯರ್(BBMP Chief Engineer) ಪ್ರಹ್ಲಾದ್‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಿಬಿಎಂಪಿ ಗುಣನಿಯಂತ್ರಣ ವಿಭಾಗದಲ್ಲಿ ಅಗತ್ಯ ಸಲಕರಣೆ, ಮುಂಜಾಗ್ರತೆ ಭದ್ರತೆ ಇಲ್ಲದ್ದೇ ಬೆಂಕಿಗೆ ಅವಘಡಕ್ಕೆ ಕಾರಣ ಅನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ. ಸಿಬ್ಬಂದಿ, ಸಲಕರಣೆಗಾಗಿ 2022ರಲ್ಲೇ ಗುಣನಿಯಂತ್ರಣ ವಿಭಾಗದಿಂದ ಆಯುಕ್ತರಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿರಲಿಲ್ವಂತೆ. ಒಂದೆಡೆ ಬೆಂಕಿ ದುರಂತದ ತನಿಖೆ ಚುರುಕು ಪಡೆದರೆ, ಮತ್ತೊಂದೆಡೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಜ್ಯೋತಿ ಮತ್ತು ಇಇ ಕಿರಣ್ ಸ್ಥಿತಿ ಗಂಭೀರವಾಗಿದ್ದು, ಡಯಾಲಿಸಿಸ್ ಕೂಡ ಮಾಡಲಾಗ್ತಿದೆ. 

ಇದನ್ನೂ ವೀಕ್ಷಿಸಿ:  ಹಳೇ ಸಂಜೂ ಹೊಸ ಗೀತಾ: ರೊಮ್ಯಾಂಟಿಕ್ ಮೂಡ್‌ನಲ್ಲಿ ಕಿಟ್ಟಿ- ರಚ್ಚು ಡಾನ್ಸ್ !

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more