
ಅವನೊಬ್ಬ ಕೆಲಸದಾಳು. ಊರಿನ ಗೌಡ್ತಿ ಮನೆಯಲ್ಲಿ ಕೆಲಸಕ್ಕಿದ್ದ. ಅವರು ಕೊಡೋ ಪುಡಿಗಾಸಿನಲ್ಲೇ ಜೀವನ ಮಾಡ್ತಿದ್ದ.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ. ಮಕ್ಕಳು ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಿದ್ರು.. ಬಟ್ ಯಾವುದೇ ಸುಳಿವು ಸಿಗೋದಿಲ್ಲ. ನಂತರ ಮೂರು ದಿನದ ಬಳಿಕ ಅದೇ ಗ್ರಾಮದ ಪೊದೆಯೊಂದರಲ್ಲಿ ಆತನ ಶವ ಸಿಕ್ಕಿತ್ತು. 6 ತಿಂಗಳ ಬಳಿಕ ಸುಳಿವೇ ಇಲ್ಲದ ಕೇಸನ್ನ ಪೊಲೀಸರು ಬೇದಿಸಿದ್ದೇಗೆ? ಡೆಡ್ಲಿ ಮರ್ಡರ್ ಹಿಂದಿನ ರೋಚಕ ಕಹಾನಿ ಇದು
ಇದನ್ನೂ ಓದಿ: ಕೆಲಸದಾಳು ಜೊತೆಗೇ ಯಜಮಾನಿಯ ಕುಚ್ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!
ಮಹದೇವಪ್ಪನನ್ನ ಕೊಲೆ ಮಾಡಿದ ಹಂತಕರು ಯಾರು ಅನ್ನೋದನ್ನ ಪತ್ತೆ ಮಾಡಲು ಹರಸಾಹಸ ಪಟ್ಟಿದ್ರು.. ಕಾರಣ ಅಲ್ಲಿ ಮಲ್ಲಮ್ಮ ಆ್ಯಂಡ್ ಫ್ಯಾಮಿಲಿ ಒಂದೇ ಒಂದು ಸಾಕ್ಷಿ ಉಳಿಸಿರಲಿಲ್ಲ. ನೋಡೋವರೆಗೂ ನೋಡಿದ ಮಹಾದೇವಪ್ಪ ಕುಟುಂಬ ದಲಿತ ಸಂಘಟನೆಗಳ ಮೊರೆ ಹೋಗಿತ್ತು. ಇತ್ತ ಇಡೀ ಕೇಸ್ ಮಹಾದೇವಪ್ಪನ ಮಗನ ಕಡೆಗೆ ತಿರುಗುವಂತೆ ಮಾಡಿದ್ದ ಹಂತಕ ಅಪ್ಪುಗೌಡ. ಆದ್ರೆ ಕೊನೆಗೆ ಆಗಿದ್ದೇ ಬೇರೆ.. ಪೊಲೀಸರು ಬ್ರೇನ್ ಮ್ಯಾಪಿಂಗ್, ಪಾಲಿಗ್ರಾಫಿಗೆ ಮುಂದಾಗ್ತಾರೆ.. ಮಹದೇವಪ್ಪ ಫ್ಯಾಮಿಲಿ ಮತ್ತು ಮಲ್ಲಮ್ಮ ಫ್ಯಾಮಿಲಿಯನ್ನ ಪರೀಕ್ಷೆಗೆ ಒಳಪಡಿಸುತ್ತಾರೆ.. ಆಗಲೇ ನೋಡಿ ಹಂತಕರು ಈಸಿಯಾಗಿ ತಗ್ಲಾಕಿಕೊಳ್ಳೋದು.