ಬಾವನ ಜತೆ ಲವ್ವಿ ಡವ್ವಿ, ಗಂಡನ ಹತ್ಯೆಗೆ ಪತ್ನಿ ಸ್ಕೆಚ್​​: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ಹೆಣ!

ಬಾವನ ಜತೆ ಲವ್ವಿ ಡವ್ವಿ, ಗಂಡನ ಹತ್ಯೆಗೆ ಪತ್ನಿ ಸ್ಕೆಚ್​​: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ಹೆಣ!

Published : Jan 12, 2025, 12:29 PM IST

ಸೋಮಶೇಖರ್​ ಹಾಗೂ ಅರ್ಚಿತಾ ಅಕ್ರಮ ಸಂಬಂಧದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಅರ್ಚಿತಾ ಹಾಗೂ ಸೋಮಶೇಖರ್​ನನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಹಾಸನ(ಜ.12): ಇದು ಹಾಸನದ ಸ್ಟೋರಿ. ಆತ ತಾನಾಯ್ತು ತನ್ನ ಸಂಸಾರವಾಯ್ತು ಅಂತಾ ಬದುಕುತ್ತಿದ್ದ. ಆದ್ರೆ ತನ್ನ ಅಣ್ಣನಿಗೆ ತೋರಿದ ಪ್ರೀತಿ, ಕಾಳಜಿಯೇ ಆತನ ಬದುಕಿಗೆ ಮುಳುವಾಗಿದೆ. ನಾದಿನಿ ಮೇಲೆ ಮೇಲೆ ಕಣ್ಣು ಹಾಕಿದ ಕಿರಾತಕ ಅಣ್ಣ ತನ್ನ ತಮ್ಮನ ಹೆಣ ಬೀಳಿಸಿದ್ದಾನೆ. 

ಗುರುತೇ ಸಿಗದ ರೀತಿಯಲ್ಲಿ ನೀರಲ್ಲಿ ಶವವಾಗಿ ಪತ್ತೆಯಾದ ಈತನ ಹೆಸರು ಆನಂದ್​.. ಹಾಸನದ ಮುಕುಂದೂರು ಹೊಸಳ್ಳಿ ಗ್ರಾಮದವನು. 10 ವರ್ಷಗಳ ಹಿಂದೆ ಅರ್ಚಿತಾ ಎಂಬಾಕೆ ಜತೆ ಮದುವೆಯಾಗಿತ್ತು. ಕೂಲಿ ಕೆಲಸ ಮಾಡ್ತಿದ್ರೂ ತನ್ನ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ತಿದ್ದ. ಈ ಸುಂದರ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದು ಇವನ ಸೋದರ ಸಂಬಂಧಿ ಸೋಮಶೇಖರ್​. 

Deadly Danger: ಮಂಗನಂತೆ ಜಿಗಿಯಲು ಹೋಗಿ ಮೂಳೆ ಮುರಿದುಕೊಂಡ ಭೂಪ!

ಮೂರು ವರ್ಷಗಳ ಹಿಂದೆ ಸೋಮಶೇಖರ್​ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಹೀಗಾಗಿ ಊಟ, ತಿಂಡಿಗೆ ನಮ್ಮಮನೆಗೆ ಬರುವಂತೆ ಆನಂದ ಹೇಳಿದ್ದ. ಆದ್ರೆ ಊಟ, ತಿಂಡಿಗೆ ಕರೆದು ಉಪಚಾರ ಮಾಡಿದ್ದ ಆನಂದನ ಹೆಂಡತಿ ಮೇಲೆಯೇ ಕಿರಾತಕ ಸೋಮಶೇಖರ ಕಣ್ಣು ಹಾಕಿದ್ದ. ಆನಂದನ ಪತ್ನಿ ಅರ್ಚಿತಾ ಜತೆಗೆ ಅನೈತಿಕ ಸಂಬಂಧವನ್ನೂ ಬೆಳೆಸಿದ್ದ. ಈ ವಿಷಯ ಗೊತ್ತಾಗಿ ಆನಂದ, ಪತ್ನಿಗೆ ಬುದ್ಧಿಮಾತು ಹೇಳಿದ್ದ. ಆದ್ರೆ ಪತ್ನಿ ಅರ್ಚಿತಾ ಬುದ್ಧಿಮಾತಿಗೆ ಬಗ್ಗುವ ಮನಸ್ಥಿತಿಯಲ್ಲಿರಲಿಲ್ಲ. ಬದಲಿಗೆ ಸಂಬಂಧದಲ್ಲಿ ಬಾವನಾದ ಸೋಮಶೇಖರನ ಜತೆಗೂಡಿ ಗಂಡನ ಕಥೆ ಮುಗಿಸಲು ಸ್ಕೆಚ್​ ರೆಡಿ ಮಾಡಿದ್ದಳು. 

ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ

ಡಿ.26 ಆನಂದನಿಗೆ ಕರೆ ಮಾಡಿದ್ದ ಸೋಮಶೇಖರ ಹೇಮಾವತಿ ನಾಲೆಯ ದಡದಲ್ಲಿ ಆನಂದನಿಗೆ ಕಂಠಪೂರ್ತಿ ಕುಡಿಸಿ, ಆನಂದನನ್ನು ನಾಲೆಗೆ ತಳ್ಳಿ ಮನೆಗೆ ತೆರಳಿದ್ದ. ಆನಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲು ಸೋಮಶೇಖರ ಪ್ಲಾನ್​ ಮಾಡಿದ್ದ. ಇತ್ತ ಆನಂದನ ಪತ್ನಿ ಅರ್ಚಿತಾ ತನಗೇನೂ ಗೊತ್ತೆ ಇಲ್ಲ ಎನ್ನುವಂತೆ ಪೊಲೀಸರಿಗೆ ಮಿಸ್ಸಿಂಗ್​ ಕಂಪ್ಲೇಂಟ್​ ನೀಡಿದ್ದಳು. ಸೋಮಶೇಖರ ಕೂಡ ಆನಂದನನ್ನ ಹುಡುಕುತ್ತಿರುವಂತೆ ನಾಟಕವಾಡಿದ್ದ. ಡಿ.28ರಂದು ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದನ ಮೃತದೇಹ ಪತ್ತೆಯಾಗಿತ್ತು. 

ಸೋಮಶೇಖರ್​ ಹಾಗೂ ಅರ್ಚಿತಾ ಅಕ್ರಮ ಸಂಬಂಧದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಅರ್ಚಿತಾ ಹಾಗೂ ಸೋಮಶೇಖರ್​ನನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಕಾಮದಾಸೆಗೆ ಅಕ್ಕರೆ ತೋರಿ ಅನ್ನ ಹಾಕಿದ ತಮ್ಮನನ್ನೇ ಕೊಂದು ಮುಗಿಸಿದ ಪಾಪಿ ಅಣ್ಣನಿಗೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ. 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more