ಮದುವೆ ಸಂದರ್ಭದಲ್ಲಿ ಆದರ್ಶ ಮೆರೆದಿದ್ದ ಪೊಲೀಸಪ್ಪ: ಬಳಿಕ ಶುರುವಾಯ್ತು ವರದಕ್ಷಿಣೆ ಕಾಟ !

ಮದುವೆ ಸಂದರ್ಭದಲ್ಲಿ ಆದರ್ಶ ಮೆರೆದಿದ್ದ ಪೊಲೀಸಪ್ಪ: ಬಳಿಕ ಶುರುವಾಯ್ತು ವರದಕ್ಷಿಣೆ ಕಾಟ !

Published : Sep 02, 2023, 11:19 AM IST

ಆತ ಸಾರ್ವಜನಿಕ ರಕ್ಷಣೆಯ ಜವಬ್ದಾರಿ ಹೊತ್ತ ಪೊಲೀಸ್‌ ಇಲಾಖೆಯ ನೌಕರ. ಬ್ರೈನ್‌ ಟ್ಯೂಮರ್‌ ಕಾಯಿಲೆಗೆ ತುತ್ತಾದ ಯುವತಿಗೆ ಮದುವೆಯಾಗುವ ಮೂಲಕ ಜೀವನಕೊಟ್ಟು ಎಲ್ಲರ ಕಣ್ಣಲ್ಲಿ ಹೀರೋ ಆಗಿದ್ದ. ಆದರೆ ದಿನ ಕಳೆದಂತೆ ತನ್ನ ವರಸೆ ಬದಲಿಸಿ ವಿಲನ್ ಆಗಿದ್ದಾನೆ. ವರದಕ್ಷಿಣೆ ತರುವಂತೆ ಅನಾರೋಗ್ಯ ಪೀಡಿತ ಹೆಂಡತಿಗೆ ಕಿರುಕುಳು ನೀಡುತ್ತಿದ್ದು, ಟಾರ್ಚರ್ ತಾಳಲಾರದೇ ಆಕೆ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾಳೆ.

ನ್ಯಾಯಕ್ಕಾಗಿ ತುಮಕೂರು ಎಸ್ಪಿ ಕಚೇರಿ ಬಳಿ ನಿಂತಿರುವ ಈಕೆಯ ಹೆಸರು ಸಹನಾ. ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ನಿವಾಸಿಗಳಾದ ಜಯಕುಮಾರ್‌-ರುಕ್ಮಿಣಿ ದಂಪತಿಯ ಪುತ್ರಿ. ಡಿಪ್ಲೋಮ ಓದಿರುವ ಈಕೆಗೆ ಒಂದು ವರ್ಷದ ಹಿಂದೆ ಕುಟುಂಬದ  ಸಂಬಂಧಿ ತುಮಕೂರು(Tumakur)ನಗರ ಠಾಣೆಯ ಕಾನ್ಸ್‌ಸ್ಟೇಬಲ್ ಸುನಿಲ್‌ ಕುಮಾರ್‌ ಎಂಬಾತನೊಂದಿಗೆ ವಿವಾಹವಾಗಿದೆ. ಮದುವೆ ಇನ್ನೆರಡು ದಿನ ಇದೆ ಅನ್ನೋ ಸಂದರ್ಭದಲ್ಲಿ ಸಹನಾಳಿಗೆ ತಲೆನೋವು ಕಾಣಿಸಿಕೊಂಡಿತ್ತು. ಮನೆಯವರು ಈಕೆಗೆ ಎಂಆರ್‌ಐ ಸ್ಕ್ಯಾನ್‌ ಮಾಡಿಸಿದಾಗ ಬ್ರೈನ್‌ ಟ್ಯೂಮರ್‌(Brain tumor) ಇರೋದು ಗೊತ್ತಾಗಿದೆ.  ಸಹನ ಬದುಕುವುದು ಒಂದು ತಿಂಗಳು ಮಾತ್ರ  ಅಂತ ವೈದ್ಯರು ತಿಳಿಸಿದ್ದಾರೆ. ಆಗ ಸಹನಾ ಪೋಷಕರು ಮಗಳಿಗೆ ಮದುವೆ ಮಾಡೋದೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ರು. ಆದ್ರೆ ಹಠ ಬಿಡದ ಸುನೀಲ್‌ ನಾನು ಈಕೆಯನ್ನೇ ಮದುವೆಯಾಗುತ್ತೇನೆಂದು ಹೇಳಿ ಆದರ್ಶ ಮರೆದಿದ್ದ. ಪ್ರಾರಂಭದಲ್ಲಿ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಆದ್ರೆ, ಮದುವೆ ನಡೆದು ಒಂದು ವರ್ಷವಾದ ಬಳಿಕ ಅಸಲಿ ಆಟ ಶುರುಮಾಡಿದ್ದಾನಂತೆ. ವರದಕ್ಷಿಣೆ (Dowry harassment) ತರುವಂತೆ ಲಾಠಿ ಹಾಗೂ ಬೂಟಿನಿಂದ ಸಹನಾಗೆ ಮನ ಬಂದಂತೆ ಥಳಿಸಿ ಹಿಂಸೆ ನೀಡುತ್ತಿದ್ದಾನಂತೆ. 

ಇದನ್ನೂ ವೀಕ್ಷಿಸಿ:  KBJNL ಶಿಫ್ಟ್‌ಗೆ ಆದೇಶವಿದ್ರೂ ಎಂಡಿ ಕಳ್ಳಾಟ: ಬೆಂಗಳೂರಿನ ಕಚೇರಿಗೆ ವಿಜಯಪುರ ರೈತರ ಅಲೆದಾಟ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more