Dec 19, 2023, 3:28 PM IST
ಅವರು ವೃದ್ಧ ದಂಪತಿ. ಇದ್ದ 4 ಹೆಣ್ಣುಮಕ್ಕಳಿಗೂ ಮದುವೆ ಮಾಡಿ ಗಂಡನ ಮನೆ ಸೇರಿಸಿದ್ರು. ಮಗ ಹೆತ್ತವರಿಂದ ದೂರ ಆಗಿದ್ದ. ಬದುಕಿನ ಸಂಧ್ಯಾ ಕಾಲದಲ್ಲಿದ್ದ ಆ ದಂಪತಿ ಏಕಾಂಗಿಯಾಗಿ ಜೀವನ ಮಾಡ್ತಿದ್ರು. ಆದ್ರೆ ಆವತ್ತೊಂದು ದಿನ ಅಜ್ಜ ಅಜ್ಜಿ ತಮ್ಮದೇ ಮನೆಯಲ್ಲಿ ಮರ್ಡರ್(Double murder ) ಆಗಿದ್ರು. ಯಾರೋ ಅವರ ತಲೆಗೆ ಬಲವಾಗಿ ಹೊಡೆದು ಕೊಂದುಬಿಟ್ಟಿದ್ರು. ಇನ್ನೂ ಇದೇ ಡಬಲ್ ಮರ್ಡರ್ ಕೇಸ್‌ನ ತನಿಖೆ ನಡೆಸಿದ ಪೊಲೀಸರಿಗೆ ಅಜ್ಜ ಅಜ್ಜಿಯ ಹೆಣ್ಣುಮಕ್ಕಳು ಹೇಳಿದ್ದು ಈ ಕೊಲೆ ಮಗನೇ ಮಾಡಿರೋದು ಅಂತ. ಆದ್ರೆ ಮಗ ಮಾತ್ರ ನಾನವನ್ನಲ್ಲ ಅಂತ ಹೇಳಿದ್ದ. ಹೆಣ್ಣುಮಕ್ಕಳೆಲ್ಲಾ ಸಹೋದರನ ಕಡೆಯೇ ಬೊಟ್ಟು ಮಾಡ್ತಿದ್ರೆ ಸಹೋದರ ಮಾತ್ರ ನಾನು ಕೊಲೆ ಮಾಡಿಲ್ಲ. ಅವರವರೇ ಬಡಿದಾಡಿಕೊಂಡು ಸತ್ತಿದ್ದಾರೆ ಅಂದಿದ್ದ. ಆದ್ರೆ ಅವನ ಕಥೆ ಕೇಳೋಕೆ ಸಹೋದರಿಯರಷ್ಟೇ ಅಲ್ಲ ಪೊಲೀಸರೂ(police) ಕೂಡ ರೆಡಿ ಇರಲಿಲ್ಲ. ಹೀಗಾಗಿ ಆತನನ್ನ ಪೊಲೀಸ್(police) ಭಾಷೆಯಲ್ಲಿ ವಿಚಾರಣೆ ಮಾಡಲಾಯ್ತು.ಆಗಲೇ ನೋಡಿ ಆ ಪಾಪಿ ಮಗ ಹೆತ್ತವರ ಸಾವಿನ ಬಗ್ಗೆ ಸುಳಿವು ಕೊಡೋದು.ಅದು ಆಸ್ತಿಗಾಗಿ ನಡೆದ ಕೊಲೆ ಅನ್ನೋದಂತೂ ಪೊಲೀಸರಿಗೆ ಕನ್ಫರ್ಮ್ ಆಯ್ತು. ಆದ್ರೆ ಹೆಣ್ಣುಮಕ್ಕಳು ಆರೋಪಿಸಿದ್ದ ಮಗನನ್ನ ಕರೆದು ವಿಚಾರಣೆ ಮಾಡಿದಾಗ ಆತ ಹೇಳಿದ ಸತ್ಯ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ರು. ಕಾರಣ ಆ ವೃದ್ಧ ದಂಪತಿಯನ್ನ ಕೊಂದಿದ್ದು ಮಗನಲ್ಲ ಬದಲಿಗೆ ಆತನ ಹೆಂಡತಿ ಮತ್ತು ಮಕ್ಕಳು. ಸಾಲ ಮಾಡಿಕೊಂಡಿದ್ದ ಗಂಡನಿಗಾಗಿ ಆತನ ಹೆಂಡತಿ ಮತ್ತು ಮಕ್ಕಳು ಸ್ವಯಂ ಅಖಾಡಕ್ಕೆ ಇಳಿದುಬಿಟ್ಟಿದ್ರು. ಅತ್ತೆ ಮಾವ ಸತ್ತರೆ ಆಸ್ತಿ ನಮ್ಮದಾಗುತ್ತೆ.. ಗಂಡನ ಸಾಲ ಕೂಡ ತೀರುತ್ತೆ ಅಂತ ನಿರ್ಧರಿಸಿ ಆವತ್ತೊಂದು ದಿನ ಮಾವನ ಮನೆಗೆ ನುಗ್ಗೇ ಬಿಟ್ಟರು. ಮನೆ ಒಳಗೆ ಸೊಸೆ ಮತ್ತು ಮೊಮ್ಮಗಳು ಹೆಣಹಾಕ್ತಿದ್ರೆ ಮನೆ ಹೊರಗೆ ನಿಂತು ಅಪ್ರಾಪ್ತ ಬಾಲಕ ಕಾವಲು ಕಾಯ್ತಿದ್ದ.ನಂತರ ಗಂಡನಿಗೆ ವಿಷಯ ಗೊತ್ತಾದ ಮೇಲೆ ಹೆತ್ತವರನ್ನ ಕೊಂದವರನ್ನ ಪೊಲೀಸ್ ಠಾಣೆಗೆ ಕರೆ ತರೋದುಬಿಟ್ಟು ಅವರನ್ನೇ ರಕ್ಷಣ ಮಾಡಲು ನಿಂತಿದ್ದ. ಗಂಡನನ್ನ ಸಾಲದ ಸುಳಿಯಿಂದ ಉಳಿಸಬೇಕು ಆತನಿಗೆ ಸಹಾಯ ಮಾಡಬೇಕು ಅನ್ನೂ ಭರದಲ್ಲಿ ಹೆತ್ತ ಮಕ್ಕಳ ಉಜ್ಜಲ ಭವಿಷ್ಯದ ಬಗ್ಗೆಯು ಚಿಂತಿಸದ ತಾಯಿ ಕುಟುಂಬದ ಭವಿಷ್ಯವನ್ನೆ ಹಾಳು ಮಾಡಿದ್ದಾಳೆ. ಇನ್ನೂ ಮಕ್ಕಳೆಲ್ಲ ಒಂದೆ ಎಲ್ಲರೂ ಚೆನ್ನಾಗಿರಲಿ ಅಂದುಕೊಂಡ ತಂದೆ ತಾಯಿ ಸೊಸೆಯಿಂದ ಕೊಲೆ.ಯಾಗಿದ್ದು ಇದೀಗ ಆಸ್ತಿಗೆ ಆಸ್ತಿಯು ಇಲ್ಲದೆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲಾಗದೆ ಸಂಪೂರ್ಣ ಕುಟುಂಬವೆ ಜೈಲಿನಲ್ಲಿ ಕಂಬಿ ಎಣಿಸುವಂಘಾದೆ.
ಇದನ್ನೂ ವೀಕ್ಷಿಸಿ: 28 ಕ್ಷೇತ್ರಗಳ ಗುಟ್ಟು ರಟ್ಟು..ಯಾರಾಗ್ತಾರೆ ಕೈ ಕ್ಯಾಂಡಿಡೇಟ್ಸ್..? ಸಿದ್ದು ಲೆಕ್ಕಾಚಾರ ಏನು..? ಡಿಕೆಶಿ ಸ್ಟ್ರಾಟಜಿ ಏನು..?