ಪ್ರೇಮ ಗೀಮ ಜಾನೇದೋ ಅಂದ್ರೆ ಮೋಸವೋ...ನಗ್ನಚಿತ್ರಗಳಿಗೆ ನಾಶವಾಯ್ತು ಪ್ರೀತಿ..!

ಪ್ರೇಮ ಗೀಮ ಜಾನೇದೋ ಅಂದ್ರೆ ಮೋಸವೋ...ನಗ್ನಚಿತ್ರಗಳಿಗೆ ನಾಶವಾಯ್ತು ಪ್ರೀತಿ..!

Published : Sep 23, 2022, 03:39 PM IST

ಖಾಸಗಿ ಕ್ಷಣದ ಫೋಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಿಗೆ ಹಾಕಿದ್ದಕ್ಕೆ ಆರ್ಕಿಟೆಕ್ಟ್‌ ಆಗಿದ್ದ ಹುಡುಗಿಯೊಬ್ಬಳು, ವೈದ್ಯನಾಗಿದ್ದ ಪ್ರಿಯತಮನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಅಚ್ಚರಿಯ ವಿಚಾರವೆಂದರೆ, ಮದುವೆಗೆ ಕೇವಲ ಮೂರು ತಿಂಗಳು ಇರುವಾಗಲೇ ಈ ಘಟನೆ ನಡೆದಿದೆ.
 

ಬೆಂಗಳೂರು (ಸೆ.23): ಅವನು ಡಾಕ್ಟರ್... ದೂರದ ಉಕ್ರೇನ್‌ನಲ್ಲಿ ಎಂ.ಬಿ.ಬಿಎಸ್ ಮಾಡಿ ತನ್ನ ಹುಟ್ಟೂರು ಚೆನ್ನೈನಲ್ಲಿ ಡಾಕ್ಟರ್ ಆಗಿದ್ದ. ಇದೇ ಡಾಕ್ಟರ್‌ಗೆ ಬೆಂಗಳೂರಿನ ಸುಂದರಿಯೊಬ್ಬಳ ಪರಿಚಯವಾಗುತ್ತೆ. ಪರಿಚಯ ಸ್ನೇಹವಾಗಿ ನಂತರ ಅದು ಪ್ರೀತಿಗೆ ತಿರುಗುತ್ತೆ. ಇಬ್ಬರೂ ತಮ್ಮ ಪೋಷಕರನ್ನ ಒಪ್ಪಿಸಿ ಮದುವೆಗೂ ಸಿದ್ಧರಾಗ್ತಾರೆ. ಇನ್ನೇನು ಮದುವೆಯಾಗಲು ಮೂರು ತಿಂಗಳಷ್ಟೇ ಬಾಕಿ ಇದ್ದಿದ್ದು.  ಅಷ್ಟರಲ್ಲೇ ಮಧುಮಗ ಸಾವನ್ನಪ್ಪಿಬಿಡ್ತಾನೆ. ಹಸೆಮಣೆ ಏರಬೇಕಿದ್ದವನು, ಸ್ಮಶಾನ ಸೇರಿಕೊಳ್ತಾನೆ. ಆದ್ರೆ ಅವನ ಸಾವು ಸಹಜವಾಗಿರೋದಿಲ್ಲ. ಅವನನ್ನ ಕೊಂದು ಮುಗಿಸಲಾಗಿರುತ್ತೆ. ಹಾಗಾದ್ರೆ ಆ ವೈದ್ಯನನ್ನ ಕೊಂದವರು ಯಾರು? 

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವಿಕಾಸ್ ಮತ್ತು ಪ್ರತಿಭಾ ಡೀಪ್ ಲವ್ನಲ್ಲಿ ಬಿದ್ದುಬಿಡ್ತಾರೆ. ಇಬ್ಬರ ನಡುವೆ ದೇಹ ಸಂಬಂಧ ಕೂಡ ಬೆಳೆದಿರುತ್ತೆ. ಇನ್ನೂ ಇವರಿಬ್ಬರೂ ರಿಲೇಷನ್ಶಿಪ್ನಲ್ಲಿ ಸೀರಿಯಸ್ ಆಗಿದ್ರಿಂದ ಮದುವೆ ಆಗಲು ನಿರ್ಧರಿಸಿ ತಮ್ಮ  ತಮ್ಮ ಮನೆಯವರನ್ನ ಒಪ್ಪಿಸಿರುತ್ತಾರೆ. ಮದುವೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುತ್ವೆ ಆದ್ರೆ ಇದೇ ಟೈಂನಲ್ಲಿ ವಿಕಾಸ್ ಒಂದು ಎಡವಟ್ಟು ಮಾಡಿಬಿಡ್ತಾನೆ. 

ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!

ಯಾವಾಗ ಪ್ರತಿಭಾ ತನ್ನ ಸ್ನೇಹಿತರ ಬಳಿ ಹೋಗಿ ವಿಕಾಸ್ ಹೀಗೆ ಮಾಡಿಬಿಟ್ಟ ಅಂತ ಹೇಳ್ತಾಳೋ ಆಕೆಯ ಸ್ನೇಹಿತರು ವಿಕಾಸನಿಗೆ ಬುದ್ಧಿ ಕಲಿಸುವ ನಿರ್ಧಾರ ಮಾಡ್ತಾರೆ. ಆತ ಮಾಡಿರುವ ತಪ್ಪಿಗೆ ಪಾಠ ಕಲಿಸಬೇಕು ಅಂತ ಹೇಳಿ ಮಾರನೇ ದಿನ ವಿಕಾಸ್ನನ್ನ ಪ್ರತಿಭಾ ಮೂಲಕ ತಮ್ಮ ಮನೆಗೆ ಕರೆಸಿಕೊಳ್ತಾರೆ. ಚೆನ್ನಾಗಿ ಆತನಿಗೆ ಹಲ್ಲೆ ಮಾಡ್ತಾರೆ. ಆದ್ರೆ ಇವರು ಕೊಟ್ಟ ಏಟಿಗೆ ವಿಕಾಸನ ಪ್ರಾಣ ಪಕ್ಷಿಯೇ ಹಾರಿಹೋಗಿಬಿಡುತ್ತೆ.

25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
Read more