Renukaswamy Murder Case: ಶಿಕ್ಷೆಯಾಗಲು ಡಿಜಿಟಲ್ ಎವಿಡೆನ್ಸ್ ಅಷ್ಟೇ ಸಾಕಾ..? ಈ ಕೇಸ್‌ನಲ್ಲಿ ಪ್ರತ್ಯಕ್ಷ ಸಾಕ್ಷಿಗಳೇ ಇಲ್ವಾ ?

Jun 18, 2024, 4:32 PM IST

ಠಾಣೆಯಲ್ಲಿ ಕೂತು ಮೊಸರನ್ನ ತಿನ್ನುತ್ತಿದ್ರೂ ಇನ್ನೂ ಈ ಡಿ ಗ್ಯಾಂಗ್‌ನ ಜಂಬ ಮಾತ್ರ ಕಡಿಮೆಯಾಗಿಲ್ಲ. ಕ್ಯಾಮರಾ ನೋಡಿ ಸ್ಮೈಲ್ ಮಾಡೋರು ಒಂದು ಕಡೆ ಆದ್ರೆ, ಮುಖ ತಿರುವುವರು ಮತ್ತೊಂದು ಕಡೆ. ಇವರನ್ನೆಲ್ಲಾ ನೋಡ್ತಿದ್ರೆ ಇವರಿಗೆಲ್ಲಾ ಠಾಣೆಯಲ್ಲಿ ರಾಜಾತೀತ್ಯ ಸಿಗ್ತಿದ್ಯಾ ಅನ್ನಿಸದೇ ಇರದು. ಆದ್ರೆ ಇನ್‌ಸೈಡ್ ಸ್ಟೋರಿ ಬೇರೇನೇ ಇದೆ. ದರ್ಶನ್ (Darshan) ಗ್ಯಾಂಗ್‌ನ ಸ್ಮೈಲ್‌ಗೆ ಫುಲ್ ಸ್ಟಾಪ್ ಇಡಲು ಅಧಿಕಾರಿಗಳು 15 ಪಕ್ಕಾ ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ. ಈ 15 ಸಾಕ್ಷಿಗಳು ದರ್ಶನ್ ಮತ್ತು ಪಟಾಲಂನ ಜೈಲಲ್ಲೇ ಕೊಳೆಯುವಂತೆ ಮಾಡುವ ತಾಕತ್ ಇದೆ. ಈ ಸಾಕ್ಷಿಗಳ ಪಟ್ಟಿ ನೋಡ್ತಿದ್ರೇನೇ ಗೊತ್ತಾಗಿಬಿಡುತ್ತೆ ಡಿಗ್ಯಾಂಗ್ ತಪ್ಪಿಸಿಕೊಳ್ಳೋಕೆ ಸಾಧ್ಯಾನೇ ಇಲ್ಲ ಅಂತ. ಆದ್ರೆ ದರ್ಶನ್ ಪಟಾಲಂ ವಿರುದ್ಧ ಇರುವ ಸಾಕ್ಷ್ಯಗಳು ಇವಿಷ್ಟೇ ಅಲ್ಲ. ಸಾಕಷ್ಟು ಡಿಜಿಟಲ್ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನ ಪೊಲೀಸರು ಕಲೆ ಹಾಕ್ತಿದ್ರೂ. ಈ ಕೇಸ್ ಸ್ಟ್ರಾಂಗ್ ಮಾಡಲು ಅದೇ ಅಧಿಕಾರಿಗಳು ಇನ್ನಷ್ಟು ಸಾಕ್ಷಿಗಳನ್ನ ಕಲೆ ಹಾಕ್ತಿದ್ದಾರೆ ಅದರಲ್ಲು ಬಹುಮುಖ್ಯವಾದುದ್ದು, ರೇಣುಕಾಸ್ವಾಮಿಯ ಮೊಬೈಲ್ ಫೋನ್ ಮತ್ತು ಆತ ಧರಿಸಿದ್ದ ಬಟ್ಟೆ. ಆವೆರೆಡು ಸಿಕ್ಕಿಬಿಟ್ರೆ ಡಿ ಗ್ಯಾಂಗ್ ವಿರುದ್ಧದ ಸಾಕ್ಷ್ಯಗಳ ಪಟ್ಟಿ ಕಂಪ್ಲೀಟ್ ಆಗಿಬಿಡುತ್ತೆ. ಇತ್ತ ಪೊಲೀಸರು ಈ ಪರಿ ತನಿಖೆ ನಡೆಸುತ್ತಿದ್ರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗಂಡನನ್ನ ಸೇಫ್ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಆತ್ಮಹತ್ಯೆ ಮಾಡಿಕೊಂಡು ಸತ್ತನಾ ಶ್ರೀಧರ್ ? ಅನುಮಾನ ಹುಟ್ಟಿಸಿದ ಡೆತ್‌​ನೋಟ್..ಸಹಿ ಹಾಕಿದ ಮೇಲೂ ಹೆಬ್ಬೆಟ್ಟು ಹಾಕಿದ್ಯಾಕೆ ?