ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣ: ತನಿಖೆ ಬಳಿಕ ಹಿಂದಿನ ಎಂಡಿ ಬಂಧಿಸಿದ ಸಿಐಡಿ

ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣ: ತನಿಖೆ ಬಳಿಕ ಹಿಂದಿನ ಎಂಡಿ ಬಂಧಿಸಿದ ಸಿಐಡಿ

Published : May 28, 2024, 12:44 PM IST

ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣ
ಕಾಮಗಾರಿ ನಡೆಯದ್ದನ್ನ ಖಚಿತಪಡಿಸಿಕೊಂಡ ಸಿಐಡಿ 
ಹಣ ಲೂಟಿ ಹೊಡೆದಿರುವುದು ಮೇಲ್ನೋಟಕ್ಕೆ ಸಾಬೀತು 

ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣದ(Devaraj Aras Truck Terminal case) ತನಿಖೆಯ ಬಳಿಕ ಹಿಂದಿನ ಎಂಡಿಯನ್ನ ಸಿಐಡಿ(CID) ಪೊಲೀಸರು ಬಂಧಿಸಿದ್ದಾರೆ. ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿ ಬಿಗ್ ಇಂಪ್ಯಾಕ್ಟ್‌(Suvarna News Cover Story Big Impact) ಆಗಿದೆ. ಕಾಮಗಾರಿ ನಡೆಸದೇ ಹಣ ಲೂಟಿ ಹೊಡೆದಿದ್ದ ಹಗರಣ ಇದಾಗಿದೆ. 48 ಕೋಟಿ ರೂಗಳ ನಕಲಿ ಕಾಮಗಾರಿ ಮಾಡಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಹಗರಣದ ಸಂಪೂರ್ಣ ವರದಿಯನ್ನು ಕವರ್ ಸ್ಟೋರಿ ತಂಡ ಮಾಡಿತ್ತು. ವರದಿ ಅನ್ವಯ ವಿಲ್ಸನ್ ಗಾರ್ಡನ್ ಠಾಣೆಗೆ ಎಂಡಿ ಶಿವಪ್ರಕಾಶ್ ದೂರು ನೀಡಿದ್ದು, ಹಗರಣ ಪ್ರಕರಣವನ್ನ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು. ತನಿಖೆಯ ಬಳಿಕ ಹಿಂದಿನ ಎಂಡಿ  ಎಸ್. ಶಂಕರಪ್ಪನನ್ನು ಬಂಧಿಸಲಾಗಿದೆ. 2021 ಮತ್ತು 2022 ರ ಅವಧಿಯಲ್ಲಿ ಎಂಡಿಯಾಗಿದ್ದ ಎಸ್ ಶಂಕರಪ್ಪ, ಕಾಮಗಾರಿ ಮಾಡದೇ 802 ಫೈಲ್ ಸೃಷ್ಟಿಸಿದ್ದ ಆರೋಪ ಕೇಳಿಬಂದಿದೆ. ಹಿಂದಿನ ಅಧ್ಯಕ್ಷ ಡಿ ಎಸ್ ವೀರಯ್ಯ ಅವಧಿಯಲ್ಲಿ ನಡೆದಿದ್ದ ಹಗರಣ ಇದಾಗಿದೆ. ಮೂರು ನಕಲಿ ಕಂಪನಿಗಳನ್ನ ಸೃಷ್ಟಿಸಿ ಅಧಿಕಾರಿಗಳು ಹಣ ದೋಚಿದ್ದರು. ಗುತ್ತಿಗೆದಾರರ ಅಕೌಂಟ್‌ಗಳಿಂದ ಅಧಿಕಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಡಿವೈಎಸ್ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ಬಂಧನ ಮಾಡಲಾಗಿದ್ದು, ಶಂಕರಪ್ಪ ಬಂಧಿಸಿ ಮೆಡಿಕಲ್ ಟೆಸ್ಟ್‌ಗೆ ಸಿಐಡಿ ಹಾಜರುಪಡಿಸಿದೆ. 

ಇದನ್ನೂ ವೀಕ್ಷಿಸಿ:  ಬೀಜಗಳ ಬೆಲೆ ಏರಿಕೆ! ತತ್ತರಿಸಿ ಹೋಗುತ್ತಿದ್ದಾನೆ ಅನ್ನದಾತ ..ರೈತರಿಗೆ ಗಾಯದ ಮೇಲೆ ಬರೆ ಎಳಿತಾ ಸರ್ಕಾರ?

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!