ಪ್ರೀತಿ ಮಾಡಿದ ತಪ್ಪಿಗೆ ವಯಸ್ಸಲ್ಲದ ವಯಸ್ಸಲ್ಲಿ ಅಪ್ರಾಪ್ತ ಬಾಲಕಿಯು ಮಸಣ ಸೇರಿದ್ದಾಳೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಹುಚ್ಚು ಕೋಡಿ ಮನಸ್ಸು 16ರ ವಯಸ್ಸು ಅನ್ನೋ ತರ ಆ ಹುಡುಗಿಗೆ ಇನ್ನೂ 16 ಕೂಡ ಆಗಿರಲಿಲ್ಲ. ಸರಿಯಾಗಿ ಜಗತ್ತು ಅಂದ್ರೆ ಏನು ಅನ್ನೋದೇ ಗೊತ್ತಿಲ್ಲ. ಆ ವಯಸ್ಸಿಗೆ ಪ್ರೀತಿ ಅನ್ನೋ ಬಲೆಗೆ ಬಿದ್ದುಬಿಟ್ಲು. ಆದ್ರೆ ಅದೇ ಪ್ರೀತಿ ಅವಳ ಅಂತ್ಯಕ್ಕೆ ಕಾರಣವಾಗಿದೆ. ಅವತ್ತೊಂದು ದಿನ ತನ್ನ ಸ್ನೇಹಿತರ ಜೊತೆ ಆಕೆ ಪಿಕ್ನಿಕ್'ಗೆ ಹೋಗಿದ್ಲು ಅಷ್ಟೇ. ಪಿಕ್ನಿಕ್'ಗೆ ಹೋಗಿದ್ದೇ ತಪ್ಪಾಗಿಬಿಡ್ತು. ಅವಳ ಮನೆಹಾಳ್ ಲವ್ವರ್ ಅವಳ ಮೇಲೆ ಅನುಮಾನ ಪಡೋದಕ್ಕೆ ಶುರು ಮಾಡಿಬಿಟ್ಟಿದ್ದ ಪರಿಣಾಮ ಇವತ್ತು ತನ್ನ ಪ್ರೀತಿ ಪ್ಯೂರ್ ಅಂತ ಪ್ರೂವ್ ಮಾಡಿಕೊಳ್ಳಲು ತನ್ನ ಉಸಿರನ್ನೇ ಚೆಲ್ಲಿಬಿಟ್ಟಿದ್ದಾಳೆ. ಹೀಗೆ ವಯಸ್ಸಲ್ಲದ ವಯಸಲ್ಲಿ ಪ್ರೀತಿಯ ಗುಂಗಿನಲ್ಲಿ ಬಿದ್ದು ನಂತರ ಅದೇ ಪ್ರೀತಿಯಿಂದ ತನ್ನ ಜೀವನವನ್ನು ಅಂತ್ಯವಾಗಿಸಿಕೊಂಡ ಅಪ್ರಾಪ್ತ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ.
ನಕಲಿ ನಂಬರ್ ಪ್ಲೇಟ್ ಗೋಲ್ಮಾಲ್: ಟ್ರಾಫಿಕ್ ದಂಡ ಪಾವತಿಗೆ ಬಂದವರಿಗೆ ಶಾಕ್