May 24, 2024, 1:56 PM IST
ಪಶ್ಚಿಮ ಬಂಗಾಳ(West Bengal) ಮೂಲದ ಕುಟುಂಬದ ಮೇಲೆ ಮತಾಂತರದ ಆರೋಪ(Conversion Allegation) ಕೇಳಿಬಂದಿದ್ದು, ಮಕ್ಕಳನ್ನ(Children) ಮತಾಂತರ ಮಾಡಿ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ 14 ವರ್ಷಗಳ ಹಿಂದೆ ಮತಾಂತರ ಮಾಡಿರುವ ಆರೋಪ ಕೇಳಿಬಂದಿದೆ. ಒಂದೂವರೆ ವರ್ಷದ ಹಿಂದೆ ಇಬ್ಬರು ಮಕ್ಕಳನ್ನು ಮಹಿಳೆ ಕರೆದೊಯ್ದಿದ್ದರು. ಓದಿಸುವುದಾಗಿ ಮಂಜು ಎಂಬ ಮಹಿಳೆ(Woman) ಕರೆದೊಯ್ದಿದ್ದರು. ಕಮಲ ಎಂಬುವವರ ಮಕ್ಕಳನ್ನ ಕರೆದೊಯ್ದಿದ್ದು, ಪೋಷಕರ ಒಪ್ಪಿಗೆ ಇಲ್ಲದಿದ್ರೂ ಮಕ್ಕಳನ್ನ ಕರೆದೊಯ್ದಿದ್ದರು ಎನ್ನಲಾಗ್ತಿದೆ. 18 ವರ್ಷದ ಮಗಳು ಹಾಗೂ 5 ವರ್ಷದ ಬಾಲಕಿಯನ್ನು ಕರೆದೊಯ್ಯಲಾಗಿದೆಯಂತೆ. ಕಳೆದ ನಾಲ್ಕು ತಿಂಗಳಿನಿಂದ ಮಕ್ಕಳ ಜೊತೆ ಮಾತನಾಡಿಸಿರಲಿಲ್ಲ. ಇದೀಗ ಮಕ್ಕಳು ಬೇಕು ಎಂದು ತಾಯಿ ಕಮಲ ಪಟ್ಟು ಹಿಡಿದಿದ್ದಾರೆ. ವಿಧಾನಸೌಧ ಪೊಲೀಸರ ನೆರವಿನಿಂದ ಮಕ್ಕಳನ್ನ ಪೋಷಕರು ಪತ್ತೆ ಹಚ್ಚಿದ್ದಾರೆ. 3 ಲಕ್ಷ ಕೊಟ್ರೆ ಮಕ್ಕಳನ್ನ ಬಿಡುವುದಾಗಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಸದ್ಯ ಅಪೇಕ್ಷಾ ಎಂಬ NGO ವಶದಲ್ಲಿರುವ ಇಬ್ಬರು ಮಕ್ಕಳು, ಮಕ್ಕಳನ್ನು ಎನ್ ಜಿ ಓ ವಶಕ್ಕೆ ಒಪ್ಪಿಸಿರುವ ಪೊಲೀಸರು.
ಇದನ್ನೂ ವೀಕ್ಷಿಸಿ: ಅಪಘಾತದಲ್ಲಿ ಕಾಲು ಕಳೆದುಕೊಂಡಾಕೆ ಈಗ ಉದ್ಯಮಿ ! ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಪ್ರಶಂಸೆ