ನಗ್ನ ವೀಡಿಯೋ ತೋರಿಸಿ ಹನಿಟ್ರ್ಯಾಪ್! ತಾಯಿ-ಮಗಳು & ಗ್ಯಾಂಗ್‌ ಅರೆಸ್ಟ್

ನಗ್ನ ವೀಡಿಯೋ ತೋರಿಸಿ ಹನಿಟ್ರ್ಯಾಪ್! ತಾಯಿ-ಮಗಳು & ಗ್ಯಾಂಗ್‌ ಅರೆಸ್ಟ್

Published : Aug 18, 2021, 08:56 PM ISTUpdated : Aug 19, 2021, 12:20 PM IST

* ಕಷ್ಟದ ದಾರಿ ಹೇಳಿ, ಸುಖದ ಆಸೆ ತೋರಿಸಿ, ಭಯ ಹುಟ್ಸಿ ಹಣ ಪೀಕ್ತಿದ್ದ ಖತರ್ನಾಕ್ ಗ್ಯಾಂಗ್ 
* 2 ಲಕ್ಷಕ್ಕೂ ಅಧಿಕ ಕ್ಯಾಶ್. 17 ಮೊಬೈಲ್, 24 ಸಿಮ್ ಕಾರ್ಡ್, ಲಕ್ಷಾಂತರ ಮೌಲ್ಯದ ಆಭರಣ ವಶ
* ನಗ್ನ ವೀಡಿಯೋ ಮಾಡಿ ಹನಿಟ್ರ್ಯಾಪಿಂಗ್ ಮೂಲಕ  ಹಣ ಪೀಕುತ್ತಿದ್ದ ಗ್ಯಾಂಗ್‌ನಲ್ಲಿ ತಾಯಿ-ಮಗಳು!
* ಏಕಾಂತದಲ್ಲಿರುವಾಗ ಎಂಟ್ರಿ ಕೊಟ್ಟು 'ಗ್ರಾಹಕ'ರನ್ನು ವಶಕ್ಕೆ ಪಡೆಯುತ್ತಿದ್ದ ನಕಲಿ ಪೊಲೀಸರು! 

ಚಿಕ್ಕಮಗಳೂರು(ಆ. 18)  ಸಾಲಾಗಿ ನಿಂತಿರೋ ಐದು ವಾಹನಗಳು. ಎರಡು ಲಕ್ಷಕ್ಕೂ ಅಧಿಕ ಕ್ಯಾಶ್. 17 ಮೊಬೈಲ್. 24 ಸಿಮ್ ಕಾರ್ಡ್. ಲಕ್ಷಾಂತರ ಮೌಲ್ಯದ ಗೋಲ್ಡ್ ಅಂಡ್ ಸಿಲ್ವರ್. ಸ್ಟೇಷನ್ ಮುಂದಿರೋ ಇವನ್ನೆಲ್ಲಾ ನೋಡಿ ಆಶ್ಚರ್ಯಕ್ಕೀಡಾಗಿರೋ ಕಾಫಿನಾಡ ಖಾಕಿಗಳು. ಇದ್ನೆಲ್ಲಾ ಸೀಝ್ ಮಾಡಿರೋದು ಚಿಕ್ಕಮಗಳೂರು ಹಣ ಪೀಕ್ತಿದ್ದ ಖತರ್ನಾಕ್ ಗ್ಯಾಂಗ್‍ನಿಂದ. ಈ ತಂಡದಲ್ಲಿ ಲೇಡಿಸ್ ಅಂಡ್ ಜೆಂಟ್ಸ್ ಎಲ್ಲರೂ ಇದ್ದಾರೆ. ಇನ್ನೂ ಶಾಕಿಂಗ್ ಅಂದ್ರೆ ತಾಯಿ-ಮಗಳು ಇದ್ದಾರೆ. ಹನಿಟ್ರ್ಯಾಪ್ ದಂಧೆ ಮಾಡ್ತಿದ್ದ ಈ ತಂಡ ಪುರುಷರನ್ನ ಪುಸಲಾಯಿಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ
ಮಾಡ್ಕೊಂಡು ಯಾಮಾರಿಸ್ತಿದ್ರು.

ಏಕಾಂತದಲ್ಲಿರುವಾಗ ಎಂಟ್ರಿ ಕೊಡೋ ಯುವಕರು ಪೊಲೀಸರೆಂದು ಹೇಳಿ ಹೆದರಿಸ್ತಿದ್ರು. ಇದು ವೇಶ್ಯಾಗೃಹ. ಎಫ್‍ಐಆರ್ ಹಾಕ್ತೀವಿಅಂತ ಅವಾಜ್ ಹಾಕ್ತಾರೆ. ಸ್ಪಾಟ್ ಸೆಟ್ಲ್‍ಮೆಂಟ್‍ಗೆ ಆಫರ್ ಕೊಡ್ತಾರೆ. ವಿಷ್ಯ ಹೊರಬಂದ್ರೆ ಮರ್ಯಾದೆ ಅಂತ ಕೇಳಿದಷ್ಟು ಹಣ ಕೊಟ್ಟು ಮನೆ ಸೇರ್ತಿದ್ರು ಮೋಸಕ್ಕೊಳಗಾದವರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ನಿಮ್ಮ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ನಿಮ್ಮ ಕುಟುಂಬದವರಿಗೂ ಕಳಿಸುತ್ತೇವೆಂದು ಹೆದರಿಸುತ್ತಿದ್ರು. ಇದರಿಂದ ಬೇಸತ್ತ ವ್ಯಕ್ತಿಗಳು ಖಾಕಿಗೆ ವಿಚಾರ ಮುಟ್ಟಿಸಿದಾಗ ರಿಯಲ್ ಪೊಲೀಸರು 13 ಜನರನ್ನ ಅಂದರ್ ಮಾಡಿದ್ದಾರೆ. 

ಫ್ರಾಕ್, ಸ್ಕರ್ಟ್ ಯುವತಿಯರೇ ಟಾರ್ಗೆಟ್,, ಶೂ ಲೇಸ್ ಕಟ್ಟುವಂತೆ ನಟಿಸಿ ಕಚಡಾ ಕೆಲಸ!

ಈ ಗ್ಯಾಂಗ್ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದದ್ದು ಮಧ್ಯ ವಯಸ್ಕ ಹಾಗೂ ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನಷ್ಟೆ. ಅವರ ಪರ್ಸನಲ್ ಡೇಟಾವನ್ನ ಕಲೆಹಾಕಿ ಸೈಲೆಂಟಾಗಿ ಹನಿಟ್ರಾಪ್ ದಂಧೆಗೆ
ಕೆಡವಿಕೊಳ್ತಿದ್ರು. ವಿಷಯ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಚರಣೆ ನಡೆಸಿದ ಕಾಫಿನಾಡ ನಗರ ಖಾಕಿಗಳು 6 ಗಂಡಸರು, 7 ಹೆಂಗಸರು ಸೇರಿದಂತೆ 13 ಜನರನ್ನ ಅಂದರ್ ಮಾಡಿದ್ದಾರೆ. ಬಂಧಿತರಿಂದ 2 ಲಕ್ಷದಷ್ಟು ಹಣ, 5 ಕಾರುಗಳು, ಮೊಬೈಲ್, ಸಿಮ್, ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಿರಾತಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸುಲಭವಾಗಿ ವಾಮಮಾರ್ಗದಿಂದ ಹಣ ಮಾಡುವುದೇ ಈ ಗ್ಯಾಂಗಿನ ಗುರಿಯಾಗಿತ್ತು. ಆದರೆ, ಕಾಫಿನಾಡ ಪೊಲೀಸರು ಕಷ್ಟ ಹೇಳ್ಕೊಂಡು ಸುಖದ ಹೆಸರಲ್ಲಿ ಭಯ ಹುಟ್ಟಿಸ್ತಿದ್ದವರ ಹೆಡೆಮುರಿ ಕಟ್ಟಿ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. 

 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!